ಹಾಲಭಾವಿ ವೀರಭದ್ರೇಶ್ವರರ ಜಾತ್ರಾ ವೈಭವ
ಕನ್ನಡಪ್ರಭ ವಾರ್ತೆ ಮುದಗಲ್ ನ.18
ಪಟ್ಟಣದ ಹೊರ ವಲಯದಲ್ಲಿರುವ ಐತಿಹಾಸಿಕ ಹಾಲಭಾವಿ ವೀರಭದ್ರೇಶ್ವರ ಜಾತ್ರೆಯು ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು.
ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಪೂಜೆ, ವಿಧಿ ವಿಧಾನಗಳನ್ನು ನೆರವೇರಿಸಲಾಗಿದ್ದರೆ, ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ಭಾವಚಿತ್ರವನ್ನು ಸುಮಂಗಲೆಯರ ಕುಂಭ ಕಲಶ, ಪುರವಂತರ ಒಡಪುಗಳ ಮೂಲಕ ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ನಡೆಸಲಾಯಿತು.
ಭಕ್ತಿ ಸಮರ್ಪಿಸಿದ ಭಕ್ತರು: ಆಯ್ದ ಸ್ಥಳಗಳಲ್ಲಿ ಪುರವಂತರ ಹಾಡು, ಕುಣಿತದೊಂದಿಗೆ ವೀರಭದ್ರೇಶ್ವರ ಒಡಪುಗಳೊಂದಿಗೆ ಭಕ್ತರನ್ನು ಭಕ್ತಿಯ ಪರಕಾಷ್ಠೆಗೆ ಮುಟ್ಟುವಂತೆ ಮಾಡಿದರೆ, ಕೆಲವು ಭಕ್ತರು ಶಸ್ತ್ರ ಧಾರಣೆಯಾಗುವುದರೊಂದಿಗೆ ವೀರಭದ್ರ ದೇವರಿಗೆ ಭಕ್ತಿಯನ್ನು ಸಮರ್ಪಿಸಿದರು.
ಜಾತ್ರೆಯ ಸಾನ್ನಿಧ್ಯವನ್ನು ಅಂಕಲಿಮಠದ ಶ್ರೀಗಳು ನೆರವೇರಿಸಿದ್ದು, ದೇವಸ್ಥಾನದ ಅರ್ಚಕ ಸಿದ್ದಯ್ಯ ಸಾಲಿಮಠ ನೇತೃತ್ವ ವಹಿಸಿದ್ದರು. ಪುರವಂತರಾದ ಬಸವರಾಜ ಕಾಳಾಪೂರ, ಮುತ್ತಣ್ಣ ಗುಂಡಸಾಗರ, ಅಮರೇಶ ಲಿಂಗಸ್ಗೂರು, ವಿರುಪಾಕ್ಷಪ್ಪ ಲಿಂಗಸ್ಗೂರು, ಬಸವರಾಜ ಬಡಿಗೇರ ಕರಡಿ, ಶರಣಪ್ಪ ಕೋಮನೂರ, ರುದ್ರಪ್ಪ ಬಡಿಗೇರ ಗುಂಡಸಾಗರ, ಮಾನಪ್ಪ ಮುದಗಲ್, ವೀರಣ್ಣ ಮುದಗಲ್, ರುದ್ರಪ್ಪ ಐದನಾಳ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ, ಪಪಂ ಅದ್ಯಕ್ಷ ರಜ್ಜಬಲಿ ಹಳೆಪೇಟೆ, ಷಣ್ಮುಖಪ್ಪ ಖೇಣೇದ, ಶರಣಪ್ಪ ಸಜ್ಜನ, ಶಿವಪ್ಪ ಸುಂಕದ, ಸುರೇಂದ್ರಗೌಡ ಪಾಟೀಲ, ಚಂದ್ರಶೇಖರ ಗಂಗಾವತಿ, ಮಹಾಂತೇಶ ಪಾಟೀಲ, ಬಸವರಾಜ ಚಟ್ಟೇರ, ಪ್ರಭುಲಿಂಗ ಕಂಡಕ್ಟರ, ಲಿಂಗಣ್ಣ ಹಣಗಿ, ಅಮರೇಶ ಬಳಿಗೇರ, ಶಶಿಧರ ಕಂಚಿಮಠ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

