ರಾಯಚೂರು

ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲದು

Published On :

ಮುದಗಲ್: ಚುನಾವಣೆಗಳು ಬರುವುದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿದ್ದು ಚುನಾವಣೆ ಮುಗಿದ ಬಳಿಕ ಪ್ರತಿಪಕ್ಷಗಳು ಹಾಗೂ ಆಡಳಿತಾರೂಢ ಪಕ್ಷಗಳು ಒಡಗೂಡಿ ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸುವಂತೆ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಸಲಹೆ ನೀಡಿದರು.
ಪಟ್ಟಣ ಸಮೀಪದ ಉಳಿಮೇಶ್ವರ ಗ್ರಾಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕ್ಷೇತ್ರದ ಕೆಲ ಗ್ರಾಮೀಣ ಭಾಗಗಳನ್ನು ಗುರುತಿಸಿ ಸಂಘಟನಾತ್ಮಕವಾಗಿ ಅಭಿವೃದ್ಧಿ ಪಡಿಸುವಲ್ಲಿ ನಾನು ಶ್ರಮಿಸುವೆ ಎಂದರು.
ಪಟ್ಟಣ ಸೇರಿದಂತೆ ಪಿಕಳಿಹಾಳ, ಉಳಿಮೇಶ್ವರ, ವ್ಯಾಕರನಾಳ, ತಲೆಕಟ್ಟ, ಅಂಕಲಿಮಠ ಗ್ರಾಮಕ್ಕೆ ತೆರಳಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಕಳೆದ 5 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಮತ್ತು 20 ತಿಂಗಳ ಅವಧಿಯಲ್ಲಿಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನಪರ ಯೋಜನೆಗೆ ನನ್ನನ್ನು ಬೆಂಬಲಿಸಿ ಚುನಾವಣೆಯಲ್ಲಿ ಗೆಲವು ಕೊಟ್ಟಿದ್ದೀರಿ. ನಾನು ನಿಮಗೆ ದ್ರೋಹ ಬಗೆಯಲಾರೆ. ಮುದಗಲ್ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಮೀರ್‌ಬೇಗ್ ಉಸ್ತಾದ, ಪಪಂ ಸದಸ್ಯರಾದ ವೀರೇಶ ವಡ್ಡರ, ಹೇಮಂತಕುಮಾರ ನಾಗಲಾಪುರ, ಖಾಜಾಪಾಷಾ ಗಾಡವಾನ, ಅಬ್ದುಲ್ ರವೂಫ್, ಬಂದೇನವಾಜ್ ಬಡಿಗೇರ, ರಜ್ಜಬ, ವೀರನಗೌಡ ಲೆಕ್ಕಿಹಾಳ, ಚಂದ್ರಶೇಖರ ವಕೀಲರು, ಮಹಾಂತಗೌಡ ಬಯ್ಯಾಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.