ರಾಯಚೂರು

ಮರಳು ಸಂಗ್ರಹ; ಕ್ರಮಕ್ಕೆ ಆಗ್ರಹ

Published On :

ಸಿಂಧನೂರು: ತಮ್ಮ ಹೊಲದ ಪಕ್ಕ ಅಕ್ರಮ 600 ಟ್ರಿಪ್ ಮರಳು ಸಂಗ್ರಹ ಮಾಡಲಾಗಿದೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿಲಾನಿ ಪಾಷ ಒತ್ತಾಯಿಸಿದ್ದಾರೆ.  ಪಿಡಬ್ಲ್ಯೂಡಿ ಕ್ಯಾಂಪಿನ ಹೊಲದ ಬಳಿ ನಂದಾದೀಪ ಹೆಗ್ಡೆ, ಆರ್‌ಕೆ ಎಂಟರ್‌ಪ್ರೈಸಸ್‌ನ ರಾಧಾಕೃಷ್ಣ ಹಳ್ಳದ ಮರಳನ್ನು ಸಂಗ್ರಹಿಸಿಟ್ಟಿದ್ದಾರೆ. ಲಿಂಗಸ್ಗೂರು ಸಹಾಯಕ ಆಯುಕ್ತರಿಗೆ, ಸ್ಥಳೀಯ ತಹಸೀಲ್ದಾರರಿಗೆ ಲಿಖಿತ ದೂರು ನೀಡಲಾಗಿದೆ.

ಅಂತರ್ ವಿವಿ ಮಟ್ಟ: ಕಬಡ್ಡಿಗೆ 2ನೇ ಬಾರಿ ಆಯ್ಕೆ
ಸಿಂಧನೂರು: ನಗರದ ಕನಕದಾಸ ಪದವಿ ಕಾಲೇಜಿನ ವಿದ್ಯಾರ್ಥಿ ರವಿಕುಮಾರ ಆರ್. 2013- 14ನೇ ಸಾಲಿನ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಆಂಧ್ರದ ಗುಂಟೂರಿನ ಎ.ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಡಿ.22 ಮತ್ತು 23ರಂದು ನಡೆಯುವ ಈ ಕಬಡ್ಡಿ ಸ್ಪರ್ಧೆಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ತಂಡವನ್ನು ಪ್ರತಿನಿಧಿಸಿ ಆಡಲಿದ್ದಾನೆ. ಕಳೆದ ವರ್ಷ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಸ್ಪರ್ಧೆಯಲ್ಲೂ ಗುಲ್ಬರ್ಗ ವಿಶ್ವವಿದ್ಯಾಲಯ ತಂಡದಲ್ಲಿ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದ್ದನು. ಇದೀಗ 2ನೇ ಬಾರಿ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿದ್ದಾನೆ. ರವಿಕುಮಾರನನ್ನು ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವಿರುಪಾಕ್ಷಪ್ಪ, ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿ ಶುಭ ಕೋರಿದ್ದಾರೆ.

ಚರಂಡಿ ಕಾಮಗಾರಿಗೆ ಸೋಮನಾಥ ಆಗ್ರಹ
ಸಿಂಧನೂರು: ನಗರದಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ರಸ್ತೆ ಮೇಲಿನ ಮಣ್ಣಿನ ಗುಡ್ಡೆ, ತ್ಯಾಜ್ಯ ವಸ್ತುಗಳನ್ನು ಆ ದಿನವೇ ಬೇರೆ ಕಡೆ ಸ್ಥಳಾಂತರಿಸಬೇಕೆಂದು ಸಮಾಜ ಸುಧಾರಣಾ ವೇದಿಕೆ  ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಬರೆದಿರುವ ಅವರು ಕುಡಿಯುವ ನೀರಿನ ಪೈಪ್‌ಗಳು ಅಲ್ಲಲ್ಲಿ ಒಡೆದಿವೆ. ಅದರಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತಿದೆ. ಅಂತಹ ಪೈಪುಗಳನ್ನು ಬದಲಾವಣೆ ಮಾಡಿ ಶುದ್ಧ ಕುಡಿವ ನೀರು 3 ದಿನಕ್ಕೆ ಒಂದಾವರ್ತಿಯಂತೆ ಪೂರೈಸುವುದು ಮತ್ತಿತರ ಬೇಡಿಕೆ ಈಡೇರಿಸಬೇಕೆಂದು ಅಧ್ಯಕ್ಷ ಸೋಮನಾಥ ಸೂಲಂಗಿ, ಗೌರವಾಧ್ಯಕ್ಷ ಅಮೀನಸಾಬ, ಕಾರ್ಯದರ್ಶಿ ಬಿ.ಶೇಖರಪ್ಪ ಆಗ್ರಹಿಸಿದ್ದಾರೆ.

ವೇದಿಕೆ ಅಸ್ತಿತ್ವಕ್ಕೆ
ಸಿಂಧನೂರು: ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಸಮಾನ ಮನಸ್ಕ ಹೋರಾಟಗಾರರ ಸ್ವಚ್ಛ, ಸ್ವಸ್ಥ, ಸುಂದರ ಸಿಂಧನೂರು ನಿರ್ಮಾಣ ಹೋರಾಟ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆ ವಕ್ತಾರ ಅಮರೇಶ ಗಿರಿಜಾಲಿ ತಿಳಿಸಿದ್ದಾರೆ.  ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು 29ರಂದು ಸಾಂಕೇತಿಕ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಸದಸ್ಯರು: ಶ್ಯಾಮಸುಂದರ ಕೀರ್ತಿ, ಆರ್.ಬೋನವೆಂಚರ, ಕೆ.ಮರಿಯಪ್ಪ,(ಬಿಎಸ್‌ಪಿ) ಸಬ್ಜಲಿಸಾಬ (ಕೆಕೆಎನ್‌ಎಸ್) ಭಾಷಮಿಯಾ (ಎಐಟಿಯುಸಿ) ಬಿ.ಲಿಂಗಪ್ಪ, ಸೋಮನಾಥ ಸೂಲಂಗಿ, ಅಮರೇಶ ಗಿರಿಜಾಲಿ, ಬಸವರಾಜ ಬಡಿಗೇರ, ಶರಣು ಹಿರೇಮಠ, ಕಂಟೆಪ್ಪ ಮಟ್ಟೂರು, ಅಮರೇಶ ಗುರಿಕಾರ, ನಾಗರಾಜ ಹೆಡಗಿಬಾಳ, ಶರಣಪ್ಪ ಕೆ.ಹಂಚಿನಾಳ, ಯುವರಾಜ, ಎಂ.ಎಸ್. ರಾಜಶೇಖರ, ಯಶವಂತ ಕೋವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.