ರಾಯಚೂರು

23ರಿಂದ ಹರಿದಾಸ ವೈಭವ ಸಂಗೀತ ಕಾರ್ಯಕ್ರಮ

Published On :

ಗುಲ್ಬರ್ಗ: ಹರಿದಾಸ ಸಾಹಿತ್ಯ ವಿಚಾರ ವಾಹಿನಿ ವೇದಿಕೆ ಹಾಗೂ ಸ್ವರಮಾಧುರಿ ಸಂಗೀತ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಜೂ.23 ಹಾಗೂ 24ರಂದು ಎರಡು ದಿನಗಳ ಕಾಲ ಸಂಜೆ 6 ಗಂಟೆಯಿಂದ ನೂತನ ವಿದ್ಯಾಲಯದ ಸಂಗಮೇಶ್ವರ ಸಭಾಗೃಹದಲ್ಲಿ ಹರಿದಾಸ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಸಂಗೀತಗಾರ ಅನಂತ ಕುಲಕರ್ಣಿ ಬಾಗಲಕೋಟೆ ಹಾಗೂ ಸಂಗೀತ ಕಾಖಂಡಕಿ ಮುಖ್ಯ ಸಂಗೀತಗಾರರಾಗಿ ಆಗಮಿಸಲಿದ್ದಾರೆ. ಇವರೊಂದಿಗೆ ಸ್ಥಳೀಯ ಉದಯೋನ್ಮುಖ ಸಂಗೀತಗಾರರಿಗೆ ವೇದಿಕೆ ಒದಗಿಸಲಾಗುತ್ತಿದೆ. ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, ಹಿರಿಯ ಸಂಗೀತ ಕಲಾವಿದರಿಗೆ ಹರಿದಾಸ ಸಂಗೀತ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಳೆದ ಸಲ ಈ ಪ್ರಶಸ್ತಿಗೆ ಖ್ಯಾತ ಸಂಗೀತಗಾರ ಪುತ್ತೂರು ನರಸಿಂಹನಾಯಕ ಅವರು ಆಯ್ಕೆಯಾಗಿದ್ದರು. ಇದೇ ಸಂದರ್ಭದಲ್ಲಿ ಡಾ. ಸ್ವಾಮಿರಾವ ಕುಲಕರ್ಣಿ ಬರೆದಿರುವ ಮಂತ್ರಾಲಯ ಮಠದಿಂದ ಪ್ರಕಟಗೊಂಡ ಶ್ರೀರಾಮದಾಸರ(ಪಿಂಜಾರ ಬಡೇಸಾಬ್) ಬದುಕು ಮತ್ತು ಸಾಹಿತ್ಯ, ಕೃತಿಯು ಬಿಡುಗಡೆಯಾಗಲಿದೆ ಎಂದು ಹರಿದಾಸ ಸಾಹಿತ್ಯ ವಿಚಾರ ವಾಹಿನಿ ವೇದಿಕೆ ಅಧ್ಯಕ್ಷ ಡಾ. ಸ್ವಾಮಿರಾವ ಕುಲಕರ್ಣಿ ಹಾಗೂ ಮಹೇಶಕುಮಾರ ಬಡಿಗೇರ ತಿಳಿಸಿದ್ದಾರೆ.
ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ; ಕ್ರಮಕ್ಕೆ ಎಐಡಿವೈಒ ಆಗ್ರಹ
ಗುಲ್ಬರ್ಗ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿರುವ ಭ್ರಷ್ಟಾಚಾರ ಆಘಾತಕಾರಿ. ವಾಹಿನಿಯೊಂದರ ಕಾರ್ಯಾಚರಣೆಯಿಂದಾಗಿ ಬಹಿರಂಗಗೊಂಡಿರುವ ವ್ಯವಸ್ಥೆಯೊಳಗಿನ ಭ್ರಷ್ಟತೆಯು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭ್ರಮನಿರಸನವನ್ನುಂಟು ಮಾಡಿದೆ ಎಂದು ಎಐಡಿವೈಒ ಅಭಿಪ್ರಾಯಪಟ್ಟಿದೆ. ಕಠಿಣ ಪರಿಶ್ರಮದಿಂದ ತಯಾರಿ ನಡೆಸಿ, ಕೆಎಎಸ್ ಮತ್ತು ವರ್ಗ 1 ಮತ್ತು ವರ್ಗ 2ರ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಅಂಕ ಗಳಿಸಿದ ಅಭ್ಯರ್ಥಿಗಳು ಮೌಖಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಿರುವ ವೈಚಿತ್ರ್ಯಕ್ಕೆ ಇದೀಗ ಸಾಕ್ಷಿ ಸಮೇತ ಉತ್ತರ ಸಿಕ್ಕಿದೆ ಎಂದು ಜಿಲ್ಲಾ ಕಾರ್ಯದರ್ಶಿ ಮಹೇಶ ನಾಡಗೌಡ ಆರೋಪಿಸಿದ್ದಾರೆ. ಹೊಸ ಸರ್ಕಾರ ಬಂದ ಕೂಡಲೇ ಹೊರಬಂದಿರುವ ಈ ವಿದ್ಯಮಾನದಿಂದ ಸರ್ಕಾರವು ಎಚ್ಚೆತ್ತುಕೊಂಡು, ಕಳಂಕದಿಂದ ಮುಕ್ತವಾಗಬೇಕಾದರೆ, ಕೂಡಲೇ ನಿಷ್ಪಕ್ಷಪಾತವಾದ ತನಿಖೆಯನ್ನು ನಡೆಸಿ, ತಪ್ಪಿತಸ್ಥರನ್ನು ಗುರುತಿಸಿ, ತ್ವರಿತವಾಗಿ ಅವರಿಗೆ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.