ಇಂದು ಧ್ವನಿ ಮುದ್ರಿಕೆ ಬಿಡುಗಡೆ
ರಾಯಚೂರು: ನಗರದ ಸ್ನೇಹಜೀವಿ ಸಂಸ್ಥೆ ಮತ್ತು ಹೈ.ಕ. ವಿಮೋಚನಾ ವೇದಿಕೆಯಿಂದ ಮಾ.23ರಂದು ಹೆತ್ತವಳು ಜನಜಾಗೃತಿ ಹಾಡುಗಳ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. ಬೆಳಗ್ಗೆ 11ಕ್ಕೆ ನಗರದ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಧ್ವನಿಮುದ್ರಿಕೆಯನ್ನು ಸಾಹಿತಿ ಜಂಬಣ್ಣ ಅಮರಚಿಂತ ಬಿಡುಗಡೆಗೊಳಿಸುವರು. ಸಮಾರಂಭವನ್ನು ದ್ಯಾಮಮ್ಮ ಮತ್ತು ಸಂಗಡಿಗರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸ್ನೇಹಜೀವಿ ಸಂಸ್ಥೆಯ ಅಧ್ಯಕ್ಷ ದೊಡ್ಡಪ್ಪ ವಕೀಲರು ವಹಿಸುವರು. ಅಂಬಣ್ಣ ಅರೋಲಿಕರ್, ಕೆ.ಕರಿಯಪ್ಪ ಮಾಸ್ತರ್, ದಾನಪ್ಪ ನಿಲೋಗಲ್, ಜೆ.ಬಿ.ರಾಜು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಇಂದು ಉಪ್ಪಾರ ಸಮಾಜದ ಸಭೆ
ರಾಯಚೂರು: ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘದ ಅಡಿ ನೂತನವಾಗಿ ಜಿಲ್ಲಾ ಉಪ್ಪಾರ ಸಮಾಜದ ಮಹಿಳಾ ಮಂಡಳಿಯ ರಚನೆ ಹಿನ್ನೆಲೆಯಲ್ಲಿ ಮಾ. 23ರಂದು ಉಪ್ಪಾರ ಸಮಾಜದ ಪ್ರಮುಖರ ಸಭೆ ಕರೆಯಲಾಗಿದೆ. ಅಂದು ಸಂಜೆ 5ಕ್ಕೆ ನಗರದ ಉಪ್ಪಾರವಾಡಿಯ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಸಭೆಯಲ್ಲಿ ಜಿಲ್ಲಾ ಉಪ್ಪಾರ ಸಮಾಜದ ಮಹಿಳಾ ಮಂಡಳಿಯನ್ನು ರಚಿಸಲಾಗುತ್ತದೆ. ಸಮಾಜದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಂಘ ಮನವಿ ಮಾಡಿದೆ.
25ರಂದು ಸಾಲ ಯೋಜನೆ ಪ್ರಕಟ
ರಾಯಚೂರು: ಜಿಲ್ಲಾ ವಾರ್ಷಿಕ ಸಾಲ ಪತ್ರ ಯೋಜನೆಯನ್ನು ಮಾ.25ರಂದು ನಗರದಲ್ಲಿ ಪ್ರಕಟಿಸಲಾಗುತ್ತದೆ. ನಗರದ ಜಲನಿರ್ಮಲ ಸಭಾಂಗಣದಲ್ಲಿ ಬೆ.11ಕ್ಕೆ ನಡೆಯುವ ಸಭೆಯಲ್ಲಿ 2013-14ನೇ ಸಾಲಿನ ಸಾಲ ಪತ್ರ ಯೋಜನೆ ಪ್ರಕಟಿಸಲಾಗುತ್ತದೆ ಎಂದು ಲೀಡ್ ಬ್ಯಾಂಕಿನ ಮ್ಯಾನೇಜರ್ ಬಿ.ಎಸ್. ರೆಡ್ಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

