ಚೆನ್ನಳ್ಳಿ ರೈತರ ಬತ್ತದ ಗದ್ದೆ ವೀಕ್ಷಿಸಿದ ಎಚ್ಡಿಕೆ
ಸಿಂಧನೂರು: ತಾಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ಮಳೆಯಿಂದ ಬತ್ತದ ಪೈರಿಗೆ ಕುತ್ತಿಗೆ ರೋಗವು ಹರಡಿರುವುದನ್ನು ಗಮನಿಸಿ ರೈತರ ಗದ್ದೆಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವೀಕ್ಷಿಸಿ, ರೈತರೊಡನೆ ಚರ್ಚಿಸಿದರು.
ರಾಜ್ಯ ಸರ್ಕಾರವು ಬೇಗನೆ ಬತ್ತಕ್ಕೆ ವೈಜ್ಷಾನಿಕ ಬೆಲೆ ನಿಗದಿಪಡಿಸಬೇಕು. ಸರ್ಕಾರ ರು. 1600 ಪ್ರತಿ ಕ್ವಿಂಟಲ್ಗೆ ಘೋಷಿಸಿದ್ದು, ಇದು ಸಾಕಾಗುವುದಿಲ್ಲ. ಕನಿಷ್ಟ ರು. 2000 ನಿಗದಿಪಡಿಸಬೇಕು. ಜೊತೆಗೆ ಹತ್ತಿ, ತೊಗರಿ, ಕಬ್ಬಿಗೆ ಸೂಕ್ತ ಬೆಲೆ ನೀಡಬೇಕು. ಈ ಹಿಂದೆ ತಮ್ಮ ಪಕ್ಷದ ಆಡಳಿತವಿದ್ದಾಗ ರೈತರಿಗೆ ಅನುಕೂಲವಾಗುವ ಅನೇಕ ಅಭಿವೃದ್ಧಿ ಯೋಜನೆ ಕಾರ್ಯಗಳನ್ನು ಕೈಗೊಂಡಿತ್ತು. ಇಂದು ರಾಜ್ಯ, ಕೇಂದ್ರದಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲವೆಂದು ಸುದ್ದಿಗಾರರಿಗೆ ತಿಳಿಸಿದರು.
ಎಚ್ಚೆತ್ತುಕೊಳ್ಳಿ: ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆಗಳಿಗೆ ಸರ್ಕಾರ ಸೂಕ್ತ ಬೆಲೆಯನ್ನು ಜಾರಿ ತರುವುದಲ್ಲಿ ವಿಫಲವಾಗಿದೆ. ರೈತರು ಈ ಬಗ್ಗೆ ಎಚ್ಚೆತ್ತುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಿ ಪ್ರತಿಭಟಿಸಬೇಕು. ಇಂತಹ ಹೋರಾಟ ನಡೆಸುತ್ತಿರುವ ಸಿಂಧನೂರಿನ ಮಾಜಿ ಶಾಸಕ ವೆಂಕಟರಾವ್ ನಾಡಗೌಡರಿಗೆ ನಿಮ್ಮೆಲ್ಲರ ಸಹಕಾರ ಮತ್ತು ಆಶೀರ್ವಾದ ಬಹಳ ಮುಖ್ಯವಾಗಿದೆ ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಮೋದಿ ರ್ಯಾಲಿಯಿಂದ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಮೂರೂವರೆ ಲಕ್ಷ ಟಿಕೇಟ್ ಮಾರಿರುವುದಾಗಿ ಹೇಳಿಕೊಂಡಿರುವ ಬಿಜೆಪಿ ಮಂದಿ ಅಲ್ಲಿ ಕೇವಲ ಒಂದು ಲಕ್ಷ ಆಸನದ ವ್ಯವಸ್ಥೆ ಮಾಡಿದ್ದಾರೆ. ಮೋದಿ ಆಗಮನ ಬಿಜೆಪಿಯವರನ್ನು ಹೊರತುಪಡಿಸಿದರೆ ಯಾರಿಗೂ ವಿದ್ಯುತ್ ಸಂಚಲನವಾಗುವುದಿಲ್ಲ ಎಂದು ಉತ್ತರಿಸಿದರು.
ತೀವ್ರ ತೊಂದರೆ: ಕಳೆದ ವರ್ಷ ಲೇವಿ ಸಂಗ್ರಹ ಒಂ್ಟಡಿವರೆ ಲಕ್ಷ ಟನ್ ಮಾತ್ರವಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಏಕಾಏಕಿ ಹದಿಮೂರೂವರೆ ಲಕ್ಷ ಟನ್ಗೆ ನಿಗದಿಪಡಿಸಿರುವುದು ರೈತರು ಹಾಗೂ ಅಕ್ಕಿಮಿಲ್ಗಳಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿದರೆ, ಅದರಿಂದ ನೇರ ಲಾಭ ರೈತರಿಗೆ ಆಗುತ್ತದೆ ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಶಾಸಕರಾದ ಎಸ್. ಶಿವರಾಜ ಪಾಟೀಲ್, ಮಾನಪ್ಪ ವಜ್ಜಲ್, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾ ಯುವ ಅಧ್ಯಕ್ಷ ಪವನಕುಮಾರ, ಎಪಿಎಂಸಿ ಸದಸ್ಯ ರಾಮರಾವ್, ತಾಲೂಕಾಧ್ಯಕ್ಷ ಲಿಂಗಪ್ಪ ಸಾಹುಕಾರ, ತಾಪಂ ಸದಸ್ಯ ಚಂದ್ರು ನಾಡಗೌಡ, ನಗರಸಭೆ ಸದಸ್ಯರಾದ ಬಸವರಾಜ ನಾಡಗೌಡ, ಶರಣಬಸವ ಪಾಟೀಲ್, ವೀರಭದ್ರಪ್ಪ ಕುರುಕುಂದಿ, ಮಹೆಬೂಬ್, ಮುಖಂಡರಾದ ರಾಜ ವೆಂಕಟಪ್ಪ ನಾಯಕ, ಯೂಸುಫ್ ಖಾನ್, ವೆಂಕೋಬ ಕಲ್ಲೂರ, ಪ್ರಶಾಂತ ಹಟ್ಟಿ, ವೀರೇಶ ಹಟ್ಟಿ, ರವಿ ಸಿದ್ದಾಂತಿಮಠ, ದುರ್ಗೇಶ ಮುಳ್ಳೂರು, ಮಲ್ಲನಗೌಡ, ವೆಂಕಟೇಶ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

