ಬದುಕು ಕಲಿಸುವವನೇ ಶಿಕ್ಷಕ: ಯಾಳಗಿ
ಸಿಂಧನೂರು: ಅಕ್ಷರದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ಕಲಿಸುವವನೇ ನಿಜವಾದ ಶಿಕ್ಷಕ ಎಂದು ಉಪನ್ಯಾಸಕ ಹಾಗೂ ಸಾಹಿತಿ ರಮೇಶ ಬಾಬು ಯಾಳಗಿ ಹೇಳಿದರು. ನಗರದ ಕಮ್ಮಾವಾರಿ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ನಿಮಿತ್ತ ಲಯನ್ಸ್ ಕ್ಲಬ್ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಗುಣಾತ್ಮಕವಾದ ಶಿಕ್ಷಣ ನೀಡುವುದು, ಸಮರ್ಪಣಾ ಭಾವದಿಂದ ದುಡಿಯುವುದು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು, ಆತ್ಮವಿಶ್ವಾಸ ತುಂಬುವುದು. ಶಿಕ್ಷಕರಿಗೆ ನಡೆ- ನುಡಿಗಳೇ ಸಿದ್ಧಾಂತವಾಗಬೇಕಿದೆ. ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಯೋಜನೆಗಳ ಪಟ್ಟಿಯ ಅನುಷ್ಠಾನದ ಜೊತೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವುದು ಒಂದು ಸವಾಲು ಆಗಿದೆ ಎಂದರು.
ಲೋಪದೋಷ ತಿದ್ದಿಕೊಳ್ಳಿ: ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸರ್ಕಾರ ಗುಣಮಟ್ಟದ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿ, ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ.
ಆದರೂ ಸಮಾಜಮುಖಿಯಾದ ಶಿಕ್ಷಣ ಬರುತ್ತಿಲ್ಲ. ಇಲ್ಲಿ ಕೇವಲ ಶಿಕ್ಷಕರ ತಪ್ಪಲ್ಲ. ವಿದ್ಯಾರ್ಥಿಗಳು, ಪಾಲಕರು ತಮ್ಮ ಲೋಪದೋಷಗಳನ್ನು ತಿದ್ದಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಬದಲಾವಣೆ ತರುವವನೇ ನಿಜವಾದ ಶಿಕ್ಷಕ. ನಿಷ್ಠೆ, ಪ್ರಾಮಾಣಿಕತೆ, ಸಾಮಾಜಿಕ ಸೇವಾಭಾವ ಕಾರ್ಯಗತಗೊಳಿಸಬೇಕು. ಡಾ. ರಾಧಾಕೃಷ್ಣನ್ ಅವರು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದರೂ, ಇಡೀ ದೇಶಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ತ್ಯಾಗಮಯಿಯಾದ ಗುರುವಿನ ಸ್ಥಾನ ಯಾರಿಗೂ ಸಿಗುವುದಿಲ್ಲ ಎಂದರು.
ಕಟ್ಟಡ ನಿರ್ಮಾಣಕ್ಕೆ ಅನುದಾನ: ಲಯನ್ಸ್ ಕ್ಲಬ್ ಉತ್ತಮ ಶಿಕ್ಷಕರನ್ನು ಗುರುತಿಸಿ, ಸನ್ಮಾನಿಸುವ ಜೊತೆಯಲ್ಲಿ ಇನ್ನಷ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಅಣಿಗೊಳಿಸುತ್ತಿದೆ ಎಂದು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಲಯನ್ಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಹೇಳಿದರು.
ಕ್ಲಬ್ನ ಅಧ್ಯಕ್ಷ ಗೌತಮ್ ಮೆಹ್ತಾ ಅಧ್ಯಕ್ಷತೆ ವಹಿಸಿದ್ದರು. ರಿಜನಲ್ ಚೇರ್ ಪರ್ಸನ್ ಕೈಲಾಸ್ ಜೈನ್, ಕಾರ್ಯದರ್ಶಿ ನಾಗರಾಜ ಎಂ, ಖಜಾಂಚಿ ಕಿರಣ್ ಜೈನ್ ವೇದಿಕೆಯಲ್ಲಿದ್ದರು.
ಸನ್ಮಾನ: ಉತ್ತಮ ಶಿಕ್ಷಕರೆಂದು ಬಡಿಬೇಸ್ ಶಾಲೆಯ ರೇಖಾವತಿ ಭೋಗಾಪುರ ಶಾಲೆಯ ಬಸವರಾಜ, ಎಂಎಚ್ಪಿಎಸ್ ಶಾಲೆಯ ಶ್ರೀಶೈಲಕೌದಿ, ಮೀನಾಕ್ಷಿ ಶಾಲೆಯ ಚಂದ್ರಕಲಾ ಪ್ರಕಾಶ, ನೂತನ ಶಾಲೆಯ ಸುಜಾತ ಇಸ್ಮಾಯಿಲ್, ದುದ್ದುಪೂಡಿ ಶಾಲೆಯ ಪ್ರದೀಪ್ ಸರ್ಕಾರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

