ದೇಶದ ಪ್ರಗತಿಗೆ ಮೋದಿ ಚಿಂತನೆ ಅಗತ್ಯ: ರೇವುನಾಯಕ
ಅಫಜಲ್ಪುರ: ರಾಜ್ಯ ಮತ್ತು ದೇಶದ ಅಭಿವೃದ್ಧಿ ಹೊಂದಿ ಜನಸಾಮಾನ್ಯರು ಸುರಕ್ಷಿತವಾಗಿರಲು ಹಾಗೂ ದೇಶದ ಪ್ರತಿಯೊಬ್ಬ ನಾಗರಿಕನ ಹೊಟ್ಟೆ ತಣ್ಣಗಿರಿಸುವ ರೈತನ ಬಾಳು ಕತ್ತಲೆಯಿಂದ ಮುಕ್ತಿಗೋಳಿಸಲು ದೇಶಕ್ಕೆ ನರೇಂದ್ರ ಮೋದಿ ಅಗತ್ಯ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.
ತಾಲೂಕಿನ ಮಾಶಾಳ ಗ್ರಾಮದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್ ಸರ್ಕಾರ ವಾಣಿಜ್ಯ ಬೆಳೆಗಳಾದ ತೊಗರಿ, ಕಬ್ಬು ಸೇರಿದಂತೆ ಇತರೆ ಬೆಳೆಗಳ ಬೆಲೆ ನಿಗದಿ ಮಾಡದೇ, ದಿನ ನಿತ್ಯ ಉಪಯೋಗ ವಸ್ತುಗಳ ಬೇಲೆ ಗಗನಕ್ಕೆ ಏರಿಸುತ್ತ ಜನಸಾಮನ್ಯರು ನರಕಯಾತನೆ ಅನುಭವಿಸುವ ಸ್ಥಿತಿಗೆ ಕಾರಣವಾಗಿದೆ ಎಂದರು.
371(ಜೆ) ಕಲಂ ತಿದ್ದುಪಡಿಯಲ್ಲಿ ಬಿಜೆಪಿ ಹಾಗೂ ಅನೇಕ ಸಂಘಟನೆಗಳ ಪಾತ್ರವೂ ಪ್ರಮುಖವಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯ ಗುಲ್ಬರ್ಗದ ಕಡಗಂಚಿಗೆ ಸ್ಥಾಪಿಸಿದ್ದು ಯಡಿಯುರಪ್ಪ ಅವರ ನೇತೃತ್ವದಲ್ಲಿದ್ದ ಬಿಜೆಪಿ ಸರ್ಕಾರ. ಆದರೆ, ಕಾಂಗ್ರೆಸ್ಸಿಗರು ಎಲ್ಲವೂ ನಾವೇ ಮಾಡಿದ್ದೇವೆಂದು ಹೇಳುವುದರ ಜತೆಗೆ ತಮ್ಮದೇ ಖರ್ಚಿನಲ್ಲಿ ಸನ್ಮಾನಗಳನ್ನು ಮಾಡಿಕೊಂಡು ಜನಸಾಮನ್ಯರಿಗೆ ದಾರಿ ತಪ್ಪಿಸುತ್ತಿರುವುದು ವಿಪರ್ಯಾಸದ ಸಂಗತಿ. ಇದೆಲ್ಲವೂ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ನಿಂಗದಳ್ಳಿ ಮಾತನಾಡಿ, ನಮ್ಮ ನಾಡು, ನುಡಿ, ಭಾಷೆ, ಎಲ್ಲವೂ ಅಭಿವೃದ್ಧಿಯಿಂದ ದೇಶ ವಿಕಾಸಗೊಳ್ಳಲು ವಿಕಾಸಪುರುಷ ನರೇಂದ್ರ ಮೋದಿ ದೇಶ ಸೇವೆಗೆ ಅಗತ್ಯ ಎಂದು ಹೇಳಿದರು.
ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ, ಅಶೋಕ ಬಗಲಿ, ತಾಲೂಕು ಅಧ್ಯಕ್ಷ ರಮೇಶ ನಿಲಗಾರ, ತಾಲೂಕು ಉಸ್ತುವಾರಿ ಶೇಖರೆಡ್ಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಚಂದಮ್ಮ ಪಾಟೀಲ್, ಮುಕುಂದ ದೇಶಪಾಂಡೆ, ಮಲ್ಲು ಬಂಡಗಾರ, ಶೈಲೇಶ ಗುಣಾರಿ, ಶರಣಗೌಡ ಬಿರಾದಾರ, ಭೀಮಾಶಂಕರ ಪೂಜಾರಿ, ಮಲ್ಲು ಪಾಟೀಲ್, ಶಿವಬಸು ಕೋರಿ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

