ಅನಧಿಕೃತ ನೀರಿನ ಘಟಕಗಳಿಗೆ ಪರವಾನಗಿಯಿಲ್ಲ: ಎಡಿಸಿ ಸ್ಪಷ್ಟನೆ
ರಾಯಚೂರು: ಜಿಲ್ಲೆಯಲ್ಲಿ ಕೇವಲ ಎರಡು ಕುಡಿಯುವ ನೀರಿನ ಉತ್ಪಾದನೆ ಘಟಕಗಳು ಮಾತ್ರ ಬಿಎಸ್ಐ ಸಂಸ್ಥೆಯಿಂದ ಐಎಸ್ಐ ಪ್ರಮಾಣ ಪತ್ರ ಪಡೆದಿದ್ದು, ಇನ್ನುಳಿದಂತೆ ಯಾವುದೇ ಘಟಕಗಳಿಗೆ ಜಿಲ್ಲಾಡಳಿತ ಪರವಾನಗಿಯನ್ನು ನೀಡಿಲ್ಲ ಎಂದು ಹೆಚ್ಚುವರಿ ಡಿಸಿ ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಅನಧಿಕೃತ ಘಟಕಗಳಿಗೆ ಪರವಾನಗಿ ನೀಡಿಲ್ಲ. ಈ ಹಿಂದೆ ಹರ್ಬಲ್ ನೀರು ಉತ್ಪಾದಿಸುತ್ತಿದ್ದ ನೀರಿನ ಘಟಕಗಳಿಗೆ ದಾಳಿ ಮಾಡಿ ಮುಚ್ಚಲಾಗಿದೆ. ಈ ಘಟಕಗಳ ಮಾಲೀಕರು ಗುಲ್ಬರ್ಗದ ಉಚ್ಚ ನ್ಯಾಯಾಲಯದ ಪೀಠದಲ್ಲಿ ಮೊಕದ್ದಮೆ ಹೂಡಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಜಿಲ್ಲೆಯಲ್ಲಿದ್ದ ಎಲ್ಲ 47 ಅನಧಿಕೃತ ನೀರಿನ ಘಟಕಗಳಿಗೆ ನೋಟಿಸ್ ಜಾರಿ ಮಾಡಿ ಮುಚ್ಚಲಾಗಿದೆ. 2013ರ ಜ.22ರಂದು ಜಿಲ್ಲಾಧಿಕಾರಿ ನೇತೃತ್ವದ ತಂಡವು ನೀರಿನ ಘಟಕಗಳಿಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಮುಚ್ಚಿರುವ ನೀರಿನ ಉತ್ಪಾದನೆ ಘಟಕಗಳಿಗೆ ಜಿಲ್ಲಾಡಳಿತವು ತಲಾ 10 ಸಾವಿರ ದಂಡ ವಿಧಿಸಿದೆ. ಮುಂದಿನ ದಿನಗಳಲ್ಲಿ ನೀರಿನ ಘಟಕಗಳು ಪುನಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಅಂಥ ಘಟಕಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

