ನ್ಯಾಯಬೆಲೆ ಅಂಗಡಿ ರದ್ದತಿಗೆ ಒತ್ತಾಯ
ಲಿಂಗಸ್ಗೂರು: ತಾಲೂಕಿನ ಹೂವಿನಬಾವಿ ಗ್ರಾಮದ ನ್ಯಾಯ ಬೆಲೆ ಅಂಗಡಿ ಮಾಲೀಕರು ಪಡಿತರದಾರರಿಗೆ ಸರಿಯಾಗಿ ಆಹಾರಧಾನ್ಯ ವಿತರಿಸುತ್ತಿಲ್ಲ. ಕೂಡಲೇ ಅಂಗಡಿ ರದ್ದುಗೊಳಿಸಿ ಬೇರೆಯವರಿಗೆ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ವಿಶ್ವನಾಥ ರೆಡ್ಡಿ ಪಡಿತರದಾರರಿಗೆ ಪ್ರತಿ ತಿಂಗಳು ಸರಿಯಾದ ರೀತಿಯಲ್ಲಿ ಪಡಿತರ ಆಹಾರಧಾನ್ಯ ಹಂಚುತ್ತಿಲ್ಲ. ಪಡಿತರ ಕಡಿಮೆ ಪ್ರಮಾಣದಲ್ಲಿ ಹಂಚುತ್ತಾರೆ. ಇದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು 3-4 ಬಾರಿ ತಮ್ಮ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಗ್ರಾಮದ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸಿ ಸಂಚಾರಿ ನ್ಯಾಯಬೆಲೆ ಅಂಗಡಿ ಒದಗಿಸಿ ಪಡಿತರ ಸರಿಯಾದ ರೀತಿಯಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗ್ರಾಮದ ಮುಖಂಡರಾದ ಅಯ್ಯಣ್ಣ ನಾಗರಬೆಂಚಿ, ದುರುಗಪ್ಪ, ಅಯ್ಯಾಳಪ್ಪ, ಅಂಬಣ್ಣ, ಗಂಗಪ್ಪ, ದುರುಗೇಶ, ಬೀರಪ್ಪ, ಸಿದ್ಧಪ್ಪ, ಸಿದ್ಧಲಿಂಗಪ್ಪ, ಅಮರೇಶ, ರಮೇಶ, ಆದಪ್ಪ ಸೇರಿದಂತೆ ಇದ್ದರು.
ಮದ್ಲಾಪುರ: ಪದಾಧಿಕಾರಿಗಳ ನೇಮಕ
ರಾಯಚೂರು: ಜಯ ಕರ್ನಾಟಕ ಸಂಘಟನೆಯ ಮದ್ಲಾಪುರ ಗ್ರಾಮ ಘಟಕದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಗ್ರಾಮದ ಘಟಕಕ್ಕೆ ಗೌರವಾಧ್ಯಕ್ಷರಾಗಿ ವೀರಭದ್ರಪ್ಪ ವಿಶ್ವಕರ್ಮ, ಗೌರವ ಕಾರ್ಯದರ್ಶಿಯಾಗಿ ಅಳ್ಳಪ್ಪ ನಾಯಕ, ಅಧ್ಯಕ್ಷರಾಗಿ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಮಾರೆಣ್ಣ ನಾಯಕ, ಉಪಾಧ್ಯಕ್ಷರಾಗಿ ಗಂಗಾಧರ ಭಜಂತ್ರಿ, ನೆಂಬೆಯ್ಯ ಸ್ವಾಮಿ, ಕಾರ್ಯದರ್ಶಿಯಾಗಿ ಮಹಾದೇವ ನಾಯಕ ಆಯ್ಕೆಯಾಗಿದ್ದಾರೆ. ಅದೇ ರೀತಿ ಸದಸ್ಯರಾಗಿ ಬಸವರಾಜ ಬೋವಿ, ರವಿಕುಮಾರ್, ರಾಜಶೇಖರ್ ವಿಶ್ವಕರ್ಮ, ಬಸವಲಿಂಗಯ್ಯಸ್ವಾಮಿ, ಹುಸೇನ್ ಸಾಬ್, ಹುಸೇನ್ ಬಾಷಾ, ಮೌನೇಶ ವಿಶ್ವಕರ್ಮ ನೇಮಕಗೊಂಡಿದ್ದಾರೆಂದು ಸಂಘಟನೆಯ ತಾಲೂಕು ಅಧ್ಯಕ್ಷ ಗುರುರಾಜ ನಾಗ್ಲಾಪೂರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

