ರಾಯಚೂರು

ಆಳುವ ಪಕ್ಷಗಳಿಗೆ ಪಾಠ ಕಲಿಸಿ: ಗಂಗಾಧರ

Published On :

ಕ.ಪ್ರ. ವಾರ್ತೆಲಿಂಗಸ್ಗೂರುಮಾ.23
ದೇಶದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರದ ಎನ್‌ಡಿಎ, ಯುಪಿಎ ಸೇರಿದಂತೆ ಎಲ್ಲ ಪಕ್ಷಗಳಿಗೆ ಪಾಠ ಕಲಿಸಲು ಭಗತ್‌ಸಿಂಗ್‌ರ ತತ್ವಾದರ್ಶ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ(ಆರ್‌ವೈಎಫ್‌ಐ)ದ ರಾಜ್ಯಾಧ್ಯಕ್ಷ ಎಂ.ಗಂಗಾಧರ ಸಲಹೆ ನೀಡಿದರು.
ಪಟ್ಟಣದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಆರ್‌ವೈಎಫ್‌ಐ ವತಿಯಿಂದ ಹಮ್ಮಿಕೊಂಡಿದ್ದ ಭಗತ್‌ಸಿಂಗ್‌ರ 82ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಜನರನ್ನು ಮೋಸಗೊಳಿಸಿ ಸಾಮ್ರಾಜ್ಯಶಾಹಿಗಳಿಗೆ ದೇಶವನ್ನು ತೆರೆದಿಟ್ಟ ಕೇಂದ್ರದ ಎನ್‌ಡಿಎ, ಯುಪಿಎ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ನಕಲಿ ನೀತಿಗಳನ್ನು ವಿರೋಧಿಸಿ ಹೋರಾಡಬೇಕಿದೆ. ಸಾಮ್ರಾಜ್ಯಶಾಹಿ, ನವವಸಾಹತು, ಸುಲಿಗೆ ವಿರುದ್ಧ ಸಮರ ಸಾರುವುದೇ ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆದ್ದಾರಿಯಾಗಲಿದೆ ಎಂದರು.
ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಟ: ಟಿಯುಸಿಐ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ಮಾತನಾಡಿ, ಅಂದು ಈಸ್ಟ್ ಇಂಡಿಯಾ ಕಂಪನಿ ವಿರೋಧಿಸಿ ಹೋರಾಟ ನಡೆಸಲಾಯಿತು. ಇಂದು ಬಹುರಾಷ್ಟ್ರೀಯ ಕಂಪನಿಗಳ ವಿರೋದ್ಧ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ. ದೇಶವನ್ನಾಳುವ ಸಾಮ್ರಾಜ್ಯಶಾಹಿ, ಬಂಡವಾಳ ಶಾಹಿ, ಬಹುರಾಷ್ಟ್ರೀಯ ಕಂಪನಿಗಳನ್ನು ಓಡಿಸಬೇಕಾಗಿದೆ. ಹಸಿವು, ಬಡತನ, ನಿರುದ್ಯೋಗಕ್ಕೆ ಕಾರಣವಾಗಿರುವ ಎಲ್ಲ ಆಳುವ ಪಕ್ಷಗಳನ್ನು ಯುವಜನತೆ ಬೇರು ಸಮೇತ ಕಿತ್ತೆಸೆಯಬೇಕಿದೆ ಎಂದು ತಿಳಿಸಿದರು.
ಕೆಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಶೇಖರಯ್ಯ ಮಾತನಾಡಿ, ಭಗತ್‌ಸಿಂಗ್‌ರ ಸಮಾಜವಾದಿ ಆಶಯಗಳನ್ನು ಮೈಗೊಡಿಸಿಕೊಂಡು ಮುನ್ನಡೆಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಆರ್‌ಎಸ್ ತಾಲೂಕು ಕಾರ್ಯದರ್ಶಿ ಹನುಮಂತ ಗಲಗ, ಆರ್‌ವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ, ಜಿಲ್ಲಾಧ್ಯಕ್ಷ ಬಸವರಾಜ ಕವಿತಾಳ, ಮುಖಂಡರಾದ ಡಿ.ಕೆ. ಲಿಂಗಸ್ಗೂರು, ಬಾಬು ಭೂಪೂರ, ಜಾಫರ್ ಕವಿತಾಳ, ಆದಿ ನಗನೂರು, ಮೌನೇಶ ತೋರಣದಿನ್ನಿ, ಶ್ರೀನಾಥ ಆಚಾರಿ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.