ಬಿಜೆಪಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ
ರಾಯಚೂರು: ಬಿಜೆಪಿ ನಗರ ಘಟಕದ ಪದಾಧಿಕಾರಿಗಳನ್ನು ಈಚೆಗೆ ಪಕ್ಷದ ವರಿಷ್ಠರು ಸಭೆ ಸೇರಿ ಆಯ್ಕೆ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷವು ನಗರ ಘಟಕಕ್ಕೆ ಅಧ್ಯಕ್ಷರಾಗಿ ನರಸಪ್ಪ ಯಕ್ಲಾಸಪುರ ಆಯ್ಕೆಯಾಗಿದ್ದಾರೆ. ಅದೇ ರೀತಿ ಉಪಾಧ್ಯಕ್ಷರಾಗಿ ಎಂ. ತಿಮ್ಮಾರೆಡ್ಡಿ, ಚಂದ್ರಶೇಖರ್ ಮಡಿವಾಳ, ಬುಗ್ಗಾರೆಡ್ಡಿ ದೇವನಪಲ್ಲಿ, ನಾಗನಗೌಡ ಗಣದಿನ್ನಿ, ಸತೀಶ್ ಶೆಟ್ಟಿ, ಸುಮತೀ ಶಾಸ್ತ್ರಿ, ರಾಮಕಿಶೋರ ತಿವಾರಿ ನೇಮಕಗೊಂಡಿದ್ದಾರೆಂದು ತಿಳಿಸಿದೆ.
ಹಾಗೆಯೇ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಕಡಗೋಳ, ಆಂಜನೇಯ ಯಕ್ಲಾಸಪುರ, ಕಾರ್ಯದರ್ಶಿಗಳಾಗಿ ಪ್ರದೀಪ್ ಸಾನಬಾಳ, ಜೆ.ಎಲ್. ವೀರೇಶ್, ಬಸವರಾಜ ಅಸ್ಕಿಹಾಳ, ಸುರೇಶರೆಡ್ಡಿ ಪಟ್ಟೇದಾರ್, ನವಾಬ್ ಯರಮರಸ್, ಮಹೇಶ್ವರಿ ಕೃಷ್ಣಮೂರ್ತಿ ನೇಮಕಗೊಂಡಿದ್ದಾರೆ.
ಖಜಾಂಚಿಯಾಗಿ ವೃಷಭ್ ಬೊಹರಾ, ಕಾರ್ಯಾಲಯ ಕಾರ್ಯದರ್ಶಿಯಾಗಿ ಅಶ್ವತ್ಥ ರಾಜಪುರೋಹಿತ್, ಮಾಧ್ಯಮ ಪ್ರಮುಖರಾಗಿ ಕೃಷ್ಣಮೂರ್ತಿ ಕಲಾಲಬಂಡಿ, ಯುವಮೋರ್ಚಾ ಅಧ್ಯಕ್ಷ ದುರ್ಗೇಶ್, ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಮುದಗಲ್, ಭರತ್ ಅಂಗಡಿ, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ರವಿರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಮಾರೆಪ್ಪ, ಅಲ್ಪಸಂಖ್ಯಾತರ ಘಟಕಕ್ಕೆ ಅಧ್ಯಕ್ಷರಾಗಿ ಅಕ್ಬರ್ ಬಾಷಾ, ಪ್ರಧಾನ ಕಾರ್ಯದರ್ಶಿಯಾಗಿ ಶಹಾನವಾಜ್ ಪರಕೋಟಾ, ಮಹ್ಮದ್ ಆಯ್ಕೆಯಾಗಿದ್ದಾರೆಂದು ತಿಳಿಸಿದೆ.
ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ರಾಮಣ್ಣ ನಾಯಕ ವಕೀಲರು, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಶಿವಂಗಿ ವಕೀಲರು, ಸ್ಲಂ ಮೋರ್ಚಾ ಅಧ್ಯಕ್ಷರಾಗಿ ಈರಣ್ಣ ಮ್ಯಾದಾರವಾಡಿ ನೇಮಕಗೊಂಡಿದ್ದು, ಮೀನುಗಾರಿಕೆ ವೇದಿಕೆ ಸಂಚಾಲಕರಾಗಿ ದೊಡ್ಡ ಭೀಮಣ್ಣ, ಐಟಿ ಸೆಲ್ಗೆ ವೆಂಕಟೇಶ ಉಪ್ಪಾರ್, ನಿವೃತ್ತ ನೌಕರರ ವೇದಿಕೆ ಸಂಚಾಲಕರಾಗಿ ಗುರುರಾಜರಾವ್, ವೇದಿಕೆಯ ಸಹಸಂಚಾಲಕರಾಗಿ ಸೀತಾಕಾಂತರಾವ್ ನೇಮಕಗೊಂಡಿದ್ದಾರೆಂದು ಪಕ್ಷದ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

