ರಾಯಚೂರು

ಸಿಂಧನೂರು;'ಕೈ'ಗೆ ಸಿಕ್ಕ ವಿಜಯ ಮಾಲೆ

Published On :

ಕನ್ನಡಪ್ರಭವಾರ್ತೆ, ಸಿಂಧನೂರು, ಮಾ.11
ನಗರಸಭೆ ಚುನಾವಣೆ ಫಲಿತಾಂಶ ಮಂಗಳವಾರ ಹೊರ ಬೀಳುತ್ತಿದ್ದಂತೆ ವಾರ್ಡ್ 1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಬಿಸಾಬ ಗೆಲ್ಲುವ ಮೂಲಕ ವಿಜಯಕ್ಕೆ ನಾಂದಿ ಹಾಡಿದರು. ಇದೇ ಸೂಚನೆ ಮುಂದುವರೆದು ಒಟ್ಟು 18 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು.
31 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನ 18, ಬಿಎಸ್‌ಆರ್‌ನ 5, ಜೆಡಿಎಸ್ ಹಾಗೂ ಕೆಜೆಪಿ ತಲಾ 4 ಅಭ್ಯರ್ಥಿಗಳು ವಿಜಯಿಶಾಲಿಗಳಾದರು. 5 ಸ್ಥಾನಗಳನ್ನು ಗಳಿಸಿದ ಬಿಎಸ್‌ಆರ್ ನಗರಸಭೆಯಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವಂತಾಯಿತು. ಕೆಜೆಪಿ 4ರಲ್ಲಿ ಗೆದ್ದು ವಿಜಯದ ನಗೆ ಬೀರಿತು. ಬಿಜೆಪಿ ಹಾಗೂ ಜೆಡಿಯು ಖಾತೆಗಳನ್ನು ತೆರೆಯದೆ ತೀವ್ರ ಮುಖಭಂಗಕ್ಕೀಡಾದವು.
ವಾರ್ಡ್,  ಗೆದ್ದ ಅಭ್ಯರ್ಥಿಗಳು (ಬಿಎಸ್‌ಆರ್‌ಕಾಂಗ್ರೆಸ್)
5. ಕೆ. ಮರಿಯಪ್ಪ
7. ಚಂದ್ರಶೇಖರ ಮೈಲಾರ,
10. ಅನಿತಾ
27. ನಾಗಪ್ಪ
28. ಗ್ಯಾನಪ್ಪ
ವಾರ್ಡ್, ಗೆದ್ದ ಅಭ್ಯರ್ಥಿಗಳು (ಜೆಡಿಎಸ್)
13. ಪಿ.ಎಸ್. ವೀರಭದ್ರಪ್ಪ,
19. ಶರಣಬಸವ ಎನ್.ಪಾಟೀಲ್
22. ಎಂ.ಮಹಿಬೂಬ
30. ಬಸವರಾಜ ನಾಡಗೌಡ.
6. ಸೈಯ್ಯದ್ ಹಾಜಿ ಮಸ್ತಾನ್
8. ಶಾರದಾ ಜಗದೀಶ
21. ಲಿಂಗರಾಜ ಹೂಗಾರ
24. ಮಲ್ಲಿಕಾರ್ಜುನ ಪಾಟೀಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.