ಅಂಗಡಿ ಮೇಲೆ ತಹಸೀಲ್ದಾರ್ ದಿಢೀರ್ ದಾಳಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜೂ.14
ರಾಜ್ಯ ಸರ್ಕಾರ ಗುಟ್ಕಾ ಮಾರಾಟ ನಿಷೇಧ ಜಾರಿಗೊಳಿಸಿದ ಪ್ರಯುಕ್ತ ವ್ಯಾಪಾರಸ್ಥರಲ್ಲಿ ಗುಟ್ಕಾ ಮಾರಾಟ ನಿಷೇಧ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ತಹಸೀಲ್ದಾರ್ ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ಕೈಗೊಂಡು ಗುಟ್ಕಾ ಪಾಕೀಟ್ಗಳನ್ನು ವಶಪಡಿಸಿಕೊಂಡಿತು.
ವ್ಯಾಪಾರಸ್ಥರಲ್ಲಿ ಜಾಗೃತಿ: ಪಟ್ಟಣದ ಬಸ್ ನಿಲ್ದಾಣ, ಮೇನ್ ಬಜಾರ್, ಹನುಮಾನ್ ಚೌಕ್, ಗಡಿಯಾರ ಚೌಕ್ ಏರಿಯಾಗಳಲ್ಲಿ ಹಾಗೂ ತಹಸೀಲ್ದಾರ್ ಕಚೇರಿ ಆವರಣ ಸೇರಿದಂತೆ ವಿವಿಧ ಏಜೆಂಟರ ಅಂಗಡಿ, ಕಿರಾಣಿ ಅಂಗಡಿ, ಹೋಟೆಲ್, ಪಾನ್ಶಾಪ್ಗಳ ಮೇಲೆ ದಾಳಿ ನಡೆಸಿ ಗುಟ್ಕಾ ಮಾರಾಟ ನಿಷೇಧ ಕುರಿತು ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ದಾಳಿ ನಡೆಸಿದ ಅಂಗಡಿಗಳಲ್ಲಿ ಪರಿಶೀಲನೆ ಕಾರ್ಯ ಕೈಗೊಂಡ ಸಂದರ್ಭದಲ್ಲಿ ದೊರೆತ ಗುಟ್ಕಾ ಪಾಕೀಟುಗಳನ್ನು ವಶಪಡಿಸಿಕೊಳ್ಳಲಾಯಿತು.
ಗುಟ್ಕಾ ವಶ: ತಹಸೀಲ್ದಾರ ಜಿ.ಎಸ್. ಮಹಾಜನ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಗುಟ್ಕಾ ಮಾರಾಟ ನಿಷೇಧ ಜಾರಿಗೊಳಿಸಿದೆ. ವ್ಯಾಪಾರಸ್ಥರು ಗುಟ್ಕಾ ಮಾರಾಟ ಮಾಡಬಾರದೆಂದು ಜಾಗೃತಿ ಮೂಡಿಸಲಾಗುತ್ತಿದೆ. ದಾಳಿ ನಡೆಸಿದ ಅಂಗಡಿಗಳ ಪರಿಶೀಲನೆ ಸಂದರ್ಭದಲ್ಲಿ ದೊರೆತ ಗುಟ್ಕಾ ಪಾಕೀಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ ಗಡಿಯಾರ ಚೌಕ್ ಹತ್ತಿರದ ವೆಂಕಟೇಶ್ವರ ಕಿರಾಣಿ ಅಂಗಡಿ, ಹನುಮಾನ್ ಚೌಕ್ ಹತ್ತಿರದ ಹುಲಿಗಾಂಬ ಏಜೆನ್ಸಿ, ರವಿತೇಜ ಕಿರಾಣಿ ಅಂಗಡಿ, ಬಸ್ ನಿಲ್ದಾಣ ಹತ್ತಿರದ ವಾಸಿಮ್ ಪಾಶಾ, ಎಂ.ಡಿ. ರಫೀ, ಮಹಮದ್ ಅಲಿ ಇವರ ಪಾನ್ ಶಾಪ್ಗಳಲ್ಲಿ ಗುಟ್ಕಾ ಪಾಕೀಟುಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆತಿವೆ.
ಸರ್ಕಾರ ಗುಟ್ಕಾ ಮಾರಾಟ ನಿಷೇಧ ಜಾರಿಗೊಳಿಸಿದ ಕುರಿತು ಪ್ರಥಮ ಹಂತದಲ್ಲಿ ವ್ಯಾಪಾರಸ್ಥರಿಗೆ ಗುಟ್ಕಾ ಮಾರಾಟ ಮಾಡಬಾರದೆಂದು ಜಾಗೃತಿ ಮೂಡಿಸಲಾಗುವುದು. ಆದೇಶ ಮೀರಿ ಅಕ್ರಮವಾಗಿ ಗುಟ್ಕಾ ಮಾರಾಟ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದರು. ತಂಡದಲ್ಲಿ ಆಹಾರ ನಿರೀಕ್ಷಕ ಕೆ.ಬಿ. ಕುಲ್ಕರ್ಣಿ, ಸರ್ವೆ ಇಲಾಖೆ ಅಧಿಕಾರಿ ಎಂ.ಜಿ. ಹಿರೇಮಠ, ಕಂದಾಯ ನಿರೀಕ್ಷಕ ಸೈಯದ್ ಅಕ್ತರ ಅಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

