ಕಾಂಗ್ರೆಸ್-ಬಿಜೆಪಿ ಮಧ್ಯೆ ಹಣಾಹಣಿ
ದೇವದುರ್ಗ: ಸ್ಥಳೀಯ ಪುರಸಭೆಯ 22 ವಾರ್ಡುಗಳಿಗೆ ಮಾ.7ರಂದು ನಡೆಯುವ ಚುನಾವಣೆಗೆ ರಾಜಕೀಯ ಚುರುಕುಗೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ನೇರ ಹಣಾಹಣಿ ಕಂಡುಬಂದಿದೆ. ಜೆಡಿಎಸ್ ಮತ್ತು ಪಕ್ಷೇತರರು ಕಣದಲ್ಲಿದ್ದರೂ ಪ್ರಭಾವ ಕಡಿಮೆ. ಬಿಎಸ್ಸಾರ್ ಪೈಪೋಟಿ ನೀಡುತ್ತಿದೆ. ಆದರೆ ಕೆಜೆಪಿ ಚುನಾವಣೆಯ ಕಣದಿಂದಲೇ ದೂರವುಳಿದಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದ್ದು, ಮತದಾರರಿಗೆ ವಿವಿಧ ಆಮಿಷಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಪುರಸಭೆಯ 23 ವಾರ್ಡುಗಳ ಪೈಕಿ ಈಗಾಗಲೇ 18ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ರಂಗಯ್ಯ ಅವಿರೋಧ ಆಯ್ಕೆಯಾಗಿದ್ದು, ಗುರುವಾರ 22 ವಾರ್ಡುಗಳಿಗೆ ಮತದಾನ ನಡೆಯಲಿದೆ. 22 ವಾರ್ಡುಗಳಲ್ಲಿ ಮತದಾನಕ್ಕಾಗಿ 24ಮತಗಟ್ಟೆ ಸ್ಥಾಪಿಸಲಾಗಿದೆ. ಬಿಜೆಪಿಯ ಶಾಸಕ ಶಿವನಗೌಡ ನಾಯಕ ಕಳೆದ ನಾಲ್ಕೂವರೆ ವರ್ಷದಲ್ಲಿ ಸಾವಿರಾರು ಕೋಟಿ ರು. ಅಭಿವೃದ್ಧಿ ಕೈಗೊಂಡಿದ್ದಾಗಿ ಪ್ರಚಾರದಲ್ಲಿ ತೊಡಗಿದ್ದರೆ, ವಿರೋಧ ಪಕ್ಷಗಳು ಬಿಜೆಪಿ ಅನುದಾನ ಕೊಳ್ಳೆ ಹೊಡೆದಿದೆ. ಅಭಿವೃದ್ಧಿಯ ಮಾತೇಯಿಲ್ಲ ಎಂದು ಪ್ರತ್ಯಾರೋಪ ಮಾಡುತ್ತಾ ಪ್ರಚಾರ ಕೈಗೊಂಡಿದೆ. ಕಳೆದ ಬಾರಿ ಪುರಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷ ಈ ಸಲದ ಚುನಾವಣೆಯಲ್ಲಿ ಕೇವಲ 12 ವಾರ್ಡುಗಳಲ್ಲಿ ಮಾತ್ರ ಸ್ಪರ್ಧಿಸಲು ಸಾಧ್ಯವಾಗಿದೆ. ಚುನಾವಣೆ ಪ್ರಚಾರದಿಂದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ದೂರವುಳಿದರೆ, ಜೆಡಿಎಸ್ ತಾಲೂಕು ಘಟಕಕ್ಕೆ ಅಸ್ತಿತ್ವಕ್ಕೆ ಪರದಾಡುವಂತಿದೆ. ಜೆಡಿಎಸ್ನ ಸ್ಥಳೀಯ ಮುಖಂಡರಾದ ವಿ.ಎಂ. ಮೇಟಿ, ಬಸವರಾಜ ನಾಯಕ, ಅಮರೇಶ ಪಾಟೀಲ್, ಹನುಮಂತ್ರಾಯ ನಾಯಕ, ರಾಘವೇಂದ್ರ ಕೋಲ್ಕಾರ್, ಎಚ್. ಶಿವರಾಜ್ ಮತ್ತು ತಾಲೂಕಾಧ್ಯಕ್ಷ ಮಹಾದೇವ ಪಾಟೀಲ್ ಅವರು ಅಭ್ಯರ್ಥಿಗಳ ಗೆಲುವಿಗೆ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ನಲ್ಲಿ ಮುಂದಾಳತ್ವದ ಕೊರತೆಯಿಂದಾಗಿ ಸದ್ಯದ ಚುನಾವಣೆ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಹಣಾಹಣಿಗೆ ದಾರಿ ಮಾಡಿದೆ.
ಕಾಲುವೆಗೆ ನೀರು ಬಿಡಲು ಸಂಘ ಆಗ್ರಹ
ಶಹಾಪುರ: ರೈತರ ಒತ್ತಾಯಕ್ಕೆ ಮಣಿದು ಕಾಲುವೆಗಳಿಗೆ ನೀರು ಬಿಡಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಇದುವರೆಗೆ ಎಸ್ಬಿಸಿ ಮತ್ತು ಜೆಬಿಸಿ ಕಾಲುವೆಗೆ ನೀರು ಬಂದಿಲ್ಲ. ಆದ್ದರಿಂದ ಈ ಕಾಲುವೆಗೂ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು. ಇಲಾಖೆ ಅನೇಕ ವರ್ಷಗಳಿಂದ ಲಕ್ಷಾಂತರ ಎಕರೆ ಜಮೀನಿಗೆ ನೀರು ಒದಗಿಸುತ್ತಿದೆ. ನೀರಾವರಿ ಸಲಹಾ ಸಮಿತಿ ಸಭೆ ಆದ ನಂತರ ವಾರಾಬಂದಿಯನ್ನು ಜಾರಿ ಮಾಡಿ ನೀರು ಉಳಿತಾಯ ಮಾಡಿರುವುದು ಅಭಿನಂದನಾರ್ಹ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

