ಭಾವೈಕ್ಯತೆಯ ಹಜರತ್ ಕವಡೆಪೀರಾ ಸವಾರಿ
ಮುದಗಲ್: ಮೊಹರಂನ 17ನೇ ದಿನವಾದ ಶುಕ್ರವಾರ ಸಂಜೆ ಹಜರತ್ ಕವಡೆಪೀರಾ ಆಲಂಗಳು ಪರಸ್ಪರ ಅಪ್ಪಿಕೊಳ್ಳುವ ಮೂಲಕ ಮೊಹರಂ ಹಬ್ಬಕ್ಕೆ ವೈಭವವಾಗಿ ತೆರೆ ಬಿದ್ದಿತು. ಹಿಂದೂ- ಮುಸ್ಲಿಮರ ಭಾವೈಕ್ಯತೆಯ ಪ್ರತೀಕವಾದ ಮುದಗಲ್ ಮೊಹರಂ ಹಜರತ್ ಹಸನ- ಹುಸೇನ್ ದಫನ್ ನಡೆದ ನಂತರ 7ನೇ ದಿನ ನಡೆಯುವ ಕವಡೆಪೀರಾ ಸವಾರಿ ವಿಶೇಷವಾಗಿದೆ.
ಖಿಲ್ಲಾದಲ್ಲಿ ನಡೆದ ಕಾಳಗದಲ್ಲಿ ಹಜರತ್ ಹುಸೇನ್ನು ಮಡಿದ ನಂತರ ಅವರ ವಂಶಸ್ಥರಾದ ಕವಡೆಪೀರರು ಉಳಿಯುತ್ತಾರೆ. ಇವರ ನಂತರ ನಡೆದ ಚರಿತ್ರೆಯ ಸಂಕೇತವಾಗಿ ಮೊಹರಂ 17ನೇ ದಿನಕ್ಕೆ ಇವರ ಸವಾರಿ ಹಾಗೂ ದಫನ ಕಾರ್ಯಕ್ರಮ ಜರುಗುತ್ತವೆ.
7 ದಿನಗಳ ಕಾಲ ದರಗಾದಲ್ಲಿ ಆಲಂಗಳನ್ನ ಪ್ರತಿಷ್ಠಾಪಿಸಿ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ. ಆದರೆ ಐತಿಹಾಸಿಕ ಎರಡು ಸುತ್ತಿನ ಕೋಟೆಯ ಮುಂಭಾಗದಲ್ಲಿ ನೂರಾರು ಕವಡೆಪೀರ ಆಲಂಗಳು ಸೇರಿ ಪರಸ್ಪರ ಅಪ್ಪಿಕೊಳ್ಳುವ ನಂತರ ದಫನ ನಡೆಯುತ್ತದೆ. ಈ ಮೂಲಕ ಅಂತಿಮ ಮೊಹರಂಗೆ ವಿದಾಯ ಹೇಳಲಾಗುತ್ತದೆ.
ಭಕ್ತ ಸಮೂಹ ಉತ್ತತ್ತಿ ಹಾರಿಸಿ ಕವಡೆಪೀರಾ, ಜುಮ್ಕೆಪೀರಾ ದೋಸ್ತಾರಹಹೋ ದೀನ್ ಎಂದು ಹೇಳುತ್ತ ಭಕ್ತಿಯಿಂದ ಆಲಂಗಳಿಗೆ ನಮಿಸುತ್ತಾರೆ. ಈ ವೇಳೆ ವಿವಿಧೆಡೆ ತೆರಳಿದ್ದ ಹಿಂದೂ- ಮುಸ್ಲಿಂ ಭಕ್ತರರೆಲ್ಲರೂ ಸಾಕ್ಷಿಯಾದರು. ಮೊಹರಂ ನೋಡಲು ಸಾವಿರಾರು ಜನರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

