ಪಡಿತರ ಚೀಟಿ: ಆನ್ಲೈನ್ ಅರ್ಜಿ ಸಲ್ಲಿಕೆಗೆ ಕರೆ
ರಾಯಚೂರು: ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ನಗರ ಪ್ರದೇಶಗಳಾದ ರಾಯಚೂರು, ಸಿಂಧನೂರು, ಮಾನವಿ, ಲಿಂಗಸ್ಗೂರು, ದೇವದುರ್ಗ, ಮುದಗಲ್ ಮತ್ತು ಹಟ್ಟಿ ಪ್ರದೇಶದಲ್ಲಿ ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಪೋಟೋ ಸೇವಾ ಕೇಂದ್ರಗಳ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರು ತಮ್ಮ ಮೊಬೈಲ್ ಮೂಲಕ 92123 57123 ಆರ್ಸಿ ನ್ಯೂ ಎಂದು ನಮೂದಿಸಿ, ತಮ್ಮ ಹೆಸರಿನಿಂದ ಎಸ್ಎಂಎಸ್ ಮಾಡಬೇಕು. ನಂತರ ಅರ್ಜಿದಾರರು ಸ್ವೀಕರಿಸಿದ ಸೆಕ್ಯೂರಿಟಿ ಕೋಡ್ ಮತ್ತು ಟೋಕನ್ ನಂಬರ್ನೊಂದಿಗೆ ಈಗಾಗಲೇ ಚಾಲ್ತಿಯಲ್ಲಿರುವ ಪಡಿತರ ಚೀಟಿ ಹೊಂದಿದವರು ಪರಿಚಿತರ ಜತೆಯಲ್ಲಿ ಕಡ್ಡಾಯವಾಗಿ ತಮ್ಮ ಸಮೀಪದ ಸೇವಾ ಕೇಂದ್ರಕ್ಕೆ ತೆರಳಬೇಕು. ಸೇವಾ ಕೇಂದ್ರಕ್ಕೆ ತಮ್ಮ ವಾಸದ ಮನೆಯ ಕೆಇಬಿಬಿಲ್, ವಿಳಾಸದ ವಿವರ ಗುರುತಿನ ಚೀಟಿ ಹಾಜರುಪಡಿಸಬೇಕು ಎಂದು ಆಹಾರ ಇಲಾಖೆ ತಿಳಿಸಿದೆ.
ನಗರದ ಸೇವಾ ಕೇಂದ್ರಗಳು: ನಗರದ ಎಲ್ವಿಡಿ ಕಾಲೇಜು ಹತ್ತಿರದ ಶಾರ್ಪ್ ಕಂಪ್ಯೂಟರ್ಸ್, ಗಂಗಾನಿವಾಸದ ಹತ್ತಿರದ ಎಸ್ಎಲ್ಎನ್ ಪಬ್ಲಿಸಿಟಿ, ಆಶಾಪುರ ರಸ್ತೆಯಲ್ಲಿರುವ ಶ್ರೀನಿಧಿ ವಿಎಸ್ಸೆನ್ ಕಂಪ್ಯೂಟರ್ಸ್, ಅಶೋಕ ಡಿಪೋ ಹತ್ತಿರದ ಅಂಜಲಿ ಎಂಟರ್ ಪ್ರೈಸೆಸ್, ಶಕ್ತಿನಗರದ ಗ್ಲೋಬಲ್ ಸೈಬರ್ ಕೆಫೆ, ನಗರಸಭೆಯ ಹತ್ತಿರ ವಿರುವ ಚೈತನ್ಯ ಕಂಪ್ಯೂಟರ್ ಸಲ್ಯೂಶನ್ ಹಾಗೂ ಎಲ್ಬಿಎಸ್ ನಗರದ ಶ್ರೇಯಾಗ್ರಾಫಿಕ್ಸ್, ನಿಜಲಿಂಗಪ್ಪ ಕಾಲನಿಯ ಕ್ರಿಯೇಟರ್ಸ್ ಟೆಕ್ನಾಲಜಿ ಇವರಲ್ಲಿ ಬಯೋವುಟ್ರಿಕ್ ನೀಡುವುದು ಮತ್ತು ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

