ಸಮಾನ ಶಿಕ್ಷಣ ನೀತಿ: ಇಂದು ರಥಯಾತ್ರೆ
ರಾಯಚೂರು: ನಗರದಲ್ಲಿ ಜಯಕರ್ನಾಟಕ ಸಂಘಟನೆಯಿಂದ ನ.16ರಂದು ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ಜಾಗೃತಿ ಜನಾಂದೋಲನಾ ರಥಯಾತ್ರೆ ಆಯೋಜಿಸಲಾಗಿದೆ. ಇಲ್ಲಿನ ರಂಗಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಂದು ಬೆಳಗ್ಗೆ 10.30ಕ್ಕೆ ಜಾಗೃತಿ ಜನಾಂದೋಲನ ರಥಯಾತ್ರೆ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಶಿವಕುಮಾರ್ ಯಾದವ್ ಕೋರಿದ್ದಾರೆ.
ವಿಶ್ವ ಕುರುಬರ ವಿಕಾಸ ವೇದಿಕೆಗೆ ಆಯ್ಕೆ
ಸಿಂಧನೂರು: ವಿಶ್ವ ಕುರುಬರ ವಿಕಾಸ ವೇದಿಕೆಯ ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸ ಭಂಗಿ ಮತ್ತು ತಾಲೂಕಾಧ್ಯಕ್ಷರನ್ನಾಗಿ ಅಂಬಣ್ಣ ಅವರನ್ನು ನೇಮಕ ಮಾಡಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ದೊಡ್ಡಣ್ಣ ಆದೇಶ ಹೊರಡಿಸಿದ್ದಾರೆ.
18ರಂದು ರೈತ ಸಂಘದ ಧರಣಿ
ದೇವದುರ್ಗ: ತಾಲೂಕಿನ ಮುಂಡರಗಿ, ಪಲಕನಮರಡಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಜನತೆ ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ನ.18 ರಂದು ಪಟ್ಟಣದ ತಾಪಂ ಎದುರು ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸಂಘ ತಿಳಿಸಿದೆ. ಸಂಘದ ತಾಲೂಕು ಸಮಿತಿ ಈ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ ಎಂದು ಸಮಿತಿ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ತಿಳಿಸಿದ್ದಾರೆ.
ಇಸ್ಪೀಟ್: 9 ಮಂದಿ ಬಂಧನ
ರಾಯಚೂರು: ನಗರಗ ಗೋಶಾಲ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾರೆಪ್ಪ, ಕರಿಯಪ್ಪ, ಅಬ್ದುಲ್ ಖಾದರ್, ಶ್ರೀನಿವಾಸ್, ಚಂದ್ರಶೇಖರ್, ಪಾಪಯ್ಯ, ನೂರ್ ಅಹ್ಮದ್, ರಾಜು ಮತ್ತು ಶಂಕರ್ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಪಣಕ್ಕಿಟ್ಟಿದ್ದ 22900 ಜಪ್ತಿ ಮಾಡಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಷ ಸೇವಿಸಿ ವ್ಯಕ್ತಿ ಸಾವು
ರಾಯಚೂರು: ಮಾನವಿ ಪಟ್ಟಣದ ಹೊರವಲಯದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ಎಂಬಾತ ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾರೆ. ಪಟ್ಟಣ ಬಳಿಯ ಖಾಸಿಂಸಾಬ್ ಎಂಬವರ ತೋಟದಲ್ಲಿ ಬೆಳೆಗೆ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ವಿಷ ದೇಹ ಸೇರಿ ಅಸ್ವಸ್ಥಗೊಂಡರು. ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬದುಕುಳಿಯಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

