ರಾಯಚೂರು

ಕಾರ ಹುಣ್ಣಿಮೆ; ಭಾರ ಎಳೆಯುವ ಸ್ಪರ್ಧೆ

Published On :

ಕ.ಪ್ರ. ವಾರ್ತೆ ,  ಸಿಂಧನೂರು ,  ಜೂ.22
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕಾರಹುಣ್ಣಿಮೆ ನಿಮಿತ್ತ ರೈತರಿಗಾಗಿ ಹಮ್ಮಿಕೊಂಡಿದ್ದ 2.1 ಟನ್ ಭಾರ ಎಳೆಯುವ ಎತ್ತುಗಳ ಸ್ಪರ್ಧೆಯಲ್ಲಿ ಉದ್ಬಾಳ (ಯು) ವೀರಭದ್ರಗೌಡರ ಎತ್ತುಗಳು ಪ್ರಥಮ ಸ್ಥಾನ ( 12ಗ್ರಾಂ. ಚಿನ್ನ) ಪಡೆದವು ಎಪಿಎಂಸಿ ಸಹಕಾರ್ಯದರ್ಶಿ ನರಸಿಂಹರೆಡ್ಡಿ ತಿಳಿಸಿದ್ದಾರೆ.
ದ್ವಿತೀಯ ಸ್ಥಾನ ಪಡೆದ ಸೈಯದ್ ಸಾಹೇಬ್ ಖ್ರಾ, ತೃತೀಯ ಸ್ಥಾನ ಪಡೆದ ಅವ್ವಮ್ಮ ಗಾಳಿ ಅವರ ಎತ್ತುಗಳು ಕ್ರಮವಾಗಿ 8ಗ್ರಾಂ. ಚಿನ್ನ ಮತ್ತು 100 ಗ್ರಾಂ. ಬೆಳ್ಳಿಯನ್ನು ಗೆದ್ದುಕೊಂಡವು.
1.5 ಟನ್ ಭಾರ ಎಳೆಯುವ ಸ್ಪರ್ಧೆಯಲ್ಲಿ ಬೊಮ್ಮನಾಳ ಗ್ರಾಮದ ಸುಲ್ತಾನಸಾಬ ಅವರ ಎತ್ತುಗಳು ಪ್ರಥಮ ಸ್ಥಾನ(10 ಗ್ರಾಂ. ಚಿನ್ನ), ಉದ್ಬಾಳ(ಯು)ದ ಬಸವರಾಜಪ್ಪಗೌಡ ಅವರ ಎತ್ತುಗಳು ದ್ವಿತೀಯ ಸ್ಥಾನ (6ಗ್ರಾಂ.ಚಿನ್ನ), ಸಿಂಧನೂರಿನ ಹೊನ್ನೂರ ಅಲಿಸಾಬ ಅವರ ಎತ್ತುಗಳು ತೃತೀಯ ಸ್ಥಾನ (50ಗ್ರಾಂ.ಬೆಳ್ಳಿ) ಪಡೆದುಕೊಂಡವು.
ಬಹುಮಾನಗಳು: 1 ಟನ್ ಭಾರ ಎಳೆಯುವ ಎತ್ತುಗಳ ಸ್ಪರ್ಧೆಯಲ್ಲಿ ಖಾಸಿಂಸಾಬ ಅವರ ಎತ್ತುಗಳು ಪ್ರಥಮ ( 5ಗ್ರಾಂ.ಚಿನ್ನ), ಬಸಣ್ಣ ಸುಕಾಲಪೇಟೆ ಅವರ ಎತ್ತುಗಳು ದ್ವಿತೀಯ ಸ್ಥಾನ (4ಗ್ರಾಂ.ಚಿನ್ನ) ಹಾಗೂ ಶರಣಪ್ಪ ಗುಂಜಳ್ಳಿ ಅವರ ಎತ್ತುಗಳು ತೃತೀಯ ಸ್ಥಾನ (50 ಗ್ರಾಂ. ಬೆಳ್ಳಿ) ಪಡೆದುಕೊಂಡವು.
ಒಂದು ಟನ್ ತೂಕದ ಕಲ್ಲನ್ನು ಒಂಟಿ ಎತ್ತಿನಿಂದ ಎಳೆಯುವ ಸ್ಪರ್ಧೆಯಲ್ಲಿ ಇಂದಿರಾನಗರದ ಮಹೆಬೂಬ ಪ್ರಥಮ (5ಗ್ರಾಂ. ಚಿನ್ನ), ಕೊಂಗನಹಟ್ಟಿಯ ಬಾಬುಸಾಬ ದ್ವಿತೀಯ (4ಗ್ರಾಂ. ಚಿನ್ನ), ನಬಿಸಾಬ ಕೋಟೆ ತೃತೀಯ (50ಗ್ರಾಂ. ಬೆಳ್ಳಿ) ಸ್ಥಾನ ಪಡೆದುಕೊಂಡರು.
ಕಲ್ಲಿನ ಗುಂಡು ಎತ್ತುವ ಸ್ಪರ್ಧೆಯಲ್ಲಿ ತಿಪ್ಪಣ್ಣ ಜವಳಗೇರಾ ಪ್ರಥಮ (125 ಗ್ರಾಂ. ಬೆಳ್ಳಿ), ನಾಗಪ್ಪ ಜವಳಗೇರಾ ದ್ವಿತೀಯ (75ಗ್ರಾಂ. ಬೆಳ್ಳಿ), ಅಹ್ಮದ್ ಸಾಬ್ ಜವಳಗೇರಾ, ತೃತೀಯ ಸ್ಥಾನ (50ಗ್ರಾಂ. ಬೆಳ್ಳಿ) ಪಡೆದುಕೊಂಡರು. 75 ಕೆ.ಜಿ. ತೂಕದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮೌನೇಶ ದಿದ್ದಗಿ ಪ್ರಥಮ (125ಗ್ರಾಂ.ಬೆಳ್ಳಿ), ಚನ್ನನಗೌಡ ಜವಳಗೇರಾ ದ್ವಿತೀಯ (75ಗ್ರಾಂ. ಬೆಳ್ಳಿ), ರವಿಗೌಡ ಮಲ್ಲದಗುಡ್ಡ, ತೃತೀಯ ಸ್ಥಾನ (50ಗ್ರಾಂ.ಬೆಳ್ಳಿ) ಪಡೆದುಕೊಂಡರು.
ಬಹುಮಾನ ವಿಜೇತರಿಗೆ ಎಪಿಎಂಸಿ ಅಧ್ಯಕ್ಷ ಸಣ್ಣಕರಿಯಪ್ಪ, ಉಪಾಧ್ಯಕ್ಷ ರಾಮಣ್ಣ, ನಿರ್ದೇಶಕರಾದ ಮಲ್ಲನಗೌಡ, ಎಂ.ಡಿ.ಫಾರುಕ್ ಸಾಬ್, ಗೌಡಪ್ಪಗೌಡ ಗುಂಜಳ್ಳಿ, ಬಸನಗೌಡ, ಮುಖಂಡ ಎನ್. ಭೀಮನಗೌಡ ಗೊರೇಬಾಳ, ಸಹಾಯಕ ಕಾರ್ಯದರ್ಶಿ ಕೆ. ನರಸಿಂಹ ರೆಡ್ಡಿ ಬಹುಮಾನಗಳನ್ನು ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.