ಆಸ್ತಿ ವಿವಾದ: ಮೂವರು ಕೊಲೆ ಆರೋಪಿಗಳ ಸೆರೆ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದ ಠಾಣಾ ವ್ಯಾಪ್ತಿಯ ಗೋನಾಳ ಗ್ರಾಮದಲ್ಲಿ ನ. 14ರಂದು ಆಸ್ತಿವಿವಾದಕ್ಕೆ ಸಂಬಂಧಿಸಿದಂತೆ ಮೂವರು ಕೊಲೆ ಆರೋಪಿಗಳನ್ನು ಬಳಗಾನೂರ ಪೊಲೀಸರು ಬಂಧಿಸಿದ್ದಾರೆ.
ಮಲ್ಲಯ್ಯ ಮತ್ತು ಆತನ ಸಹೋದರನ, ಮತ್ತು ಅಕ್ಕನ ಮಕ್ಕಳ ನಡುವೆ ಆರಂಭವಾದ ಆಸ್ತಿ ವಿವಾದ, ತಾರಕಕ್ಕೆರಿ ಮಲ್ಲಯ್ಯನನ್ನು ಕೊಲೆ ಮಾಡಲಾಗಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲ್ಲಯ್ಯ ಗೋನಾಳ ಎಂಬಾತನ ಕೊಲೆ ಆರೋಪದ ಮೇಲೆ ಆತನ ಪತ್ನಿ ಪ್ರಮೀಳಾ ನೀಡಿದ ದೂರಿನ ಮೇಲೆ ಆರೋಪಿಗಳಾದ ದೊಡ್ಡಬಸವ, ಮಂಜುನಾಥ,ಈಶ್ವರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಚ್ಚಿ ಹಾಕುವ ಪ್ರಯತ್ನ: ಕೊಲೆಯಾದ ಮಲ್ಲಯ್ಯನ ಶವವನ್ನು ಯಾರಿಗೂ ಅನುಮಾನ ಬಾರದಂತೆ ದ್ವಿಚಕ್ರವಾಹನದ ಮೂಲಕ ತುಂಗಭದ್ರ ಎಡದಂಡೆ ನಾಲೆಯಲ್ಲಿ ಎಸೆದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗಿದೆ ಎಂದು ಪತ್ನಿ ಆರೋಪಿಸಿದ್ದರು. . 19 ರಂದು ಪತ್ನಿ ಪ್ರಮೀಳಾ ನೀಡಿದ ನಾಪತ್ತೆ ಪ್ರಕರಣದ ದೂರಿನ ಮೇರೆಗೆ ಗುಪ್ತ ಕಾರ್ಯಾಚರಣೆ ನಡೆಸಿದ ಪೊಲೀಸರು ದೂರು ನೀಡಿದ ಮೂರೇ ದಿನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ರಾಯಚೂರು ಸಮೀಪದ ಬಂಗಾರೆಪ್ಪನ ಕೆರೆ ಹತ್ತಿರ ಶವವನ್ನು ಪತ್ತೆ ಹಚ್ಚಿದ್ದಾರೆ. ಡಿವೈಎಸ್ಪಿ ಸೂರ್ಯವಂಶಿ ಮಾರ್ಗದರ್ಶನದಲ್ಲಿ ಮಾನ್ವಿ, ರಾಯಚೂರು ಸಿಂಧನೂರು ಪೊಲೀಸ್ ಸಹಕಾರದಿಂದ ಬಳಗಾನೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬಳಗನಾನೂರ ಠಾಣೆ ಪಿಎಸ್ಐ ಮಹಾಂತೇಶ ಸಜ್ಜನ ತಿಳಿಸಿದ್ದಾರೆ. ಕೊಲೆಗೆ ಸಂಬಂಧಿಸಿದ ಮೂವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಉಳಿದ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ವ್ಯಾಪಕ ಜಾಲ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಸಿಗಳಾದ ನಾಗಪ್ಪ, ಹನುಮಂತ ನಾಯಕ ಬಸನಗೌಡ, ಅಶೋಕ, ರೇವಣ ಸಿದ್ದಪ್ಪ, ಪರಶುರಾಮ್, ಗಿಡ್ಡಯ್ಯ ಭಾಗವಹಿಸಿದ್ದರು. ಪೊಲೀಸರ ಕಾರ್ಯದಕ್ಷತೆಯನ್ನು ಡಿವೈಎಸ್ಪಿ ಸೂರ್ಯವಂಶಿ ಶ್ಲಾಘಿಸಿದರು.
ಯುವತಿ ಸಾವು
ರಾಯಚೂರು: ತಾಲೂಕಿನ ಮೀರಾಪುರ ಗ್ರಾಮದಲ್ಲಿ ಯುವತಿ/್ಚಬ್ಬಳಿಗೆ ಒತ್ತಾಯಪೂರ್ವಕವಾಗಿ ವಿಷವುಣಿಸಿ ಕೊಲೆಗೈದ ಬಗ್ಗೆ ದೂರು ದಾಖಲಾಗಿದೆ.
ಗ್ರಾಮದ ಮಹಾದೇವಿ(19) ಎಂಬಾಕೆಯನ್ನು ಅದೇ ಗ್ರಾಮದ ಮಾರೆಪ್ಪ ಎಂಬಾತ ಆಕೆ ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ತೆರಳಿದಾಗ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮಾರೆಪ್ಪ ಆಕೆಗೆ ಒತ್ತಾಯಪೂರ್ವಕವಾಗಿ ಕ್ರಿಮಿನಾಶಕ ಕುಡಿಸಿದ್ದು, ಅದರಿಂದ ಅಸ್ವಸ್ಥಗೊಂಡ ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾಳೆಂದು ಪೊಲೀಸರಿಗೆ ಮೃತಳ ಸಂಬಂಧಿ ದೂರಿತ್ತಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

