ಕನ್ನಡ ಭಾಷೆಗೆ ಒದಗಿದ ಸ್ಥಿತಿ ಕಳವಳಕಾರಿ: ಪ್ರಾಚಾರ್ಯ ಶಿವರಾಜ
ಕನ್ನಡಪ್ರಭ ವಾರ್ತೆ / ಸಿಂಧನೂರು / ನ.1
ಕನ್ನಡ ನಾಡಿನಲ್ಲಿ ನಮ್ಮ ಭಾಷೆಗೆ ನಾವು ಕಾವಲು ಸಮಿತಿ, ಅಭಿವೃದ್ಧಿ ಸಮಿತಿ, ರಕ್ಷಣಾ ಸಮಿತಿ, ಕ್ರೀಯಾಶೀಲ ಸಮಿತಿಗಳನ್ನು ಮಾಡಿ ಕನ್ನಡ ರಕ್ಷಿಸುವಂತಾಗಿದೆ ಇದು ನಿಜಕ್ಕೂ ದುರದೃಷ್ಟಕರ ಎಂದು ಗುಲ್ಬರ್ಗ ವಿಭಾಗದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಹಾಗೂ ಪ್ರಾಚಾರ್ಯ ಎಸ್.ಶಿವರಾಜ ವಿಷಾದ ವ್ಯಕ್ತಪಡಿಸಿದರು.
ಜವಳಗೇರಾ ಸರ್ಕಾರಿ ಪಪೂ ಕಾಲೇಜಿನ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಡೀ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಮತ್ತು ಗೌರವ ಕನ್ನಡಕ್ಕಿದೆ.
8 ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಭಾಷೆ ಅಗ್ರಪಂಕ್ತಿಯಲ್ಲಿದೆ. ಮಾಸ್ತಿ ಕನ್ನಡದ ಆಸ್ತಿ ಎಂದೇ ಪ್ರಖ್ಯಾತಿ ಹೊಂದಿದವರ ಮಾತೃಭಾಷೆ ತಮಿಳು. ಬೇಂದ್ರೆಯವರ ಮಾತೃ ಭಾಷೆ ಮರಾಠಿ. ಆದರೂ ಕನ್ನಡದ ಸಾಹಿತ್ಯದಲ್ಲಿ ಅವರುಗಳು ಮಾಡಿದ ಸಾಧನೆ ಮತ್ತು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಂತಹ ಆ ಮಹನೀಯರನ್ನು ಮರೆಯಲಾದೀತೆ, ನಮ್ಮ ಭಾಷೆಯ ಬಗ್ಗೆ ಪ್ರೀತಿ ಇರಲಿ, ಬೇರೆ ಭಾಷೆಯ ಬಗ್ಗೆ ಗೌರವ ಇರಲಿ ಎಂದು ಹೇಳಿದರು.
ಕನ್ನಡ ಚಲನಚಿತ್ರ ವೀಕ್ಷಿಸಿ: ಸಹಕಾರಿ ಬ್ಯಾಂಕಿನ ಹಣಕಾಸು ಅಧಿಕಾರಿ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಕನ್ನಡದ ಸತ್ವ ಮತ್ತು ಭಾಷೆಯ ಆನಂದವನ್ನು ಪಡೆಯಬೇಕೆಂದರೆ ವಿದ್ಯಾರ್ಥಿಗಳು ಕನ್ನಡದ ಮೇರು ನಟ ಡಾ. ರಾಜ್ಕುಮಾರ ಅವರ ಕನ್ನಡ ಚಿತ್ರಗಳನ್ನು ವೀಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.
ಉಪನ್ಯಾಸಕ ಬಸುಲಿಂಗಯ್ಯ,ಇಂದುಮತಿ, ಮಲ್ಲಿಕಾರ್ಜುನ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಲ್ಲನಗೌಡ, ಪ್ರೌಢಶಾಲಾ ಉಪಾಧ್ಯಕ್ಷ ನಾಸಿರಸಾಬ, ತಿಮ್ಮಯ್ಯ, ಲೋಕನಾಥ, ಯಂಕಣ್ಣ, ಮಾರುತಿ ಊರಿನ ಇತರ ಗಣ್ಯರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿಭಾಗವಹಿಸಿದ್ದರು.
ವಿದ್ಯಾರ್ಥಿನಿ ಅಮಲ ಸ್ವಾಗತಿಸಿದಳು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕಿ ಶೀಲಾ ಡಿ.ಎಸ್ ನೆರವೇರಿಸಿದರು. ರಾಜಮಾ ವಂದಿಸಿದಳು.
ದುದ್ದುಪೂಡಿ ಕಾಲೇಜಿನಲ್ಲಿ..: ನಗರದ ದುದ್ದುಪುಡಿ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ವಾಣಿಜ್ಯ ಉಪನ್ಯಾಸಕ ಸೂಗೂರಯ್ಯ ಸಾಲಿಮಠ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಕಾಲೇಜಿನ ಕಾರ್ಯದರ್ಶಿ ಆರ್.ಸಿ. ಪಾಟೀಲ್, ಉಪನ್ಯಾಸಕ ವೃಂದ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸ್ವಯಂ ಸೇವಕಿಯರು ನಾಡಗೀತೆ ಹಾಡಿದರು.
ಸರ್ವೋದಯ ಪ್ರೌಢಶಾಲೆಯಲ್ಲಿ..: ನಗರದ ಸರ್ವೋದಯ ಪ್ರೌಢಶಾಲೆ ಮತ್ತು ಎಂ.ಮಲ್ಲಪ್ಪ ಸ್ಮಾರಕ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ವಿ. ಪಾಟೀಲ್ ಮಾತನಾಡಿ, ಆಂಗ್ಲ ಭಾಷೆಯ ವ್ಯಾಮೋಹ ಬಿಟ್ಟು ಎಲ್ಲರೂ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು. ಮಾತೃಭಾಷೆಗೆ ಆದ್ಯತೆ ನೀಡಬೇಕು. ಕನ್ನಡವೇ ಸತ್ಯ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಮರೇಶಪ್ಪ ಮೈಲಾರ, ಶಿಕ್ಷಕ ಸಿಬ್ಬಂದಿ ಮತ್ತಿತರರು ಇದ್ದರು.
ಹಾಲು- ಹಣ್ಣು ವಿತರಣೆ: ಜೈ ಕನ್ನಡ ರಕ್ಷಣಾ ವೇದಿಕೆಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಶುಕ್ರವಾರ ಹಾಲು-ಹಣ್ಣು ವಿತರಿಸಲಾಯಿತು.
ಪಿಎಸ್ಐ ಬಾಳನಗೌಡ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕರವೀಪ್ರಭು ಕ್ಯಾಲಕೊಂಡ, ಸಂಘಟನೆಯ ತಾಲೂಕಾಧ್ಯಕ್ಷ ವೀರೇಶ ಬಾವಿಮನಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಜಾಲಿಹಾಳ, ಸಂಘಟನಾ ಕಾರ್ಯದರ್ಶಿ ಹನುಮಂತ ಯರದಿಹಾಳ, ಸಂ.ಪ್ರಧಾನ ಕಾರ್ಯದರ್ಶಿ ಬಸವರಾಜ, ಟಿಪ್ಪುಸುಲ್ತಾನ್, ಎನ್.ಎಚ್. ಬಾಷಾ, ಸದ್ದಾಂ ಹುಸೇನ್, ಮರ್ದಾನಲಿ ಸೇರಿದಂತೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

