ಸತ್ಯನಾರಾಯಣ, ಅವತಾರತ್ರಯ ದೇವರ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧತೆ
ಗುಲ್ಬರ್ಗ: ಇಲ್ಲಿನ ವರ್ತುಲ ರಸ್ತೆಯ ಹೈಕೋರ್ಟ್ ಸಂಚಾರಿ ಪೀಠದ ಮುಂದಿನ ಸತ್ಯನಾರಾಯಣ ನಗರದಲ್ಲಿ ಮೇ 29ರಂದು ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರು ಹಾಗೂ ಅವತಾರತ್ರಯ ಮುಖ್ಯಪ್ರಾಣ ದೇವರ ಪ್ರತಿಮೆಗಳ ಪ್ರತಿಷ್ಠಾಪನೆ ನಡೆಯಲಿದೆ.
ಇದರಂಗವಾಗಿ ಮೇ 25 ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಭಕ್ತಾದಿಗಳು ಈ ಸಮಾರಂಭಗಳಲ್ಲಿ ಭಾಗವಹಿಸಿ ಸತ್ಯನಾರಾಯಣ- ಮುಖ್ಯಪ್ರಾಣ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಈ ದೇಗುಲಗಳ ಉಸ್ತುವಾರಿ ಪ್ರಾಕ್ಟೂರ್ ಮಧುಸೂಧನಾಚಾರ್ಯ ಕೋರಿದ್ದಾರೆ.
ಮೇ 29ರ ಬೆಳಗ್ಗೆ ಸತ್ಯನಾರಾಯಣ ಹಾಗೂ ಮುಖ್ಯಪ್ರಾಣರ ಪುತ್ಥಳಿಗಳ ಪ್ರತಿಷ್ಠಾಪನೆ ಸ್ಥಳೀಯ ರಘುನಾಥತೀರ್ಥ ಅಧ್ಯಯನಾಶ್ರಮದ ಮುಖ್ಯಸ್ಥರು, ಸಂಸ್ಕೃತ ಪಂಡಿತರಾದ ರಾಮಾಚಾರ್ಯ ಅವಧಾನಿ ಅವರಿಂದ ನೆರವೇರಲಿದೆ. ಅಂದು ಬೆ.6ರಿಂದಲೇ ಪುತ್ಥಳಿಗಳ ಪ್ರತಿಷ್ಠಾಪನೆ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಧುಸೂಧನಾಚಾರ್ಯರು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಪುತ್ಥಳಿಗಳ ಪ್ರತಿಷ್ಠಾಪನೆ ನಿಮಿತ್ತ ಮೇ 25ರಂದು ನೂತನ ದೇಗುಲದ ವಾಸ್ತುಶಾಂತಿ ನಡೆಯಲಿದೆ. 26ರಿಂದ 28ರ ವರೆಗಿನ 3 ದಿನಗಳ ಕಾಲ ನೂತನ ದೇಗುಲದಲ್ಲಿ ಪ್ರತಿಷ್ಠನಾಂಗ ಸ್ವಸ್ತಿವಾಚನ, ಜಲಹರಣ, ಗೋಪೂಜೆ, ಸಪ್ತ ಅದಿವಾಸಗಳು ಪ್ರತಿಷ್ಠಾಪನಾಂಗ, ಹೋಮಗಳು ವಿಧ್ಯುಕ್ತವಾಗಿ ನಡೆಯಲಿವೆ. ಈ ವೇಳೆ ಮಣ್ಣೂರು ವೇದೇಶತೀರ್ಥ ವಿದ್ಯಾಪೀಠದ ಕುಲಪತಿ ಅನಂತಾಚಾರ್ಯ ಅಕಮಂಚಿ, ಗೋಪಾಲಾಚಾರ್ಯ ಅಕಮಂಚಿ, ಗಿರೀಶಾಚಾರ್ಯ ಅವಧಾನಿ, ಹಣಮಂತಾಚಾರ್ಯ ಸರಡಗಿ, ವಿಷ್ಣುದಾಸಾಚಾರ್ಯ ಖಜೂರಿ, ಶ್ರೀನಿವಾಸಾಚಾರ್ಯ ಪದಕಿ, ಭೀಮಸೇನಾಚಾರ್ಯ ಜೋಷಿ, ಪ್ರಸನ್ನಾಚಾರ್ಯ, ಮೋಗರೆ ಗೋಪಾಲಾಚಾರ್ಯ, ವಿನೋದಾಚಾರ್ಯ ಗಲಗಲಿ ಇವರಿಂದ ವಿವಿಧ ವಿಷಯಗಳ ಉಪನ್ಯಾಸ ನಡೆಯಲಿವೆ.
ಮೇ 29ರ ಮೂರ್ತಿ ಪ್ರತಿಷ್ಠಾಪನೆಗೆ ಅಂದು ಬೆ.6ಕ್ಕೆ ಪ್ರಾಣ ಪ್ರತಿಷ್ಠಾಪನೆ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳನ್ನು ವಿಧ್ಯುಕ್ತವಾಗಿ ಪಂಡಿತರಾದ ರಾಮಾಚಾರ್ಯ ಅವಧಾನಿ ಇವರು ನೆರವೇರಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಧುಸೂಧನಾಚಾರ್ಯ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

