ಸಮಾಜದ ಕಾರ್ಯಕ್ರಮಗಳಲ್ಲಿ ವಿಪ್ರರು ತಪ್ಪದೇ ಪಾಲ್ಗೊಳ್ಳಲಿ
ಸಿಂಧನೂರು: ವಿಪ್ರ ಸಮಾಜ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ತೊಡಗುವಂತೆ ವಿಪ್ರಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಕೆ. ಗೌರಕರ ಕರೆ ನೀಡಿದರು.
ಶನಿವಾರ ತಾಲೂಕಿನ ರವುಡಕುಂದಾ ಗ್ರಾಮದಲ್ಲಿ ಶ್ರಾವಣ ಮಾಸದ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿಪ್ರಶ್ರೀ ಪ್ರಶಸ್ತಿ ಲಭಿಸಿರುವುದು ಎಲ್ಲರ ಸಹಕಾರದಿಂದ. ಇದು ತಮಗೆ ಸಿಕ್ಕ ಪ್ರಶಸ್ತಿಯಲ್ಲ. ತಾಲೂಕಿನ ಎಲ್ಲಾ ವಿಪ್ರ ಬಾಂಧವರ ಪ್ರಶಸ್ತಿಯಾಗಿದೆ. ವಿಪ್ರ ಸಮುದಾಯ ಸಮಾಜದ ಬಗೆಗಿನ ಬದ್ದತೆಯನ್ನು ಇಟ್ಟುಕೊಂಡು ಸರ್ವಜನರ ಏಳ್ಗಿಗೆಗೆ ಶ್ರಮಿಸಲಿ ಎಂದರು.
ರವುಡಕುಂದಾ ವಿಎಸ್ಎಸ್ಎನ್ ನಿವೃತ್ತ ವ್ಯವಸ್ಥಾಪಕ ಎಚ್.ಕಲ್ಯಾಣಪ್ಪ, ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಆದಿತ್ಯ ನಾರಾಯಣ ಪತ್ತಿನ ಸೌಹಾರ್ದ ನಿಯಮಿತದ ಅಧ್ಯಕ್ಷ ವೆಂಕಟೇಶ ಕೆಂಗಲ್, ರಾಯಚೂರಿನ ಆರ್.ಎನ್. ಜೋಷಿ, ಪತ್ರಕರ್ತ ಪ್ರಹ್ಲಾದ ಗುಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವಮುಖಂಡ ರಾಜೇಂದ್ರಗೌಡ ಬಾದರ್ಲಿ, ಡಾ. ಆರ್.ವಿ. ಜೋಷಿ, ದಳಪತಿ ಹೊನ್ನೂರಸಾಬ ರೌಡಕುಂದಾ ಸೇರಿದಂತೆ ಎಲ್ಲಾ ಅತಿಥಿಗಳನ್ನು ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ರಂಗನಾಥರಾವ್ ಕುಲಕರ್ಣಿ, ಅಧ್ಯಕ್ಷ ರಾಘವೇಂದ್ರರಾವ್ ಕುಲಕರ್ಣಿ ಸನ್ಮಾನಿಸಿದರು.
ಪ್ರಾಸ್ತಾವಿಕ ಯುವಕಾಂಗ್ರೆಸ್ ತಾಲೂಕ ಉಪಾಧ್ಯಕ್ಷ ಬಸವರಾಜ ಹಿರೇಗೌಡರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ನರಸಿಂಗರಾವ್ ಚನ್ನಳ್ಳಿ, ತಿರುಮಲರಾವ್ ಕುಲಕರ್ಣಿ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ರವಿಂದ್ರ, ಗೋಪಾಲರಾವ್ ಕುಲಕರ್ಣಿ, ವೆಂಕಟರಾವ್ ಚನ್ನಳ್ಳಿ ಭಾಗವ ಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರಭಾಕರ ಕುಲಕರ್ಣಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

