ಲೈಂಗಿಕ ನಿಷ್ಕ್ರಿಯತೆಗೆ ಕಾರಣ ಹಲವು
ರಾಯಚೂರು: ನಗರದಲ್ಲಿ ಲೈಂಗಿಕ ನಿಷ್ಕ್ರಿಯತೆಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಮತ್ತು ಶ್ರೀ ನರ್ಸಿಂಗ್ ಹೋಂ ಹೆಸರಿನ ನೂತನ ಆಸ್ಪತ್ರೆ ಆರಂಭಿಸಲಾಗಿದೆ ಎಂದು ಅಂಕುರ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಎಂಡ್ರಾಲಾಜಿಸ್ಟ್ ಡಾ. ವಾಸನ್ ತಿಳಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನವನ ಸುಖ ದಾಂಪತ್ಯ ಜೀವನಕ್ಕೆ ಲೈಂಗಿಕ ಚಟುವಟಿಕೆ ಪ್ರಮುಖ ಪಾತ್ರ ವಹಿಸಲಿದ್ದು, ದಾಂಪತ್ಯ ಜೀವನದಲ್ಲಿ ಲೈಂಗಿಕ ನಿಷ್ಕ್ರಿಯತೆ ಉಂಟಾಗಲು ಅನೇಕ ಕಾರಣಗಳಿವೆ. ಮಾನಸಿಕ ಅಥವಾ ರಕ್ತದ ಪೂರೈಕೆ ಸಮರ್ಪಕ ರೀತಿಯಲ್ಲಿ ಇಲ್ಲದಿರುವಾಗ ನರಗಳಲ್ಲಿ ನ್ಯೂನ್ಯತೆ ಉಂಟಾಗಿ ಲೈಂಗಿಕ ಕ್ರಿಯೆಯಲ್ಲಿ ವಿಫಲತೆ ಅಥವಾ ಅಸಮರ್ಥತೆ ಕಂಡು ಬರುತ್ತದೆ.
ಗಂಡಸರಲ್ಲಿನ ಲೈಂಗಿಕ ನಿಷ್ಕಿಯತೆಗೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲು ಈ ಭಾಗದಲ್ಲಿ ಆಸ್ಪತ್ರೆಗಳ ಕೊರತೆ ಇದ್ದ ಪ್ರಯುಕ್ತ ಬೆಂಗಳೂರಿನ ಆಸ್ಪತ್ರೆಗೆ ತೆರಳುವ ಅನಿವಾರ್ಯತೆ ಎದುರಾಗುತ್ತಿತ್ತು. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ರಾಯಚೂರು ನಗರದ ಏಕ್ ಮಿನಾರ್ ಹತ್ತಿರ, ಬೇರೂನ್ ಖಿಲ್ಲಾದ ಶ್ರೀ ನರ್ಸಿಂಗ್ ಹೋಂ ಎಂಬ ನೂತನ ಆಸ್ಪತ್ರೆ ಆರಂಭಿಸಲಾಗಿದೆ. ಆಸ್ಪತ್ರೆ ತಜ್ಞ ವೈದ್ಯ ಡಾ. ಶ್ರೀಶೈಲೇಶ್ ಅಮರಖೇಡ್ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಲೈಂಗಿಕ ನಿಷ್ಕ್ರಿಯತೆ ಮತ್ತು ದೌರ್ಬಲ್ಯಗಳಿಗೆ ಅಮರ್ ಖೇಡ್ ಆಸ್ಪತ್ರೆಯಲ್ಲಿ ಪಿನೈಲ್ ಡಪ್ಲರ್ ಟಿಶ್ಯೂ ಹಾಮೋನಿಕ್ ಪರೀಕ್ಷೆ, ಪಿನೈಲ್ ಲೇಸರ್ ಫೋಟೋಸ್ಪೆಕ್ಟ್ರೋ ಫೋಟೋಮೆಟ್ರಿ, ರಕ್ತನಾಳಗಳ ಮಧ್ಯ ಮತ್ತು ಕೊನೆಯ ಭಾಗಗಳ ಪರೀಕ್ಷೆ, ಶಾಕ್ವೇವ್ ಥೆರಪಿ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಿದರು. ಡಾ. ಪ್ರವೀಣ ಜೋಷಿ, ಸಂಸ್ಥೆ ಸಂಚಾಲಕ ನಿತಿನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

