ರಾಯಚೂರು

ದರಗಾಕ್ಕೆ 5.14 ಲಕ್ಷ ದೇಣಿಗೆ ಸಂಗ್ರಹ

Published On :

ಮುದಗಲ್: ಐತಿಹಾಸಿಕ ಮುದಗಲ್‌ನ ಕಿಲ್ಲಾದಲ್ಲಿರುವ ಹುಸೇನಿ ಆಲಂ ದರಗಾಕ್ಕೆ ಪ್ರಸಕ್ತ ಸಾಲಿನಲ್ಲಿ 5.14 ಲಕ್ಷ ನಗದು, 20 ಗ್ರಾಂ ಚಿನ್ನ ದೇಣಿಗೆ ಸಂಗ್ರಹವಾಗಿದೆ ಎಂದು ದರಗಾ ಕಮಿಟಿ ಅಧ್ಯಕ್ಷ ಷರೀಫ್ ವಕೀಲರು ತಿಳಿಸಿದರು. ಭಕ್ತರು ದೇವರಿಗೆ ಹರಕೆ ನೀಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 9,100 ಹಾಗೂ 20 ಗ್ರಾಮ ಚಿನ್ನ ಹೆಚ್ಚಿಗೆ ದೇಣಿಗೆ ನೀಡಿದ್ದಾರೆ. ಸಂಗ್ರಹವಾದ ದೇಣಿಗೆಯಲ್ಲಿ ಶೇ.7ರಷ್ಟು(35 ,000) ಹಣವನ್ನು ವಕ್ಫ್ ಕಮಿಟಿಗೆ ನೀಡಲಾಗುತ್ತಿದೆ. ಉಳಿದ ಹಣವನ್ನು ದರಗಾ ಸಮಿತಿಯ ಹೆಸರಲ್ಲಿ ಜಂಟಿ ಖಾತೆಯಲ್ಲಿ ಠೇವಣಿ ನಿಗದಿಯಾಗಿರುತ್ತದೆ ಎಂದರು.
ಅಭಿನಂದನೆ: ಐತಿಹಾಸಿಕ ಮೊಹರಂ ಹಬ್ಬವನ್ನು ಯಶಸ್ವಿಗೊಳಿಸಲು ಕಾರಣರಾದ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ, ಸಹಾಯಕ ಆಯುಕ್ತರಿಗೆ, ಪೊಲೀಸ್ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಪತ್ರಕರ್ತರಿಗೆ, ಸಾರ್ವಜನಿಕರಿಗೆ ಅಭಿನಂದನೆಗಳನ್ನು ದರಗಾ ಕಮಿಟಿ ಅಧ್ಯಕ್ಷರು ಸಲ್ಲಿಸಿದರು. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಯಶಸ್ವಿಯಾಯಿತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.