ರಾಯಚೂರು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು- ವರರು

Published On :

ಸಿಂಧನೂರು: ನಗರದ ವಾರ್ಡ್ ನಂ.24ರಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತ ಒಳಬಳ್ಳಾರಿ ಚನ್ನಬಸವ ತಾತನ ಪುರಾಣ ಮಂಗಲೋತ್ಸವದ ಕಾರ್ಯಕ್ರಮದಲ್ಲಿ 6 ಸಾಮೂಹಿಕ ವಿವಾಹಗಳು ಜರುಗಿದವು.
ಬೆಳಗಿನ ಜಾವ ಕೋಟೆ ವೀರೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜೆ ನೆರವೇರಿತು. ಸುಮಂಗಲೆಯರಿಂದ ಕುಂಭ, ಕಳಸ ಮತ್ತು ವೀರಗಾಸೆ ಕುಣಿತ, ಭಜನ ಮಂಡಳಿಯಿಂದ ವಾಸವಿ ನಗರ, ಚನ್ನಮ್ಮ ವೃತ್ತ, ಗಾಂಧಿವೃತ್ತ, ಟಿಪ್ಪುಸುಲ್ತಾನ್ ವೃತ್ತ, ಬಡಿಬೇಸ್ ಹೀಗೆ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಸದಸ್ಯ ಶರಣೆಗೌಡ ಬೆನ್ನೂರು ಮಾತನಾಡಿದರು.
 ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಜಿಪಂ ಸದಸ್ಯೆ ಶಾಂತ ದಯಾನಂದ ರೆಡ್ಡಿ,ಅಮರಯ್ಯ ಸ್ವಾಮಿ ಒಳಬಳ್ಳಾರಿ, ತಿಪ್ಪಯ್ಯಸ್ವಾಮಿ, ನಾಗಪ್ಪ ಹೊಸಮನಿ, ಶಿಕ್ಷಕ ದೊರೆಯ್ಯಸ್ವಾಮಿ, ವೀರಭದ್ರಪ್ಪ ಗಸ್ತಿ, ಮಹಾಂತಪ್ಪ ಯರದಿಹಾಳ, ಬಸ್ಸಪ್ಪಯ್ಯ ಸಾಲಿಮಠ ಮತ್ತು ಕೋಟೆಯ ಗೆಳೆಯರ ಬಳಗದ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.