ರಾಯಚೂರು

ನಾಳೆ ನಿರುಪಾಧೀಶ್ವರ ಜಾತ್ರಾ ಮಹೋತ್ಸವ

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಮೇ 30
ಸಮೀಪದ ಅಂಕಲಿಮಠ ಭಕ್ತಿಯ ನಾಡು. ನಿತ್ಯ ಅನ್ನದಾಸೋಹ ತಾಣವಾಗಿವಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ನಿರುಪಾಧೀಶ್ವರರ ಪುಣ್ಯಾರಾಧನೆ ಜೂ. 1ರಂದು ನಡೆಯಲಿದೆ.
ಹಿನ್ನಲೆ: ಇಲ್ಲಿನ ಪಂಡಿತರಾದ ಗುರುಲಿಂಗಯ್ಯ ಕಾಯಕವೇ ಕೈಲಾಸ ಎಂದು ಅರಿತು ಸದ್ಭಕ್ತಿ, ದಯೆ, ಧಾನ,ಪರೋಪಕಾರ ಕಾಯಕ ನಿಷ್ಠೆ ಆಚಾರ ವಿಚಾರ ಧರ್ಮಶಾಸ್ತ್ರ, ಪುರಾಣದಲ್ಲಿ  ಆಸಕ್ತರಾಗಿ ಶಿವಪೂಜೆ ನಿಷ್ಠರಾಗಿದ್ದರು. ಬಳಗಾನೂರು ಗ್ರಾಮದ ವೇ.ಮೂ. ಗುರುಮೂರ್ತಿ ಸ್ವಾಮಿ ಮಗಳಾದ ರಾಚಮ್ಮನವರನ್ನು ಕೊಟ್ಟು ಮದುವೆ ಮಾಡಿದರು.
ಇವರಿಗೆ ನಿರುಪಾಧೀಶ್ವರರು ಜನಿಸಿದರು. ಹುಟ್ಟು ಹೆಸರು ವಿರೂಪಾಕ್ಷನೆಂದು ನಾಮಕರಣ ಮಾಡಲಾಗಿತ್ತು. ಬೆಳೆದಂತೆಲ್ಲ ನಿರುಪಾಧೀಶ್ವರರು ಸಂಚರಿಸುತ್ತಾ ರಕ್ಕಸಿ ಎನ್ನುವ ಗುಡ್ಡಕ್ಕೆ ಬರುತ್ತಾರೆ. ಅಲ್ಲಿ ರಾಕ್ಷಸರೇ ವಾಸಿಸುತ್ತಿದ್ದರು ಎನ್ನುವುದನ್ನು ಕಂಡು, ಅಲ್ಲಿನ ಭಯಾನಕ ಗವಿಯನ್ನು ಕಾಣುತ್ತಾರೆ.
ತಪಸ್ಸು: ಅದೇ ಈಗಿನ ಅಂಕಲಿಮಠ. ಅದನ್ನು ತಮ್ಮ ತಪಸ್ಸಿಗೆ ಸರಿಯಾದ ಸ್ಥಳ ಎಂದು ನಿರುಪಾಧೀಶ್ವರರು ಆಯ್ದುಕೊಳ್ಳುತ್ತಾರೆ. ತಪಸ್ಸಿಗೆ ಮೆಚ್ಚಿದ ದೇವಿ ಪ್ರತ್ಯಕ್ಷಳಾಗಿ ಏನು ವರ ಬೇಕು ಬೇಡು ಎಂದು ಕೇಳುತ್ತಾಳೆ. ಆಗ ಏನನ್ನು ಬೇಡದ ವಿರೂಪಾಕ್ಷ ತನ್ನ ಕಾಯಕವೆಲ್ಲಿ ನಡೆಯುತ್ತದೆಯೋ ಅಲ್ಲಿ ನೀನು ಇರಬೇಕು ಎಂದು ವಚನ ಪಡೆಯುತ್ತಾನೆ.
ಅದರಂತೆ ದೇವಿಯು ಇಲ್ಲಿ ನೆಲೆಸಿದ್ದಾಳೆ ಎನ್ನುವುದು ಪ್ರತೀತಿ. ನಿರುಪಾಧೀಶ್ವರರ ತರುವಾಯ ಸುವರ್ಣ ಸ್ವಾಮಿ, ಬಸವರಾಜ ಸ್ವಾಮಿ, ವೀರಭದ್ರ ಸ್ವಾಮಿ, ಪಾರ್ವತಮ್ಮ ಅಮ್ಮ ಹೆಸರುವಾಸಿಯಾಗಿದ್ದಾರೆ. ಪ್ರತಿದಿನವೂ ಈ ಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅವರಿಗೆ ದಾಸೋಹ ಏರ್ಪಡಿಸಲಾಗುತ್ತದೆ.
ವಿವಿಧೆಡೆಯಿಂದ ಭಕ್ತರು: ಜೂ. 1ರಂದು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಕೊಪ್ಪಳ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ಗುಲ್ಬರ್ಗ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಹಾರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ,ದೊಡ್ಡನಗೌಡ ಪಾಟೀಲ್, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್  ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.