ರಾಯಚೂರು

ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷರಿಗೆ ಸನ್ಮಾನ

Published On :

ಸಿಂಧನೂರು: ಅವಿರತ ಶ್ರಮ, ಹಿರಿಯ ಕಿರಿಯ ವಕೀಲರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಅವರ ಸಾಮಾಜಿಕ ಸೇವಾ ಕಾರ್ಯದ ಫಲವಾಗಿ 2ನೇ ಬಾರಿಗೆ ನ್ಯಾಯ ವಾದಿಗಳ ಸಂಘದ ಅಧ್ಯಕ್ಷರಾಗಿ ಕೆ.ಭೀಮನಗೌಡ ವಕೀಲರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಾಯು ವಿಹಾರ ಬಳಗದ ಹುಲಗಯ್ಯ ಬಣ್ಣಿಸಿದರು.
ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವಾಯುವಿಹಾರ ಬಳಗದಿಂದ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ನ್ಯಾಯವಾದಿಗಳ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಭೀಮನಗೌಡರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಭೀಮನಗೌಡರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸರಳ, ಸ್ನೇಹ ಜೀವಿಯಾಗಿರುವ ಗೌಡರು, ದಕ್ಷತೆಯಿಂದ ಕಾರ್ಯನಿರ್ವಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ ವಕೀಲರು ಮಾತನಾಡಿ, ವಾಯು ವಿಹಾರ ಸಂಘವು ಜಾತಿ, ಪಕ್ಷ ಮೀರಿ ಸಮಾನ ಮನಸ್ಕರ ತಂಡವಾಗಿದೆ. ನನ್ನನ್ನು ಆತ್ಮೀಯವಾಗಿ ಸನ್ಮಾನಿಸುತ್ತಿರುವದು. ಸದಾ ನೆನಪುಳಿಯುವಂಥದ್ದು, ನಿಮ್ಮಯ ಸೇವೆಗೆ ಸದಾ ಸಿದ್ಧ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಪುರಾಣಮಠ ವಹಿಸಿದ್ದರು. ವಾಯು ವಿಹಾರ ಬಳಗದ ನಗರಸಭಾ ಸದಸ್ಯ ನಾಗಪ್ಪ, ಬಸಣ್ಣ ವಕೀಲರು, ಈರೇಶ ಇಲ್ಲೂರು ವಕೀಲರು, ಅಮರೇಶ ಹರೇಟನೂರು, ರಮೇಶ ಅಗ್ನಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.