ಇಂದು ಅಹೋರಾತ್ರಿ ಸಂಗೀತ ಸಮ್ಮೇಳನ
ರಾಯಚೂರು: ನಗರದ ಲಿಂ.ಡಾ.ಪಂ. ಪುಟ್ಟರಾಜ ಸಾಂಸ್ಕೃತಿಕ ವೇದಿಕೆಯಿಂದ ನ.9ರಂದು ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ವೇದಿಕೆಯ ಖಜಾಂಚಿ ಪಿ.ಚಿನ್ನಯ್ಯಸ್ವಾಮಿ ಹೇಳಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂ.ಪುಟ್ಟರಾಜ ಕವಿ ಗವಾಯಿಗಳ ಮೂರನೇ ವರ್ಷದ ಪುಣ್ಯ ದಿನಾಚರಣೆ ಅಂಗವಾಗಿ ಈ ಸಂಗೀತ ಸಮ್ಮೇಳನವನ್ನು ಆಯೋಜಿಸಿದ್ದು ಖ್ಯಾತ ಕಲಾವಿದರು ಅಹೋರಾತ್ರಿ ಸಂಗೀತ ಪ್ರಸ್ತುತಪಡಿಸಲಿದ್ದಾರೆಂದು ತಿಳಿಸಿದರು.
ಸಾನ್ನಿಧ್ಯ: ನ.9ರಂದು ನಗರದ ಸೋಮವಾರಪೇಟೆಯ ಹಿರೇಮಠದಲ್ಲಿ ಸಂಜೆ 6.30ಕ್ಕೆ ನಡೆಯುವ ಸಮಾರಂಭದಲ್ಲಿ ಸಂಗೀತ ಸಮ್ಮೇಳನದ ಸಾನ್ನಿಧ್ಯವನ್ನು ಸೋಮವಾರಪೇಟೆಯ ಹಿರೇಮಠದ ಶ್ರೀಅಭಿನವ ರಾಚೋಟಿ ವೀರಶಿವಾಚಾರ್ಯರು ವಹಿಸಲಿದ್ದಾರೆ. ಸಮ್ಮೇಳನವನ್ನು ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು ನೆರವೇರಿಸಲಿದ್ದಾರೆಂದು ತಿಳಿಸಿದರು.
ಸಮ್ಮೇಳನದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಾ.ಶಿವರಾಜ್ ಪಾಟೀಲ್ ವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ಮಾಜಿ ಶಾಸಕ ಪಾಪಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ತಾಪಂ ಉಪಾಧ್ಯಕ್ಷೆ ಜಯಮ್ಮ ನಾಗೇಂದ್ರಪ್ಪ, ಶಿವಶಾಂತ ಬಿಸನಳ್ಳಿ ಸೇರಿ ಅನೇಕರು ಪಾಲ್ಗೊಳ್ಳುವರೆಂದು ಹೇಳಿದರು.
ಸಂಗೀತ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಚಲಿಸುವ ಜ್ಯೋತಿರ್ಲಿಂಗ ಎಂಬ ಧ್ವನಿಸುರುಳಿಯ ಸಿಡಿ ಬಿಡುಗಡೆ ಮಾಡಲಾಗುತ್ತದೆ. ಸಂಗೀತ ಸಮ್ಮೇಳನದಲ್ಲಿ ಖ್ಯಾತ ಕಲಾವಿದರಾದ ಮೌನೇಶ ಕುಮಾರ್ :ಾವಣಿ, ಅಯ್ಯಪ್ಪಯ್ಯ ಹಲಗಲಿ ಮಠ, ಸುಕ್ರುಸಾಬ್ ಮುಲ್ಲಾ, ಲಕ್ಷ್ಮಿ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆಂದು ಹೇಳಿದರು.
ವಾದಕರು: ನಾರಾಯಣ ಕೊಳಚಿ, ಅಂಜನೇಯ್ಯ ಇಡಪನೂರು ಅವರು ವಯಲಿನ್ ಮತ್ತು ಸ್ಯಾಕ್ಸೋಫೋನ್ ಜುಗಲ್ ಬಂದಿ ನಡೆಸಿಕೊಡುವರು. ವೀರಭದ್ರ ಬೆಣಕಲ್ ಮತ್ತು ಮಹಾಂತೇಶ್ ಛಾವಣಿ ತಬಲಾ ಸಾತ್ ನೀಡಲಿದ್ದಾರೆ. ಅಹೋರಾತ್ರಿ ನಡೆಯುವ ಸಂಗೀತ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ನಗರದ ಸಂಗೀತಾಸಕ್ತರಿಗೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಈರಣ್ಣ ಹೂಗಾರ್, ಸಿದ್ದಯ್ಯಸ್ವಾಮಿ, ರಘುಕುಮಾರ್,ಮೃತ್ಯುಂಜಯಸ್ವಾಮಿ ಕೊಲ್ಲೂರು ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

