ಶಾಲಾ ಸಮಯ, ವೇಳಾ ಪತ್ರಿಕೆ ಬದಲಿಸಲು ಒತ್ತಾಯ
ಕ.ಪ್ರ. ವಾರ್ತೆ, ಸಿಂಧನೂರು, ಮೇ 29
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ಪ್ರಾಥಮಿಕ- ಪ್ರೌಢಶಾಲೆಗಳ ಸಮಯವನ್ನು ಮತ್ತು ಶಾಲಾ ವೇಳಾ ಪತ್ರಿಕೆಯನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಪಿ.ವಿರೂಪಾಕ್ಷಬಾಬು ಪಾಟೀಲ್ ನೇತೃತ್ವದಲ್ಲಿ ವಿವಿಧ ಪದಾಧಿಕಾರಿಗಳು ಬುಧವಾರ ಡಿಡಿಪಿಐ ಹಾಗೂ ಮುಖ್ಯಮಂತ್ರಿಗಳಿಗೆ ಬಿಇಒ ವೃಷಭೇಂದ್ರಯ್ಯ ಸ್ವಾಮಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಶುಕ್ರವಾರ, ಶನಿವಾರ ತೊಂದರೆ: ಉಪ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಕಳೆದ 2012- 13ನೇ ಸಾಲಿನ ಶಾಲಾ ಸಮಯ ಮತ್ತು ಮುಖ್ಯವಾಗಿ ಮಧ್ಯಾಹ್ನದ ಊಟದ ವಿರಾಮ ಕೇವಲ 45 ನಿಮಿಷ ಇತ್ತು. ಶುಕ್ರವಾರದಂದು ಮುಸ್ಲಿಂ ಸಮುದಾಯದ ಮಕ್ಕಳು ನಮಾಜ್ ಮಾಡಿಕೊಂಡು ಮತ್ತೆ ಶಾಲೆಗೆ ಬರಲು ತೊಂದರೆಯಾಗುತ್ತದೆ. ಅಲ್ಲದೇ ಶನಿವಾರ ಬೆ.7.30ಕ್ಕೆ ಶಾಲೆಗೆ ಬರಲು ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ಪ್ರತಿ ಶನಿವಾರವೂ ಮಕ್ಕಳ ಹಾಜರಾತಿಯಲ್ಲಿ ಕಡಿಮೆಯಾಗಿದೆ. ಚಳಿಗಾಲದಲ್ಲಿ ಬೆಳಗ್ಗೆ ಬೇಗನೆ ಎದ್ದು ಶಾಲೆಗೆ ಬರುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಮನವಿಯಲ್ಲೇನಿದೆ?: ಈ ಹಿಂದೆ 2011- 12ನೇ ಶೈಕ್ಷಣಿಕ ಸಾಲಿನಲ್ಲಿದ್ದ 9.30ರಿಂದ 10.00ರ ವರೆಗೆ ಬೆಃಗ್ಗೆ(ಶಾಲಾ ಸ್ವಚ್ಛತೆ, ಪ್ರಾರ್ಥನೆ) 10.00ರಿಂದ 1.30ರ ವರೆಗೆ ಬೆಳಗಿನಅವಧಿ, 1.30ರಿಂದ 2.30ರವರೆಗೆ ಮಧ್ಯಾಹ್ನದ ಊಟದ ಸಮಯ(1 ತಾಸು), 2.30ರಿಂದ 4.30 ಮಧ್ಯಾಹ್ನದ ಅವಧಿ. ಈ ರೀತಿ ಶಾಲಾ ಸಮಯ ಮತ್ತು ವೇಳಾ ಪತ್ರಿಕೆಯನ್ನು 2013- 14ನೇ ಸಾಲಿನ ಶೈಕ್ಷಣಿಕ ಅವಧಿಗೆ ವಿಸ್ತರಿಸಬೇಕು. ಮೊದಲಿದ್ದ ವೇಳಾ ಪಟ್ಟಿಯನ್ನು ಪರಿಷ್ಕರಿಸಿ, ಮುಂದುವರೆಸಿ ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿ ಹಾಗೂ ಪಾಲಕರಿಗೆ ಅನುಕೂಲ ಮಾಡಿಕೊಟ್ಟು ಸಹಕರಿಸಬೇಕೆಂದು ತಾಲೂಕು ಘಟಕದ ಅಧ್ಯಕ್ಷ ಪಿ.ವಿರೂಪಾಕ್ಷಬಾಬು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ಮಲ್ಲಪ್ಪ, ನಿರ್ದೇಶಕರಾದ ಬಸವರಾಜ ಸ್ವಾಮಿ, ಮುಖ್ಯಗುರುಗಳಾದ ಮೌಲಾಸಾಬ, ಚೆನ್ನಬಸಯ್ಯ ಗುಡದೂರು, ಅಬ್ಬಾಸಲಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

