ರಾಯಚೂರು

'ಯುವಕರು ದೇಶಪ್ರೇಮ ಬೆಳೆಸಿಕೊಳ್ಳಲಿ'

Published On :

ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.21
ಸ್ವಾತಂತ್ರ್ಯಕ್ಕಾಗಿ ಹೋರಾಡಿ ನೇಣುಗಂಬ ಏರಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಅವರಂತಹ ವಿರೋಚಿತ ಹೋರಾಟಗಾರರು ನಡೆದ ದಾರಿಯಲ್ಲಿ ಇಂದಿನ ಯುವಕರು ನಡೆಯುವ ಮೂಲಕ ದೇಶಪ್ರೇಮ ಮೆರೆಯಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ದೊಡ್ಡಬಸವರಾಜ ಸಲಹೆ ನೀಡಿದರು.
ತಾಲೂಕಿನ ಬಳಗಾನೂರು ಗ್ರಾಮದ ಮರಿಬಸವಲಿಂಗ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಉದ್ಘಾಟಿಸಿ ಮಾತನಾಡಿ, ನಾಡು- ನುಡಿ ಹಾಗೂ ಜನತೆಗಾಗಿ ಆತ್ಮಾರ್ಪಣೆ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು. ಕುಟುಂಬದ ಹಿತದೊಂದಿಗೆ ಇತರರ ಬಗ್ಗೆಯೂ ಕಳಕಳಿ ಹೊಂದಿದ್ದಾಗ ಎಲ್ಲರೂ ಸುಖೀ ಜೀವನ ನಡೆಸಲು ಸಾಧ್ಯ. ಸಂಗೊಳ್ಳಿ ರಾಯಣ್ಣ ಯುವಕ ಮಂಡಳಿ ಜನಪರ ಕೆಲಸಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಲಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿಂಧನೂರಿನ ನಂಜುಡಯ್ಯ ಗುರುವಿನ್, ತಿಪ್ಪಣ್ಣ ಪೂಜಾರಿ ವಹಿಸಿದ್ದರು. ಬಿಎಸ್ಸಾರ್ ಮುಖಂಡ ಶೇಖರಪ್ಪ ತಳವಾರ, ನಿರುಪಾದೆಪ್ಪ ವಕೀಲರು, ಮಾಳಪ್ಪ ಪೂಜಾರಿ, ನಿಂಗಪ್ಪ ಕ್ಯಾತನಹಟ್ಟಿ, ಮಲ್ಲನಗೌಡ ಸುಂಕನೂರು, ಬಸವರಾಜ ಕರಿಯಪ್ಪ, ಶಿವಣ್ಣ ಉದ್ಬಾಳ, ಯಂಕಣ್ಣ ತಿಪ್ಪನಹಟ್ಟಿ, ಮಹಾಂತೇಶ ಜಾಲವಾಡಗಿ ಮತ್ತಿತರರು ಉಪಸ್ಥಿತರಿದ್ದರು. ಲಿಂಗರಾಜ ಹೊನಕೇರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುರೇಶ ಹಡಪದ ನಿರೂಪಿಸಿದರು.
ಅನಾವರಣ: ಗ್ರಾಮದ ಕನಕದಾಸ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರವನ್ನು ಪಿಎಲ್‌ಡಿಬಿ ಮಾಜಿ ನಿರ್ದೇಶಕ ತಿಪ್ಪಣ್ಣ ಪೂಜಾರಿ ಅನಾವರಣಗೊಳಿಸಿದರು. ಇದಕ್ಕೂ ಮುನ್ನ ಕುಂಭ ಕಳಸದೊಂದಿಗೆ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.