ರಾಯಚೂರು

ನವಲಕಲ್‌ನಲ್ಲಿ 20ರಂದು ಜಾತ್ರಾ ಮಹೋತ್ಸವ

Published On :

ರಾಯಚೂರು: ಮಾನವಿ ತಾಲೂಕಿನ ನವಲಕಲ್ ಗ್ರಾಮದಲ್ಲಿ ಪವಾಡ ಪುರುಷ, ಮಹಾಮಹಿಮಶಾಲಿಗಳಾದ ಲಿಂ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ  16ನೇ ಜಾತ್ರಾ ಮಹೋತ್ಸವ ಮಾ.20ರಂದು ನಡೆಯಲಿದೆ.
ನವಲಕಲ್ ಬ್ರಹನ್ಮಠದ ವತಿಯಿಂದ ನಡೆಯಲಿರುವ ಜಾತ್ರಾ ಮಹೋತ್ಸವದ ಸಾನಿಧ್ಯವನ್ನು ಅಭಿನವ ಸೋಮನಾಥ ಶಿವಾಚಾರ್ಯರು ವಹಿಸಲಿದ್ದಾರೆ. ನೀಲಗಲ್ ಬ್ರಹನ್ಮಠದ ಪಂಚಾಕ್ಷರಿ ಶಿವಾಚಾರ್ಯರು ಅವರ ಸಾನಿಧ್ಯದಲ್ಲಿ ಅಂದು ಬೆಳಗ್ಗೆ 8ಕ್ಕೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.
 ಸಂಜೆ 7ಕ್ಕೆ ನಡೆಯುವ ಶಿವಾನುಭವಗೋಷ್ಠಿ  ಅಧ್ಯಕ್ಷತೆ ಶಾಂತಮಲ್ಲ ಶಿವಾಚಾರ್ಯರು ವಹಿಸಲಿದ್ದಾರೆ.
ಸಾನಿಧ್ಯವನ್ನು ಗಬ್ಬೂರಿನ ಬೂದಿಬಸವ ಶಿವಾಚಾರ್ಯ  ವಹಿಸುವರು. ನೇತೃತ್ವವನ್ನು ಅಭಿನವ ರಾಚೋಟಿವೀರ ಶಿವಾಚಾರ್ಯರು ವಹಿಸಲಿದ್ದಾರೆ. ಆಲಮೇಲದ ಶ್ರೀಗಳು, ಗೆಜ್ಜೆಭಾವಿಯ ಅಭಿನವ ಚನ್ನಬಸವ ಶಿವಾಚಾರ್ಯ, ಮುರುಗೇಂದ್ರಮ ಸ್ವಾಮಿ, ಶಿವಕುಮಾರ ಸ್ವಾಮೀಜಿ, ಅಭಿನವ ರುದ್ರಮುನಿ ಶಿವಾಚಾರ್ಯ, ಸೋಮನಾಥ ಶಿವಾಚಾರ್ಯ, ರಾಚೇಟೇಶ್ವರ ಶಿವಾಚಾರ್ಯ, ಮುರುಗೇಂದ್ರ ದೇವರು ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.