ಬಸಾಪುರದಲ್ಲಿ ಕರವೇ ಗ್ರಾಮ ಘಟಕ ರಚನೆ
ಸಿಂಧನೂರು: ಸಂಘಟನೆ ಸ್ಥಾಪಿಸಿ ಜನರಿಗೆ ಬೆದರಿಕೆ ಹಾಕಿ ಹಣ ಗಳಿಸುವ ಕೆಲಸ ಮಾಡಬಾರದು. ಸಾರ್ವಜನಿಕರ ಕಾಳಜಿಯ ಬಗ್ಗೆ ಗಮನಹರಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಜನರಿಂದ ಸೈ ಎನಿಸಿಕೊಳ್ಳಬೇಕೆಂದು ತಾಲೂಕಾಧ್ಯಕ್ಷ ಅಜಿತ್ ಓಸ್ತುವಾಲ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಶೋಕ ಜೈನ್ ಸಿ.ಕೆ. ಆದೇಶದ ಮೇರೆಗೆ ತಾಲೂಕಿನ ಬಸಾಪೂರ ಕೆ. ಗ್ರಾಮದಲ್ಲಿ ನೂತನ ಕರವೇ ಗ್ರಾಮ ಘಟಕ ರಚನೆ ಮಾಡಿ ಮಾತನಾಡಿದರು.
ನಮ್ಮ ಕನ್ನಡದ ನೆಲ, ಜಲ, ಭಾಷೆಯ ಉಳಿವಿಗಾಗಿ ಹೋರಾಡುತ್ತಾ ಉತ್ತಮ ಸಂಘಟಕರೆನಿಸಿಕೊಳ್ಳಬೇಕೆಂದು ಕರೆ ನೀಡಿದರು. ಕರವೇ ನೂತನ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಲಕ್ಷ್ಮಣ ಕುರಿ, ಅಧ್ಯಕ್ಷರಾಗಿ ಸಿದ್ರಾಮೇಶ ಕುರುಬರು, ಉಪಾಧ್ಯಕ್ಷರಾಗಿ ಸುರೇಶ ಆಯೋದಿ, ಕಾರ್ಯದರ್ಶಿಯಾಗಿ ಅಳೂರಪ್ಪ ತಳವಾರ, ಸಂಘಟನಾ ಕಾರ್ಯದರ್ಶಿಯಾಗಿ ರವಿಸ್ವಾಮಿ ಹಿರೇಮಠ, ಖಚಾಂಜಿಯಾಗಿ ಅಮರೇಶ ಪೊಲೀಸ್ ಪಾಟೀಲ್, ಸದಸ್ಯರಾಗಿ ತರಸಾಲೆಪ್ಪ ಆಯೋಧಿ, ಸಿದ್ದ ಲಿಂಗಪ್ಪ, ಬಸವರಾಜ ನಿಲವಂಜಿ, ಶರಣಪ್ಪ ಆಯೋಧಿ, ಹನುಮಂತಪ್ಪ ಕುರಿ, ಬಸವರಾಜ ಮಣ್ಣೂರು, ವಿಜಯಕುಮಾರ ಕಂಬಳಿ, ಯಲ್ಲಾಲಿಂಗ ಅಯೋಧಿ ಮತ್ತಿತರರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

