ಆಧುನಿಕ ಯುಗದಲ್ಲಿ ಮಹಿಳೆಗೆ ಶಿಕ್ಷಣ ಅವಶ್ಯ: ವಿಜಯಲಕ್ಷ್ಮಿ
ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.21
ಸಮಾಜದಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಿ ಒಳ್ಳೆಯ ಹೆಸರನ್ನು ಪಡೆಯಲು ಶಿಕ್ಷಣ ತುಂಬಾ ಅವಶ್ಯಕವಾಗಿದೆ ಎಂದು ಉಪನ್ಯಾಸಕಿ ವಿಜಯಲಕ್ಷ್ಮಿ ಗುರಿಕಾರ ಹೇಳಿದರು.
ನಗರದ ದುದ್ದುಪುಡಿ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿ. ರಾಜೇಶ್ವರಿ ದೇವರಡ್ಡಿ ಕಾನಿಹಾಳ ಹಾಗೂ ದಿ. ವೆಂಕಣ್ಣ ಸಾಹುಕಾರ ಕುರುಕುಂದಿ ಇವರ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಮಹಿಳೆ ಮತ್ತು ಶಿಕ್ಷಣ' ಎಂಬ ವಿಷಯದ ಉಪನ್ಯಾಸಕರಾಗಿ ಮಾತನಾಡಿದರು.
ಸರ್ವರೋಗಕ್ಕೆ ಶಿಕ್ಷಣ ಸಂಜೀವಿನಿ: ಶಿಕ್ಷಣ ಸರ್ವ ರೋಗಕ್ಕೆ ಸಂಜೀವಿನಿ ಇದ್ದಂತೆ. ಅದೇ ರೀತಿಯಾಗಿ ಈ ಶಿಕ್ಷಣದ ಉಪಯೋಗ ಪ್ರಸ್ತುತ ವಿದ್ಯಾಮಾನದಲ್ಲಿ ಸರ್ವ ಮಹಿಳೆಯರಿಗೆ ಬೇಕಾಗಿದೆ. ಉದ್ಯೋಗ ಪಡೆಯಲು, ಪ್ರಗತಿ ಹೊಂದಲು, ಸಮಾಜದಲ್ಲಿ ಸುಖಕರವಾಗಿ ಬದುಕಲು ಮಹಿಳೆಯರು ಮೊದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಸಾಪ ತಾಲೂಕಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿ, ಇಂತಹ ದತ್ತಿ ಉಪನ್ಯಾಸ ಕಾರ್ಯಕ್ರಮ ಮಾಡುವುದರಿಂದ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರಿಗೆ ಮಾತನಾಡಲು ಉತ್ತಮ ವೇದಿಕೆ ಸಿಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದುದ್ದುಪುಡಿ ಮಹಿಳಾ ವಿದ್ಯಾಲಯದ ಕಾರ್ಯದರ್ಶಿ ಆರ್.ಸಿ. ಪಾಟೀಲ್, ಕಾಲೇಜಿನ ಪ್ರಾಚಾರ್ಯ ಮಲ್ಲೇಶ ಹಳ್ಳಿ, ತಾಲೂಕು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಅಮರೇಶ ಅಲಬನೂರು, ಉಪನ್ಯಾಸಕಿ ಈರಮ್ಮ ಹಿರೇಮಠ, ಈಶಪ್ಪ ಸಾಹುಕಾರ ಕುರುಕುಂದಿ, ಬಸವರಾಜ ವಕೀಲರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವೀರೇಶ ಗೋನವಾರ ನಿರೂಪಿಸಿದರು. ವಿದ್ಯಾರ್ಥಿನಿ ಲಕ್ಷ್ಮಿ ಜವಳಗೇರಾ ಸ್ವಾಗತಿಸಿದರು. ಶಿವಲೀಲಾ ಪ್ರಾರ್ಥಿಸಿದರು. ಮಹಿಳಾ ಗೀತೆಯನ್ನು ರಾಧ ಸಂಗಡಿಗರು ಹಾಡಿದರು. ಜಗದೀಶ್ವರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

