ರಾಯಚೂರು

ನಾಯಕರಿಗೆ ಗುರುಭಕ್ತಿ ಸಲ್ಲಿಕೆ

Published On :

ರಾಯಚೂರು: ರಾಜಕೀಯದ ಪಾಠ ಹೇಳಿಕೊಟ್ಟವರಿಗೆ ತಿರುಮಂತ್ರ ಹೇಳಿದ ಅನೇಕ ಪ್ರಸಂಗಗಳು ನಡೆಯುವುದು ಸಹಜ. ಆದರೆ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜ ತಮ್ಮ ರಾಜಕೀಯ ಗುರು ದೇವದುರ್ಗದ ಬಿಜೆಪಿ ಪರಾಜಿತ ಅಭ್ಯರ್ಥಿ ಶಿವನಗೌಡ ನಾಯಕರಿಗೆ ಕೊನೆಗೂ ಗುರುಭಕ್ತಿ ಸಲ್ಲಿಸಿದರು.
ನಗರದ ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ಬುಧವಾರ ನಡೆದ ಮತಗಳ ಎಣಿಕೆ ವೇಳೆ ಬಿಜೆಪಿಯಿಂದ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ತಿಪ್ಪರಾಜ ಗೆಲವು ಕಂಡರು. ಇವರು ಮೊದಲು ದೇವದುರ್ಗ ಶಾಸಕರಾಗಿದ್ದ ಶಿವನಗೌಡ ನಾಯಕರ ಆಪ್ತ ಸಹಾಯಕರಾಗಿದ್ದರು.
ಅಲ್ಲಿಂದಲೇ ರಾಜಕೀಯ ಪಟ್ಟುಗಳನ್ನು ಕಲಿತಿದ್ದ ತಿಪ್ಪರಾಜ ಅವರು ಪ್ರಸಕ್ತ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಶಿವನಗೌಡ ನಾಯಕರ ಕೃಪಾಕಟಾಕ್ಷದಿಂದಲೇ ಬಿಜೆಪಿ ಟಿಕೆಟ್ ಪಡೆದಿದ್ದರು. ಚುನಾವಣೆಯಲ್ಲಿ ಗೆಲವನ್ನೂ ಕಂಡಿದ್ದಾರೆ. ಗೆಲವು ಕಾಣುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದಲ್ಲಿದ್ದ ತಮ್ಮ ರಾಜಕೀಯ ಗುರು ಶಿವನಗೌಡ ನಾಯಕ ಅವರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದ ಪಡೆಯುವ ಮೂಲಕ ರಾಜಕೀಯ ಗುರುವಿಗೆ ಗುರುಭಕ್ತಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.