ರಾಯಚೂರು

ನಿವೇಶನ ಕಬಳಿಕೆಯಾದ್ರೂ ಅಧಿಕಾರಿಗಳ ನಿರ್ಲಕ್ಷ್ಯ

Published On :

ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.6 ರಲ್ಲಿರುವ ಜನತಾ ಕಾಲೋನಿಯಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ಖಾಲಿ ನಿವೇಶನವನ್ನು ಖಾಸಗಿಯವರು ಕಬಳಿಸುತ್ತಿದ್ದರೂ ಮುಖ್ಯಾಧಿಕಾರಿಗಳು ತಮಗೇನೂ ಸಂಬಂಧ ಇಲ್ಲ ಎನ್ನುವಂತೆ ಮೌನ ವಹಿಸಿದ್ದಾರೆ.
ಖಾಲಿ ನಿವೇಶನದಲ್ಲಿ ಸಾಮಾಜಿಕ ಆರಣ್ಯ ಇಲಾಖೆ ಬೆಳೆಸಿದ್ದ ಸೀತಾ ಫಲಹಣ್ಣಿನ ಗಿಡಗಳನ್ನು ಕಡಿದು ಖಾಸಗಿಯವರು ನಿವೇಶನ ಕಬಳಿಸಲು ಹೊಂಚು ಹಾಕಿದ್ದಾರೆ. ಒಂದೇ ಕುಟುಂಬದವರು ಮೂರರಿಂದ ನಾಲ್ಕು ನಿವೇಶನಗಳನ್ನು ಅಕ್ರಮಿಸಿಕೊಂಡಿದ್ದಾರೆ. ಅಲ್ಲದೆ ಐತಿಹಾಸಿಕ ಕೋಟೆ ಗೋಡೆಗೆ ಹೊಂದಿಕೊಂಡಿದ್ದು, ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದರೂ, ಪ.ಪಂ. ಅಧಿಕಾರಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ.
ನಿಗದಿ: ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದಾರೆ. ಮಹಿಳಾ ಶೌಚಾಲಯ ನಿರ್ಮಿಸಲು ಹಿಂದಿನ ಆಡಳಿತ ಮಂಡಳಿ ಎಸ್‌ಎಫ್‌ಸಿ ಯೋಜನೆಯಲ್ಲಿ ರು. 10 ಲಕ್ಷ ನಿಗದಿಪಡಿಸಿದೆ. ಆದರೆ ಖಾಸಗಿಯವರು ಅಕ್ರಮಿಸಿಕೊಳ್ಳುತ್ತಿರುವ ಖಾಲಿ ನಿವೇಶನವನ್ನು ಪ.ಪಂ. ವಶಪಡಿಸಿಕೊಳ್ಳದಿದ್ದರೆ ಮಹಿಳಾ ಶೌಚಾಲಯಕ್ಕೆ ಜಾಗಕ್ಕಾಗಿ ಪರದಾಡಬೇಕಾಗುತ್ತದೆ. ನಿವೇಶನದ ಹಕ್ಕುಪತ್ರ ಇಲ್ಲದಿದ್ದರೂ ಲಕ್ಷಾಂತರ ಬೆಲೆ ಬಾಳುವ ಮನೆಗಳನ್ನು ಪ.ಪಂ. ಪರವಾನಗಿ ಇಲ್ಲದೆ ಕಟ್ಟಿಕೊಂಡಿದ್ದರೂ ಕ್ಯಾರೆ ಎನ್ನುವವರಿಲ್ಲ.
ಪಟ್ಟಣದಲ್ಲಿ ಪ್ರತಿ ದಿನವೂ ಹತ್ತಾರು ಮನೆಗಳು ನಿರ್ಮಾಣ ಆಗುತ್ತಿವೆ. ಯಾರೂ ಮನೆ ನಿರ್ಮಾಣಕ್ಕೆ ಪರವಾಣಿಗೆ ಪಡೆಯುತ್ತಿಲ್ಲ. ಇದರಿಂದಾಗಿ ಪಟ್ಟಣ ಪಂಚಾಯಿತಿ ಬೊಕ್ಕಸಕ್ಕೆ ಕತ್ತರಿ ಬೀಳುತ್ತಿದ್ದರೂ, ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.
 ಹೀಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಪಟ್ಟಣದಲ್ಲಿರುವ ಖಾಲಿ ನಿವೇಶನಗಳು ಖಾಸಗಿಯವರ ಪಾಲಾಗುವುದರಲ್ಲಿ ಸಂದೇಹವಿಲ್ಲ. ಇನ್ನು ಮುಂದಾದರೂ ಖಾಲಿ ನಿವೇಶನವನ್ನು ವಶಕ್ಕೆ ತಗೆದುಕೊಂಡು ರಕ್ಷಣೆ ಮಾಡುವರೋ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.