ರಾಯಚೂರು

ಸಕಾಲಕ್ಕೆ ವೇತನ ಪಾವತಿಸಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ ,  ಲಿಂಗಸ್ಗೂರು ,  ಜೂ.23
ಅನುದಾನಿತ ಪ್ರೌಢಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಮಾಸಿಕ ವೇತನ ನೀಡುವಲ್ಲಿ ವಿಳಂಬವಾಗುತ್ತಿದ್ದು, ಸಕಾಲಕ್ಕೆ ಪಾವತಿ ಮಾಡಬೇಕೆಂದು ಒತ್ತಾಯಿಸಿ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಎ.ಬಿ. ಮಾಲಿಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಶರಣಬಸವೇಶ್ವರ ಹಟ್ಟಿ, ಅಮರೇಶ್ವರ ಲಿಂಗಸ್ಗೂರು, ದೇವರಾಜ ಅರಸು ಸ್ಮಾರಕ ಆನಾಹೊಸೂರು, ಸಜ್ಜಲಶ್ರೀ ಮುದಗಲ್, ಬಸವೇಶ್ವರ ಲಿಂಗಸ್ಗೂರು, ಮಹ್ಮದೀಯ ಉರ್ದು ಲಿಂಗಸ್ಗೂರು, ಟ್ಯಾಗೋರ ಸ್ಮಾರಕ ಗೆಜ್ಜಲಗಟ್ಟಾ, ನಿರುಪಾದಿ ಆಮದಿಹಾಳ, ಜೋಗಿನ ರಾಮಣ್ಣ ಮಸ್ಕಿ ಪ್ರೌಢಶಾಲೆಗಳಲ್ಲಿ  ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿ ಮಾಸಿಕ ವೇತನ ನೀಡುವಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಕೌಟುಂಬಿಕ ನಿರ್ವಹಣೆಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಅಸಮರ್ಪಕ ಕಾರ್ಯನಿರ್ವಹಣೆ ಕಾರಣ: ಸರ್ಕಾರಿ, ಅನುದಾನಿತ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ವೇತನ ಪಾವತಿಸುವಂತೆ ಆದೇಶವಿದ್ದರೂ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗೆ ಸಕಾಲಕ್ಕೆ ಅನುಷ್ಠಾನಗೊಳ್ಳದಿರುವುದು ವಿಷಾದನೀಯ. ಬಿಇಒ ಕಚೇರಿಯ ಸಿಬ್ಬಂದಿ ಅನುದಾನಿತ ಶಾಲೆಗಳ ಬಜೆಟ್ ನಿರ್ವಹಣೆ ಅಸಮರ್ಪಕ ರೀತಿಯಲ್ಲಿ ನಿರ್ವಹಿಸುವ ಪರಿಣಾಮ ವೇತನ ವಿಳಂಬವಾಗುತ್ತಿರುವುದು ಈ ಸಮಸ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಸುವಂತೆ ಅನುದಾನಿತ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ವೇತನ ಪಾವತಿ ಮಾಡುವಂತೆ ಅಧಿಕಾರಿ ವರ್ಗದವರಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಪ್ರೌಢಶಾಲಾ ಶಿಕ್ಷಕರ ಸಂಘದ ಹನುಮನಗೌಡ ಪೊಲೀಸ್ ಪಾಟೀಲ್, ಪ್ರಭುಲಿಂಗ ಗದ್ದಿ, ಶಿವಪುತ್ರ ಬೆಳ್ಳಿಗನೂರ, ಶಿವಪುತ್ರ ಬೀದರ, ಶಿವಮ್ಮ ಎಡಹಳ್ಳಿ, ಅಮರೇಗೌಡ ಬಾಗೂರು, ಬಸನಗೌಡ, ನಾಗರೆಡ್ಡಿ, ಶರಣಬಸವ, ಬಸವರಾಜ, ವೆಂಕಟೇಶ, ಹನುಮಂತ, ಶರಣಬಸವ ಸೇರಿದಂತೆ ನೂರಾರು ಜನ ಶಿಕ್ಷಕ, ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.