ದುರಸ್ತಿ ಕಾಣದ ವೈದ್ಯರ ವಸತಿ ಗೃಹಗಳು
ಮುದಗಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ನಿರ್ಮಿಸಿದ ವಸತಿ ಗೃಹಗಳು ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಸೋರುತ್ತಿವೆ. ಗೋಡೆಗಳಲ್ಲಿ ವಿದ್ಯುತ್ ಹರಿಯುತ್ತಿದ್ದು, ಇವುಗಳು ವಾಸಕ್ಕೆ ಅಯೋಗ್ಯವಾಗಿವೆ.
ಸುತ್ತಮುತ್ತಲಿನ 60 ಹಳ್ಳಿಗೆ ಕೇಂದ್ರ ಬಿಂದುವಾಗಿರುವ ಈ ಆಸ್ಪತ್ರೆಯಲ್ಲಿ 3 ಜನ ವೈದ್ಯರು ಸೇವೆಯಲ್ಲಿದ್ದು, ಇದ್ದ ಮೂರು ವಸತಿಗೃಹಗಳು ತೀರಾ ಹಳೆಯದಾಗಿವೆ. ಅಲ್ಲದೆ ದುರಸ್ತಿಯನ್ನೂ ಕಾಣದೆ ಕಟ್ಟಡದ ಚಾವಣಿ ಕುಸಿದು ಬೀಳುತ್ತಿದೆ. ಕಟ್ಟಡದ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಅವ್ಯವಸ್ಥೆಯಿಂದ ಕೂಡಿವೆ.
ಮನವಿಗೆ ಸ್ಪಂದಿಸುತ್ತಿಲ್ಲ: ಮಳೆ ಬಂದರೆ ಮನೆ ತುಂಬಾ ನೀರು ನಿಲ್ಲುತ್ತವೆ. ಗೋಡೆಗಳು ನೆನದರೆ ವಿದ್ಯುತ್ ಹರಿದು ವಾಸಿಸುವವರಿಗೆ ಶಾಕ್ ಕೊಡುತ್ತವೆ. ಆದ್ದರಿಂದ ಈ ಮನೆಗಳಲ್ಲಿ ಯಾರೂ ವಾಸಿಸುತ್ತಿಲ್ಲ. ಹಳೆ ಕಟ್ಟಡ ದುರಸ್ತಿಗೊಳಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನೆಯಾಗಿಲ್ಲ ಎಂದು ವೈದ್ಯರು ತಿಳಿಸಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂವರು ವೈದ್ಯರು ಸೇವೆ ಸಲ್ಲಿಸುತ್ತಿದ್ದು, ಈ ಮೂವರೂ ಬಾಡಗಿ ಮನೆಗಳಲ್ಲಿ ವಾಸಿಸುತ್ತಾರೆ. ಸರ್ಕಾರ ವೈದ್ಯರಿಗೆ ವಸತಿ ಗೃಹಗಳನ್ನು ದುರಸ್ತಿಗೊಳಿಸಿ ಇಲ್ಲಿಯೇ ವಾಸಿಸಲು ಅನುಕೂಲ ಮಾಡಿದರೆ ರಾತ್ರಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ತುಂಬಾ ಅನುಕೂಲವಾಗುತ್ತದೆ.
ಹಂದಿ- ನಾಯಿ ವಾಸಸ್ಥಾನವಾದಾವು!: ಮಹಿಳಾ ವೈದ್ಯ ಡಾ. ಈಶ್ವರ ಸವಡಿಯವರು ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿದ್ದು ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇದರಿಂದಾಗಿ ವೈದ್ಯರಿಗೆ ಬಾಡಿಗೆ ಹೊರೆಯಾಗುವುದಲ್ಲದೆ ಇದ್ದ ಹಳೆ ಕಟ್ಟಡಗಳು ದುರಸ್ತಿಗೊಳ್ಳದಿದ್ದರೆ ಹಂದಿ, ನಾಯಿಗಳ ತಾಣವಾಗುವುದರಲ್ಲಿ ಸಂದೇಹವಿಲ್ಲ.
ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಹಳೆ ಕಟ್ಟಡಗಳನ್ನು ದುರಸ್ತಿಗೊಳಿಸಿ ವೈದ್ಯರಿಗೆ ವಾಸಿಸಲು ಅನುಕೂಲ ಮಾಡಿಕೊಟ್ಟು ಸಾಛ್ಗಿಜನಿಕರ ಸೇವೆಗೆ ಅನುವು ಮಾಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

