ರಾಯಚೂರು

ಬಣ್ಣ ಬದುಕಿನ ವೈವಿಧ್ಯಗಳ ಆವಿಷ್ಕಾರ: ರಮಾದೇವಿ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.31
ಬಗೆಬಗೆಯ ಬಣ್ಣ ಬದುಕಿನ ಹಲವಾರು ವೈವಿಧ್ಯಗಳ ಆವಿಷ್ಕರಿಸುವ ಸಂಕೇತವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಮಾದೇವಿ ಶಂಭೋಜಿ ಹೇಳಿದರು.
ನಗರದ ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಪತಂಜಲಿ ಯೋಗ ಸಮಿತಿ ನೇತೃತ್ವ ಹೋಳಿ ಹಬ್ಬದ ಪ್ರಯುಕ್ತ ನಡೆದ ವಿಶೇಷ ಯೋಗ ತರಬೇತಿ ಶಿಬಿರದಲ್ಲಿ ವಿನೂತನ ಹೋಲಿ ಆಚರಣೆಯಲ್ಲಿ ಮಾತನಾಡಿ, ನಮ್ಮಲ್ಲಿರುವ ಕಾಮ- ಕ್ರೋಧಗಳು ಮಾಯವಾಗಿ ಶಾಂತಿ ಸಂತೋಷ ಎಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು.
ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ: ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಎಂ. ಭಾಸ್ಕರ್ ಮಾತನಾಡಿ, ಸಂಸ್ಕೃತಿ ಪರಂಪರೆ ಉಳಿಸಲು ಸಮಾನ ಮನಸ್ಕರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿ ತಾವು ಸ್ವತಃ ಆಚರಣೆಗೆ ತರುತ್ತಾ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಸಮಿತಿಯ ರಾಜ್ಯ ಮಹಿಳಾ ಪ್ರಭಾರಿ ದಾಕ್ಷಾಯಣಿ ಹೊಸಪೇಟೆ ಮಾತನಾಡಿ, ಮಹಿಳೆಯ ಸರ್ವತೋಮುಖ ಅಭಿವೃದ್ಧಿಗೆ ಕಲೆ, ಸಾಹಿತ್ಯ, ಪ್ರತಿಭೆ ಪ್ರದರ್ಶನ ಪೂರಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ವಿ. ಪಾಟೀಲ್, ಸಿದ್ದಪ್ಪ ಸಾಗರ, ವೆಂಕಣ್ಣಾಚಾರ ಜೋಷಿ ದೋಟಿಹಾಳ, ವಿಜಯಲಕ್ಷ್ಮಿ ಸಿರುಗುಪ್ಪಾ, ಸಿ.ಎಚ್. ಶರಣಪ್ಪ ಕಾರಟಗಿ ಹಾಜರಿದ್ದರು.
ಸಹಜ ಬಣ್ಣ ತಯಾರಿ: ಹೋಳಿಯನ್ನು ಕೃತಕ ಬಣ್ಣಗಳಿಲ್ಲದೇ ಸಹಜ ಬಣ್ಣ ಹಾಗೂ ಹೂವಿನ ರಾಶಿಯೊಂದಿಗೆ ನೂರಾರು ಮಹಿಳೆಯರು, ಮಕ್ಕಳು ಹೋಳಿ ಆಚರಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಿಬಿರದಲ್ಲಿ ಆದರ್ಶ ಕಾಲನಿ ನಿರಂತರ ಯೋಗ ಕೇಂದ್ರದ ಅಧ್ಯಕ್ಷ ಶಂಕರ ಶೆಟ್ಟಿ, ದತ್ತಾತ್ರೇಯ ಬಾದಲರ್, ಯೋಗ ಶಿಕ್ಷಕಿ ಕೆ.ಧನಲಕ್ಷ್ಮಿ ಮಮತಾ ಹಿರೇಮಠ, ಸರಸ್ವತಿ ಪಾಟೀಲ್, ಮರೇಗೌಡ, ಮೇನಕಾದೇವಿ, ಸೌಭಾಗ್ಯಲಕ್ಷ್ಮಿ, ರಾಜಶ್ರೀ ಇರಕಲ್, ಸುಮಂಗಲಾ, ಮಂಜುಳಾ ಪಾಟೀಲ್, ವಿಮಲಾವಾಣಿ, ವನಿತಾ ಶೆಟ್ಟಿ, ಟಿ.ಬಿ. ಬಡಿಗೇರ್, ಅಮರಗುಂಡಪ್ಪ, ಎಚ್.ಶ್ರೀನಿವಾಸ, ಸುಬ್ಬಾರಾವು, ವೆಂಕೋಬಣ್ಣ, ಮಲ್ಲಿಕಾರ್ಜುನ, ಬಸವರಾಜ ವಕೀಲರು, ಗಂಗಾಧರ, ಕುಬೇರಪ್ಪ, ಅಪ್ಪಣ್ಣ, ಡ್ಯಾನ್ಸ್ ಬಸವರಾಜ, ಕಲ್ಯಾಣ, ರಮೇಶ ಪಾಟೀಲ್, ಉಮೇಶ, ಪ್ರಶಾಂತ, ಸೂಗನಗೌಡ, ರಮೇಶ ಪಾಟೀಲ್, ಚೆನ್ನಬಸವ, ಗದ್ದೆಪ್ಪ, ಚಂದ್ರು ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ಬೀರಪ್ಪ ಶಂಭೋಜಿ ನಿರೂಪಿಸಿದರು. ಬಸಮ್ಮ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.