ಮೋದಿ ರ್ಯಾಲಿ: ಟಿಕೆಟ್ ವಿತರಣೆಗೆ ಚಾಲನೆ
ದೇವದುರ್ಗ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.17 ರಂದು ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಟಿಕೆಟ್ ವಿತರಣೆ ಪ್ರಕ್ರಿಯೆಗೆ ಬುಧವಾರ ತಾಲೂಕು ಬಿಜೆಪಿ ಪಕ್ಷದಿಂದ ಚಾಲನೆ ನೀಡಲಾಯಿತು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಗಬ್ಬೂರು ಬ್ಲಾಕ್ ಅಧ್ಯಕ್ಷ ಜಂಬಣ್ಣ ನೀಲೋಗಲ್ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಮೋದಿ ಅವರ ರ್ಯಾಲಿಗೆ ಜನರನ್ನು ಪಕ್ಷದಿಂದ ಕರೆದೊಯ್ಯುವುದಿಲ್ಲ. ಬದಲಿಗೆ ಜನತೆಯೇ ಸ್ವಆಸಕ್ತಿಯಿಂದ ಟಿಕೆಟ್ ಪಡೆದು ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಹೇಳಿದರು.
ತಾಲೂಕಿನಿಂದ ಸುಮಾರು 50ರಿಂದ 60 ಸಾವಿರ ಜನ ಬೆಂಗಳೂರಿಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುವ ನಿರೀಕ್ಷೆಯಿದೆ. ತಾಲೂಕಿನ ಪ್ರತಿ ಹಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು ಟಿಕೆಟ್ ಮಾರಾಟ ಮಾಡುತ್ತಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವೆಂಕಟೇಶ ಪೂಜಾರಿ, ಮಲ್ಲಣ್ಣ ಸಾಹುಕಾರ ನಾಗರಾಳ, ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ್, ಉಪಾಧ್ಯಕ್ಷರಾದ ನಾಗಪ್ಪ ಉಪ್ಪಾರ, ಜಾಲಹಳ್ಳಿ ಬ್ಲಾಕ್ ಅಧ್ಯಕ್ಷ ಬಸವರಾಜ ವಕೀಲರು ಗಾಣಧಾಳ, ಹನುಮಂತಪ್ಪ ಮಿಯ್ಯಾಪೂರು, ಮಹ್ಮದ್ ಯೂನೂಸ ಶಹಾಪೂರಿ, ನಾಗರಾಜ ಅಕ್ಕರಕಿ, ಗುಲಾಮ್ ಮಹಿಬೂಬ್, ಪುರಸಭೆ ಸದಸ್ಯ ಶ್ರೀನಿವಾಸ, ವೆಂಕಟೇಶ, ಹನುಮೇಶ ನಾಯಕ, ರಾಮಕೃಷ್ಣಾ, ಬಸ್ಸನಗೌಡ ಅನೇಕರಿದ್ದರು.
ಮಸ್ಕಿ ವಿಧಾನ ಸಭಾ ಕ್ಷೇತ್ರದಲ್ಲೂ
ಮಸ್ಕಿ: ಬೆಂಗಳೂರಿನಲ್ಲಿ ನ.17 ರಂದು ನಡೆಯಲಿರುವ ನರೇಂದ್ರ ಮೋದಿ ರ್ಯಾಲಿಯಲ್ಲಿ ಮಸ್ಕಿ ವಿಧಾನ ಸಭಾ ಕ್ಷೇತ್ರದಿಂದ ಮೂರರಿಂದ ನಾಲ್ಕು ಸಾವಿರ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆಂದು ಬಿಜೆಪಿ ಮಸ್ಕಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ ಹೇಳಿದರು.
ಪಟ್ಟದ ಹಳೆ ಬಸ್ನಿಲ್ದಾಣದ ಬಳಿ ಬುಧವಾರ ನರೇಂದ್ರ ಮೋದಿ ಬಿಜೆಪಿ ಪಕ್ಷದ ಭಾರತ ಗೆಲ್ಲಿಸಿ ಕಾರ್ಯಕ್ರಮದ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮಸ್ಕಿ ವಿಧಾನ ಸಭಾ ಕ್ಷೇತ್ರದಿಂದ ಕಾರ್ಯಕರ್ತರು ಪಾಲ್ಗೊಳ್ಳುವುದಕ್ಕಾಗಿ ಮೂರು ಸಾವಿರ ಟಿಕೆಟ್ಗಳು ಲಭ್ಯವಿದ್ದು, ಎರಡೂವರೆ ಸಾವಿರ ಟಿಕೆಟ್ಗಳು ಮಾರಾಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅಂಕುಶದೊಡ್ಡಿ, ಮಸ್ಕಿ ನಗರ ಘಟಕ ಅಧ್ಯಕ್ಷ ಗುರುಭೀಮ ರಾವ್ ಕುಲಕರ್ಣಿ, ಗುರುರಾಜ ದಿನ್ನಿ, ವೀರನಗೌಡ ನಿಡಿಗೋಳ, ಶರಣಬಸವ ನಿಡಿಗೋಳ, ಮಾಯಪ್ಪ ಕಡಬೂರ, ಶಿವಬಸಪ್ಪ ನಾಯಕ ದೀನಸಮುದ್ರ, ರುದ್ರಗೌಡ ಬಳಗಾನೂರು, ಹನುಮೇಶ ನಾಯಕ, ರಾಮಣ್ಣ ನಾಯಕ ಜಂಗಮರ ಹಳ್ಳಿ ಹಾಗೂ ಇನ್ನಿತರ ಕಾರ್ಯಕರ್ತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

