ರಾಯಚೂರು

ಬಳಗಾನೂರು ಸ್ಮಾರಕ ಸಂರಕ್ಷಣೆ ಅವಶ್ಯ: ಪ್ರೊ.ಶಾಶ್ವತಯ್ಯಸ್ವಾಮಿ

Published On :

ಸಿಂಧನೂರು:  ತಾಲೂಕಿನ ಬಳಗಾನೂರಿನಲ್ಲಿ  800ಕ್ಕೂ ಹೆಚ್ಚು ಪುರಾತನ ಶಾಸನಗಳು, ಐತಿಹಾಸಿಕ ದೇವಾಲಯಗಳಿದ್ದು, ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಶೋಧಕ ಪ್ರೊ. ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಹೇಳಿದರು.
ಗ್ರಾಮದ ದೇವಾಂಗ ಸಮುದಾಯ ಭವನದಲ್ಲಿ ಕಸಾಪ ಮಸ್ಕಿ ಘಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಳಗಾನೂರ ಇತಿಹಾಸ-ಪರಂಪರೆ ಕುರಿತು ಅವರು ಉಪನ್ಯಾಸ ನೀಡಿದರು.
200 ವರ್ಷಗಳ  ಹಿಂದಿನ ತಾಳೆ ಓಲೆ ಗ್ರಂಥಗಳು, ಪವಾಡ ಪುರಷ ಮರಿಸ್ವಾಮಿಗಳು ರಚಿಸಿರುವ ದೇವಿ ಪುರಾಣ ಸೇರಿದಂತೆ ಬಯಲು ನಾಟಕಗಳ ರಚನೆ, ಕುಂಬಾರ ಅಮರಣ್ಣ ಶಾಸ್ತ್ರಿಗಳಂತಹ ತತ್ವಜ್ಞಾನಿಗಳು ಬರೆದಂತಹ ಗ್ರಂಥಗಳು ಈ ಗ್ರಾಮದಲ್ಲಿ ಲಭ್ಯವಾಗಿವೆ ಎಂದರು.
ಕಸಾಪ ಮಸ್ಕಿ ಘಟಕದ ಅಧ್ಯಕ್ಷ ಗುಂಡುರಾವ್ ದೇಸಾಯಿ ಅಧ್ಯಕ್ಷತೆ ವಹಿಸಿ, ಈ ಭಾಗದಲ್ಲಿ ಕಾಲೇಜುಗಳನ್ನು ಹುಟ್ಟುಹಾಕಿದ ಗ್ರಾಮ ಬಳಗಾನೂರು. ಸುಮಾರು 15 ಕಾಲೇಜುಗಳನ್ನು ಸ್ಥಾಪಿಸುವುದರ ಮೂಲಕ ಪ್ರಾಚಾರ್ಯ ಪಂಪಾಪತಿ ಗುತ್ತೇದಾರ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಗ್ರಾಪಂ ಉಪಾಧ್ಯಕ್ಷ ಎಚ್.ಮಹಾಬಳೇಶ ಮಾತನಾಡಿದರು. ಎಚ್.ಸುರೇಶ ಅನಿಸಿಕೆ ವ್ಯಕ್ತಪಡಿಸಿದರು.  ಮರಿದೇವಪ್ಪ ಅವರನ್ನು ಕಸಾಪ ಮಸ್ಕಿ ಘಟಕದಿಂದ ಸನ್ಮಾನಿಸಲಾಯಿತು.   ಗ್ರಾಪಂ ಅಧ್ಯಕ್ಷ ಗಿರಿಜಮ್ಮ ಗುತ್ತೇದಾರ,  ಅಮರಣ್ಣ ಜೀರಾಳ, ಡಾ. ಶರಭಯ್ಯ ಗಣಾಚಾರಿ, ಮೌನೇಶ ಆಚಾರ್ಯ, ಬಸವರಾಜ ವಿಶ್ವಕರ್ಮ ಸಂಗೀತ ಕಾರ್ಯಕ್ರಮ ನೀಡಿದರು. ಪಂಪಾಪತಿ-ಜಿ.ಮಲ್ಲನಗೌಡ ಸ್ವಾಗತಿಸಿ, ಪಂಪಣ್ಣ ನಿರೂಪಿಸಿ, ನಿರುಪಾದಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.