ರಾಯರ ಮಠದ ಮಹಾದ್ವಾರ ಸಮರ್ಪಣೆ; ಹೋಮ ಹವನ
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮುಖ ಮಂಟಪ(ಮಹಾದ್ವಾರ) ಸಮರ್ಪಣೆ ಕಾರ್ಯಕ್ರಮದ ಎರಡನೇ ದಿನ ಶ್ರೀಮಠದ ಪಂಡಿತರು ಹಾಗೂ ಅರ್ಚಕರ ನೇತೃತ್ವದಲ್ಲಿ ವಿವಿಧ ಹೋಮಗಳನ್ನು ನೆರವೇರಿಸಲಾಯಿತು.
ಮುಖಮಂಟಪದ ದಾನಿಗಳಾದ ಹೊಸಪೇಟೆಯ ಉದ್ಯಮಿಗಳಾದ ರಂಗನಗೌಡರು ಮತ್ತು ದಂಪತಿ, ಎಚ್.ಆರ್. ಗವಿಯಪ್ಪನವರು, ಕೊಪ್ಪಳದ ಮಾಜಿ ಸಂಸದ ಎಚ್.ಜಿ. ರಾಮುಲು ಸೇರಿ ಕುಟುಂಬ ವರ್ಗದವರು ಪಾಲ್ಗೊಂಡಿದ್ದ ಧಾರ್ಮಿಕ ಆಚರಣೆಗಳಲ್ಲಿ ಮೊದಲಿಗೆ ಶಾಂತಿ ಹೋಮ, ನವಗ್ರಹ ಶಾಂತಿ ಹೋಮ, ವಾಸ್ತು ಶಾಂತಿ ಹೋಮ, ರಾಕ್ಷೋಜ್ಞ ಹೋಮ ನೆರವೇರಿಸಲಾಯಿತು.
ಇಂದು ಹೋಮಗಳ ಪೂರ್ಣಾಹುತಿ: ಅದೇ ರೀತಿ ಮುಖ ಮಂಟಪ ಸಮರ್ಪಣೆ ಹಿನ್ನೆಲೆ ಲೋಕ ಕಲ್ಯಾಣಾರ್ಥವಾಗಿ ಮಹಾವಿಷ್ಣುಯಾಗ ಮತ್ತು ಮಹಾ ಸುದರ್ಶನ ಹೋಮಗಳನ್ನು ನೆರವೇರಿಸಲಾಯಿತು. ಹೋಮಗಳ ಪೂರ್ಣಾಹುತಿ ಕಾರ್ಯಕ್ರಮ ಮೇ 16ರಂದು ನಡೆಯಲಿದ್ದು, ಅದೇ ದಿನ ಬೆಳಗ್ಗೆ ಮುಖ ಮಂಟಪದ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀಮಠ ತಿಳಿಸಿದೆ. ಶ್ರೀಮಠದ ಪಂಡಿತರಾದ ಚಿಲಕಲಡೋಣಾ ವೆಂಕಟೇಶಾಚಾರ್ಯ, ಲಕ್ಷ್ಮಿ ನಾರಾಯಾಣಾಚಾರ್ಯ, ಕಡಪ ರಾಘವೇಂದ್ರಾಚಾರ್ಯ, ಕಡಪ ಹನುಮಂತಾಚಾರ್ಯ, ಚೇಲೇರಿ ಭೀಮಸೇನಾಚಾರ್ಯ ಸೇರಿದಂತೆ ಅನೇಕ ಅರ್ಚಕರು ಹೋಮಹವನಗಳ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

