ಬಸವ ಪ್ರಸಾದ ವಸತಿ ನಿಲಯಕ್ಕೆ ಅರ್ಜಿ
ಸಿಂಧನೂರು: 2013-14ನೇ ಸಾಲಿನ 8ನೇ ತರಗತಿಯಿಂದ ಪದವಿ ಕಾಲೇಜಿನವರಿಗೆ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ನಗರದ ಕುಷ್ಟಗಿ ರಸ್ತೆಯಲ್ಲಿ ಬಸವ ಚಾರಿಟೇಬಲ್ ಟ್ರಸ್ಟ್) ಅಡಿಯಲ್ಲಿ ನಡೆವ ಬಸವ ಪ್ರಸಾದ ವಸತಿ ನಿಲಯಕ್ಕೆ ಅರ್ಜ್ನಿ ಮೇ 18ರಿಂದ ಪಡೆಯಬಹುದು. ಮೇ 31ರೊಳಗೆ ಬಸವ ಪ್ರಸಾದ ನಿಲಯದ ಕಾರ್ಯಾಲಯಕ್ಕೆ ಸಲ್ಲಿಸಬೇಕು ಜೂ. 5ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಬಸವ ಚಾರಿಟೇಬಲ್ ಟ್ರಸ್ಟ್ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಸೂಚನೆಗಳು: ಶೇ.40 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ನಿಗದಿತ ಅರ್ಜಿಯೊಂದಿಗೆ ವರ್ಗಾವಣೆ ಪ್ರಮಾಣ ಪತ್ರ, ಅಂಕಪಟ್ಟಿ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು, ನಿಗದಿಪಡಿಸಿದ ವಿದ್ಯಾರ್ಥಿಗಳಲ್ಲಿ ಬಸವ ಚಾರಿಟೇಬಲ್ ಟ್ರಸ್ಟನಡಿಯಲ್ಲಿ ನಡೆಯುವ ಎಲ್.ಬಿ.ಕೆ. ಕಾಲೇಜಿಗೆ 55 ಸೀಟುಗಳು, ಪ್ರೌಢಶಾಲೆಗೆ 10 ಸೀಟುಗಳು, ಪಿಯುಸಿ (ವಿಜ್ಞಾನ ವಿಭಾಗ)ಕ್ಕೆ 05, ಸೀಟು, ಐಟಿಐ ವಿದ್ಯಾರ್ಥಿಗಳಿಗೆ 10 ಸೀಟು, ಪದವಿ ಕಾಲೇಜಿಗೆ 20 ಸೀಟುಗಳು ಭರ್ತಿ ಮಾಡಿದ ಅರ್ಜಿಗಳನ್ನು ಆಡಳಿತಾಧಿಕಾರಿಗಳು ಬಸವ ಚಾರಿಟೇಬಲ್ ಟ್ರಸ್ಟ್) ಎನ್ಜಿಒ ಕಾಲೋನಿ ಕುಷ್ಟಗಿ ರೋಡ್ ಸಿಂಧನೂರ ಇವರ ಕಾರ್ಯಾಲಯಕ್ಕೆ ತಲುಪಿಸತಕ್ಕದ್ದು.
ಅರ್ಜಿ ಆಹ್ವಾನ
ಸಿಂಧನೂರು: 2013-14 ನೇ ಸಾಲಿಗೆ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ಹಾಸ್ಟೆಲ್ಗೆ 5 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ ಮೇ 30ರ ಒಳಗಾಗಿ ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಲು ಕೋರಲಾಗಿದೆ. ವಾಸಸ್ಥಳ, ಪ್ರಮಾಣಪತ್ರ, ಮುಖ್ಯೋಪಾಧ್ಯಾಯರಿಂದ ದೃಢೀಕರಣ ವಿವರಗಳನ್ನು ಸಲ್ಲಿಸಲು ನಾಗರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

