ದೇವದುರ್ಗ ಪುರಸಭೆ: ಶೇ.71.17 ಮತ ಚಲಾವಣೆ
ದೇವದುರ್ಗ: ಸ್ಥಳೀಯ ಪುರಸಭೆಯ 22 ವಾರ್ಡುಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.71.17 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದ್ದು, ಒಟ್ಟಾರೆ ಮತದಾನ ಶಾಂತಿಯುತವಾಗಿ ಕೊನೆಗೊಂಡಿದೆ.
ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಮತದಾನ ಚುರುಕಾಗಿ ಸಾಗಿತ್ತು. ಮತಗಟ್ಟೆಗಳ ಮುಂದೆ ಸಾಲಾಗಿ ನಿಂತ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಕೆಲ ವಾರ್ಡುಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಗುರುತಿನ ಚೀಟಿಯ ಅಲಭ್ಯತೆಯಿಂದಾಗಿ ಗೊಂದಲ ಏರ್ಪಟ್ಟು ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು.
ಒಂದು ವಾರ್ಡಿನಿಂದ ಇನ್ನೊಂದು ವಾರ್ಡಿಗೆ ಹೆಸರುಗಳು ಬದಲಾಗಿದ್ದರಿಂದ ಮತದಾರರು ತಮ್ಮ ಹೆಸರು ಹುಡುಕಿ ಅಲೆದಾಡುವಂತಾಯಿತು. ಬಹುತೇಕ ವಾರ್ಡ್ಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ಮಧ್ಯೆ ವಾಗ್ವಾದ, ತಳ್ಳಾಟ ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ನಡೆಯದೇ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಮಾನವಿ: ಶೇ.64.08 ಮತದಾನ
ರಾಯಚೂರು: ಮಾನವಿ ಪುರಸಭೆಯ 22 ವಾರ್ಡುಗಳಿಗೆ ಗುರುವಾರ ನಡೆದ ಮತದಾನದಲ್ಲಿ ಶೇ.64.08ರಷ್ಟು ಮತದಾನವಾಗಿದೆ.
ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಮತಗಟ್ಟೆಗಳ ಎದುರು ಎಲ್ಲ ವಾರ್ಡುಗಳಲ್ಲಿ ಮತದಾರರು ಸಾಲಾಗಿ ನಿಂತು ತಮ್ಮ ತಮ್ಮ ಚಲಾಯಿಸಿದರು. ಪ್ರತಿ ವಾರ್ಡ್ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ದೃಶ್ಯ ಕಂಡುಬಂದಿತು.
ಆರಂಭದಲ್ಲಿ ನಿಧಾನವಾಗಿ ಆರಂಭಗೊಂಡ ಮತದಾನವು ನಂತರದಲ್ಲಿ ವೇಗ ಪಡೆಯಿತು. ಮಧ್ಯಾಹ್ನದ 2ರ ಹೊತ್ತಿಗೆ ಶೇ. 45ರಷ್ಟು ಮತದಾನವಾಗಿತ್ತು. ಮತದಾನದ ವೇಳೆ ಮತದಾರರನ್ನು ಅಭ್ಯರ್ಥಿಗಳ ಕಡೆಯವರು ವಾಹನಗಳಲ್ಲಿ ಮತಗಟ್ಟೆಗೆ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಭ್ಯರ್ಥಿಗಳು ಕೊನೆಯ ಪ್ರಯತ್ನವಾಗಿ ಮತದಾರರಿಗೆ ಮತ ಹಾಕಲು ಮನವಿ ಮಾಡುತ್ತಿದ್ದರು.
ಬಂದೋಬಸ್ತ್: ಮಾನವಿಯ ಪುರಸಭೆಯ 22 ವಾರ್ಡುಗಳಿಗೆ ಗುರುವಾರ ನಡೆದ ಮತದಾನದ ವೇಳೆ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಒಟ್ಟಾರೆಯಾಗಿ ಶಾಂತಿಯುತವಾಗಿ ಪೂರ್ಣಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

