ಕತ್ತಲಲ್ಲಿ ದಿನದೂಡುವ ದೊಡ್ಡಿಗಳ ಜನತೆ
ಲಿಂಗಸ್ಗೂರು: ತಾಲೂಕಿನ ಗುರುಗುಂಟಾ ಗ್ರಾಪಂ ವ್ಯಾಪ್ತಿಯ ಕೆಲ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸುವ ಪರಿವರ್ತಕ ಸುಟ್ಟು ಸುಮಾರು ಮೂರು ತಿಂಗಳು ಗತಿಸಿದೆ. ಇದರಿಂದ ದೊಡ್ಡಿಗಳ ಜನತೆ ಕತ್ತಲಲ್ಲಿ ದಿನದೂಡುವಂತಾಗಿದೆ.
ಗುರುಗುಂಟಾ ಗ್ರಾಪಂ ವ್ಯಾಪ್ತಿಯ ಲೇಕಿಂಚೇರಿ ಹತ್ತಿರದ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಹೊಂದಿಕೊಂಡಿರುವ ದಿವಾಣರದೊಡ್ಡಿ, ಬಡಿಗೇರದೊಡ್ಡಿ, ಪೂಜಾರಿದೊಡ್ಡಿ ಹಾಗೂ ಕಲಾಳೇರ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪರಿವರ್ತಕ ಸುಟ್ಟು ಮೂರು ತಿಂಗಳು ಗತಿಸಿದೆ. ಇದರಿಂದ ಜನತೆ ಕತ್ತಲಲ್ಲಿ ದಿನ ಕಳೆಯುವಂತಾಗಿದ್ದು, ಅಲ್ಲದೆ ಶಾಲಾ ಮಕ್ಕಳು ಸೇರಿದಂತೆ ದೊಡ್ಡಿಗಳ ಜನ-ಜಾನುವಾರುಗಳು ಕುಡಿಯುವ ನೀರಿನ ತೊಂದರೆ ಎದುರಿಸುವಂತಾಗಿದೆ.
ಕ್ರಮ ಕೈಗೊಂಡಿಲ್ಲ: ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮನವಿ ಮಾಡಿದ ಪ್ರಯುಕ್ತ ಇಲಾಖೆ ಅಧಿಕಾರಿಗಳು ಸುಟ್ಟ ಪರಿವರ್ತಕವನ್ನು ತೆಗೆದುಕೊಂಡು ಹೋಗಿ ಮೂರು ತಿಂಗಳು ಗತಿಸಿದರೂ ಹೊಸ ಪರಿವರ್ತಕ ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹೊಸ ಪರಿವರ್ತಕ ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲವೆಂದು ದಿವಾಣರ ದೊಡ್ಡಿಯ ಯುವಮುಖಂಡ ಚಂದ್ರಶೇಖರ ನಾಯಕ ಒತ್ತಾಯಿಸಿದ್ದಾರೆ.
ಅಲ್ಲದೆ ಗಡ್ಡೇರದೊಡ್ಡಿ ಹಾಗೂ ಬಡಿಗೇರದೊಡ್ಡಿ ವ್ಯಾಪ್ತಿಯಲ್ಲಿ ಕೆಲವು ಕಬ್ಬಿಣದ ವಿದ್ಯುತ್ ಕಂಬಗಳಿದ್ದು, ಅವುಗಳನ್ನು ತೆರವುಗೊಳಿಸಿ ಸಿಮೆಂಟಿನ ವಿದ್ಯುತ್ ಕಂಬಗಳನ್ನು ಹಾಕದೆ ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ತೋರಿದೆ. ಇದರಿಂದ ಕಬ್ಬಿಣದ ಕಂಬದ ಮೂಲಕ ವಿದ್ಯುತ್ ಹರಿದು ಜನ-ಜಾನುವಾರುಗಳಿಗೆ ಪ್ರಾಣ ಭೀತಿ ಎದುರಾಗಿದೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವ ಜೊತೆಗೆ ಕಬ್ಬಿಣದ ಕಂಬಗಳನ್ನು ತೆರವುಗೊಳಿಸಿ ಸಿಮೆಂಟ್ ಕಂಬಗಳನ್ನು ಹಾಕಬೇಕು. ಇಲ್ಲದಿದ್ದರೆ ದೊಡ್ಡಿಗಳ ಜನತೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

