ರಾಯಚೂರು

ಶೇ.22.75 ಅನುದಾನ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅನಿಲ್ ಆಗ್ರಹ

Published On :

ರಾಯಚೂರು:  ನಗರಸಭೆ ಎಸ್ಸಿ,ಎಸ್ಟಿ ಜನಾಂಗದವರಿಗೆ ಮೀಸಲಿರಿಸಿದ ಶೇ. 22.75ರ ಅನುದಾನದ ಬಳಕೆಗೆ ಸರ್ಕಾ ಅನೇಕ ಮಾರ್ಗಸೂಚಿ ನಿಗದಿ ಮಾಡಿದ್ದರೂ, ಅವುಗಳೆಲ್ಲವನ್ನೂ ಮೀರಿ ದೋಷಪೂರಿತ ಕ್ರಿಯಾ ಯೋಜನೆ ಸಿದ್ಧಪಡಿಸಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ನವರತ್ನ ಯುವಕ ಸಂಘದ ಗೌರವಾಧ್ಯಕ್ಷ ಕೆ.ಪಿ. ಅನಿಲ್ ಕುಮಾರ್ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಶೇ.22.75ರ ಅನುದಾನದ ದೋಷಪೂರಿತ ಕ್ರಿಯಾ ಯೋಜನೆ ತಯಾರಿಕೆಯ ಅವಧಿಯಲ್ಲಿ ಪ್ರಭಾರಿ ಪೌರಾಯುಕ್ತರಾಗಿದ್ದ ಎಂ.ತಿಮ್ಮಪ್ಪ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ಅವರನ್ನು ತಪ್ಪಿತಸ್ಥರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಉಲ್ಲಂಘನೆ: 2011-12ನೇ ಸಾಲಿನ ಎಸ್‌ಎಸಿ ಅನುದಾನ, 2008ರಿಂದ 2011ರವರೆಗೆ ಶೇ.18ರ ಅನುದಾನದಲ್ಲಿ ವೆಚ್ಚವಾಗದೇ ಉಳಿದ ಅನುದಾನದ ಬಳಕೆಗೆ ಸಂಬಂಧಿಸಿ 2012ರ ಫೆ.22ರಂದು ತಯಾರಿಸಿದ ಕ್ರಿಯಾ ಯೋಜನೆಯಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂದು ಸಂಘ ದೂರಿತ್ತು.
ಈ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಹಾಲಿ ಜಿಲ್ಲಾಧಿಕಾರಿ ನಾಗರಾಜು ಅವರು 2013ರ ಜು.11ರಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅರಕ್ಷಕರಿಗೆ ಪತ್ರ ಬರೆದು, ಆಗಿನ ಪ್ರಭಾರಿ ಪೌರಾಯುಕ್ತ ಎಂ. ತಿಮ್ಮಪ್ಪ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ವಿರುದ್ಧ ಕರ್ತವ್ಯ ಲೋಪದ ಹಿನ್ನೆಲೆ ಕ್ರಮಕ್ಕೆ ಮನವಿ ಮಾಡಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.