ರಾಯಚೂರು

ಎಸ್‌ಬಿಎಚ್ ನವೀಕೃತ ಕಚೇರಿ ಉದ್ಘಾಟನೆ

Published On :

ರಾಯಚೂರು: ನಗರದ ಐಬಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್‌ನ ಪ್ರಾದೇಶಿಕ ಕಾರ್ಯಾಲಯದ ನವೀಕೃತ ಕಟ್ಟಡದ ಉದ್ಘಾಟನೆ ಸಮಾರಂಭ ಸೆ.7ರಂದು ಆಯೋಜಿಸಲಾಗಿದೆ.  ಬೆಳಗ್ಗೆ 11.30ಕ್ಕೆ ಸಮಾರಂಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಭಗವಂತರಾವ್, ಪ್ರಧಾನ ಕಚೇರಿ ಹೈದ್ರಾಬಾದಿನ ಪ್ರಧಾನ ವ್ಯವಸ್ಥಾಪಕ ಬಿ.ಗಣೇಶ ಪೈ, ಗುಲ್ಬರ್ಗ ವಲಯ ಕಾರ್ಯಾಲಯದ ಉಪ ಪ್ರಧಾನ ವ್ಯವಸ್ಥಾಪಕ ಎಲ್.ವಿ. ರವೀಂದ್ರ ಕುಮಾರ್ ಇರುವರು.
ನಿಧಿ ತೆಗೆದು ಪರಾರಿ; ತನಿಖೆಗೆ ಒತ್ತಾಯ
ರಾಯಚೂರು: ರಾಯಚೂರು ತಾಲೂಕಿನ ಮರ್ಚೇಡ್ ಗ್ರಾಮದ ಕೋಟಾಳಬಾಯಿ ಹನುಮನಗುಡಿ ಹತ್ತಿರ ಸೆ.1ರಂದು ಭಾನುವಾರ ಮಧ್ಯರಾತ್ರಿ ಅಪರಿಚಿತರು ಪೋಕ್‌ಲೈನ್ ಮೂಲಕ ತಗ್ಗು ಅಗೆದು ನಿಧಿ ತೆಗೆದು ಪರಾರಿಯಾಗಿದ್ದು, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಮನ್ಸಲಾಪುರ ಗ್ರಾಪಂ ವ್ಯಾಪ್ತಿಯ ಮರ್ಚೇಡ್ ಗ್ರಾಮದಲ್ಲಿ ಕೋಟಾಳಬಾಯಿ ಹನುಮನಗುಡಿ ಹತ್ತಿರ ತಗ್ಗು ಅಗೆದು ಅಲ್ಲಿ ಸಿಕ್ಕಿರುವ ನಿಧಿ ತೆಗೆದು ಹೋಗಿದ್ದು, ಸಂಘಟನೆಯಿಂದ ಆ.25ರಂದು ಮರ್ಚೇಡ್ ಗ್ರಾಮದಲ್ಲಿ ಅರಣ್ಯ ನಾಶ ಹಾಗೂ ಐತಿಹಾಸಿಕ ಸ್ಥಳದಲ್ಲಿ ನಿಧಿ ಶೋಧ ನಡೆಯುತ್ತಿದೆ. ಇದನ್ನು ತಡೆಗಟ್ಟುವಂತೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ತೋರಿದ ಪರಿಣಾಮ ಈ ಕೃತ್ಯ ಜರುಗಿದೆ. ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸಿ ನಿಧಿ ತೆಗೆದು ಹೋದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ವೇದಿಕೆ ಜಿಲ್ಲಾಧ್ಯಕ್ಷ ಬಿ.ಗಂಗಾಧರಸ್ವಾಮಿ, ಮುಖಂಡರಾದ ಮಹೆಬೂಬ, ಮಾರೆಪ್ಪ, ಸಿದ್ರಾಮ ಸಿಂಧ್ಯೆ, ಕುತುಬುದ್ದಿನ್, ರಾಜಶೇಖರ, ಶಬ್ಬೀರ, ಭೀಮಣ್ಣ, ಇಬ್ರಾಹಿಂ, ಮಹ್ಮದ, ಹಸನ ಸೇರಿದಂತೆ ಇದ್ದರು.
ಪೂರ್ವಭಾವಿ ಸಭೆ
ರಾಯಚೂರು: ಹೈ-ಕ ವಿಮೋಚನಾ ದಿನಾಚರಣೆಯು ಸೆ.17ರಂದು ನಡೆಯಲಿರುವ ಹಿನ್ನೆಲೆ ಪೂರ್ವಭಾವಿ ಸಭೆಯನ್ನು ಸೆ.7ರಂದು ಕರೆಯಲಾಗಿದೆ. ನಗರದ ಡಿಸಿ ಕಚೇರಿಯಲ್ಲಿ ಅಂದು ಬೆಳಿಗ್ಗೆ 11ಕ್ಕೆ ಈ ಸಭೆ ನಡೆಯಲಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.