68 ಮತಗಟ್ಟೆ, 62,495 ಮತದಾರರು
ಸಿಂಧನೂರು: ಸಿಂಧನೂರು ನಗರಸಭೆ ಚುನಾವಣೆ ಮಾ.7ರಂದು ನಡೆಯಲಿದ್ದು, ಒಟ್ಟು 31 ವಾರ್ಡ್ಗಳಲ್ಲಿ 68 ಮತಗಟ್ಟೆಗಳನ್ನು ಮಾಡಲಾಗಿದ್ದು, 62,495 ಮತದಾರರು ಮತ ಚಲಾವಣೆ ಮಾಡಲಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
62,495 ಮತದಾರರಲ್ಲಿ 32,422 ಪುರುಷರು, 30,073 ಮಹಿಳಾ ಮತದಾರರು ಮತಚಲಾವಣೆ ಮಾಡುವರು. 68 ಮತಗಟ್ಟೆಗಳಲ್ಲಿ 20 ಸೂಕ್ಷ್ಮ, 26 ಅತಿಸೂಕ್ಷ್ಮ, 22 ಸಾಮಾನ್ಯ ಮತಗಟ್ಟೆಗಳಿವೆ. 125 ಸಿವಿಲ್ ಪೊಲೀಸರು, 25 ಕೆಎಸ್ಆರ್ಪಿ ಪೊಲೀಸರು, 30 ಡಿಎಆರ್ ಪೊಲೀಸರು 52 ಹೋಮ್ ಗಾರ್ಡ್ಗಳನ್ನು, 7 ಎಎಸ್ಐಗಳು, 4 ಪಿಎಸ್ಐಗಳು, ಒಬ್ಬ ಸಿಪಿಐ, ಒಬ್ಬ ಡಿವೈಎಸ್ಪಿ ಅವರನ್ನು ಚುನಾವಣಾ ಬಂದೋಬಸ್ತ್ಗಾಗಿ ನೇಮಕ ಮಾಡಲಾಗಿದೆ.
ಮತದಾನದ ವೇಳೆ ಯಾವುದೇ ಪಕ್ಷದವರು, ಕಾರ್ಯಕರ್ತರು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರಣರಾದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿಗಳೂ ಆದ ತಹಸೀಲ್ದಾರ್ ಚಂದ್ರಶೇಖರಯ್ಯ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

