ಎಸ್ಸೆಸ್ಸೆಲ್ಸಿ, ಪಿಯುಸಿ ಕಾಲೇಜುಗಳ ಫಲಿತಾಂಶ
ಸಿಂಧನೂರು: ನಗರದ ಸೋಮರಡ್ಡಿ ಸ್ಮಾರಕ ಜ್ಞಾನ ಜ್ಯೋತಿ ವಿಜ್ಞಾನ ಪದವಿಪೂರ್ವ ಕಾಲೇಜು ಈ ಬಾರಿ ದ್ವೀತಿಯ ಪಿಯುಸಿಯಲ್ಲಿ ಶೇ.93 ಫಲಿತಾಂಶ ಪಡೆದಿದೆ. ಉನ್ನತ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 57, ದ್ವೀತಿಯ ಶ್ರೇಣಿಯಲ್ಲಿ 13 ಹಾಗೂ ತೃತೀಯ ಶ್ರೇಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆಯುಬ್ ಎನ್ನುವ ವಿದ್ಯಾರ್ಥಿ ಶೇ. 96, ಅಖಿಲಲ್ಕುಮಾರರಡ್ಡಿ ಶೇ. 95.83, ವಿರುಪಾಕ್ಷರಡ್ಡಿ, 95.83 ಮತ್ತು ಕುಮಾರಿ ನಂದಾ ಶೇ.93.50 ಅಂಕಗಳನ್ನು ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.
ಕನಕದಾಸ ಕಾಲೇಜು: ನಗರದ ಕನಕದಾಸ ಪದವಿಪೂರ್ವ ಕಾಲೇಜು ಪಿಯು ದ್ವೀತಿಯ ಪರೀಕ್ಷೆ ಉತ್ತಮ ಸಾಧನೆ ಮಾಡಿದೆ ಎಂದು ಕಾಲೇಜು ಪ್ರಾಚಾರ್ಯ ಮಂಜುನಾಥ ತಿಳಿಸಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 67 ವಿದ್ಯಾರ್ಥಿಗಳಲ್ಲಿ ಕೆಂಚಪ್ಪ ಗ್ಯಾನಪ್ಪ ಹಂಚಿನಾಳ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 37 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ, ಇಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಒಟ್ಟು 46 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜು ಸಂಸ್ಥಾಪಕ ಕೆ. ವಿರುಪಾಕ್ಷಪ್ಪ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ, ಪ್ರಾಚಾರ್ಯ ಮಂಜುನಾಥ ಸೋಮಲಾಪುರ ಅಭಿನಂದಿಸಿದ್ದಾರೆ.
ಕನಕದಾಸ ಪ್ರೌಢಶಾಲೆ: ನಗರದ ಕನಕದಾಸ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 11 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿ, ಇನ್ನುಳಿದ 16 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ, ಒಟ್ಟು 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ನರೇಶ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ತುರ್ವಿಹಾಳ ಕನಕದಾಸ ಕಾಲೇಜ್: ತಾಲೂಕಿನ ತುರ್ವಿಹಾಳ ಕನಕದಾಸ ಸ್ವತಂತ್ರ ಪದವಿಪೂರ್ವ ಕಾಲೇಜು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ಶೇ. 72.85 ಫಲಿತಾಂಶ ಪಡೆದಿದ್ದಾರೆ. 29 ವಿದ್ಯಾರ್ಥಿಗಳು ಪ್ರಥಮ, 13 ವಿದ್ಯಾರ್ಥಿಗಳು ದ್ವೀತಿಯ, 9 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ. 100 ರಷ್ಟು ಫಲಿತಾಂಶ ಗಿಟ್ಟಿಸಲಾಗಿದೆ. ರಾಧಿಕಾ ಶರಣಗೌಡ ಎನ್ನುವ ವಿದ್ಯಾರ್ಥಿನಿ ಶೇ. 85.16 ರಷ್ಟು ಫಲಿತಾಂಶ ಪಡೆದು ಉನ್ನತ ಶ್ರೇಣಿಗೆ ಹೆಜ್ಜೆ ಹಾಕಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಡಳಿತಾಧಿಕಾರಿಗಳಾದ ಎಂ.ದೊಡ್ಡಬಸವರಾಜ, ಕೆ.ಕರಿಯಪ್ಪ ಮತ್ತು ಪ್ರಾಚಾರ್ಯರು ಅಭಿನಂದಿಸಿದ್ದಾರೆ.
ಮ್ಯಾಜಿಕ್ ಠುಸ್!
ಯಾದಗಿರಿ: ಎರಡು ಬಾರಿ ಎರಡು ಪಕ್ಷದಿಂದ ಗೆದ್ದು, ಈ ಬಾರಿ ಮತ್ತೊಂದು ಪಕ್ಷದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದ ಮಾಜಿ ಸಚಿವ ರಾಜುಗೌಡರ ಮ್ಯಾಜಿಕ್ ಈ ಬಾರಿ ನಡೆಯಲಿಲ್ಲ. ಸುರಪುರ ಎಸ್ಟಿ ಮೀಸಲು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ 4075 ಮತಗಳ ಅಂತರದಿಂದ ರಾಜುಗೌಡರ ವಿರುದ್ಧ ಗೆದ್ದಿದ್ದಾರೆ. ಕಾಂಗ್ರೆಸ್ ಬಾಗಿಲು ಬಡಿದು ಬಂದು ಕೊನೆ ಕ್ಷಣದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ರಾಜುಗೌಡ ಹಾಗೂ ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಆದ್ದರಿಂದ ತೀವ್ರ ಕುತೂಹಲ ಸೃಷ್ಟಿಸಿದ್ದ ಕ್ಷೇತ್ರವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

