ರಾಯಚೂರು

ವರುಣನ ರುದ್ರನರ್ತನಕ್ಕೆ ವ್ಯಕ್ತಿ ಬಲಿ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಸೆ.11
ನಗರ ಸೇರಿ ಜಿಲ್ಲಾದ್ಯಂತ ಮಂಗಳವಾರ ರಾತ್ರಿಯೂ ಮಳೆ ಸುರಿದಿದ್ದು, ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆ ಸಿಂಧನೂರು ತಾಲೂಕಿನ ವಲ್ಕಂದಿನ್ನಿ ಗ್ರಾಮದಲ್ಲಿ 96.4 ಮಿಮೀ.ನಷ್ಟು ಸುರಿದಿದೆ. ಧಾರಾಕಾರ ಮಳೆ ರಾಯಚೂರು ತಾಲೂಕಿನ ಜೆ.ಮಲ್ಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದೆ.
ನಗರದಲ್ಲಿ ಮಂಗಳವಾರ ರಾತ್ರಿ ಸಹ ಧಾರಾಕಾರ ಮಳೆ ಸುರಿಯಿತು. ಅದರಿಂದಾಗಿ ನಗರದಲ್ಲಿ ಕೆಲಹೊತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಜನತೆ ಪರದಾಡಿದರು. ರಾತ್ರಿ ವೇಳೆ ಮಳೆಯಾಗಿದ್ದರಿಂದ ಮಾರುಕಟ್ಟೆ ಮತ್ತಿತರೆ ಪ್ರದೇಶಗಳಿಗೆ ತೆರಳಿದ್ದ ಜನತೆ ಮನೆಗಳಿಗೆ ಮರಳಲು ಪ್ರಯಾಸಪಟ್ಟರು.
ರಸ್ತೆ ಸಂಚಾರ ಸ್ಥಗಿತ: ನಗರದಲ್ಲಿ ಚರಂಡಿ ನೀರು ರಸ್ತೆಗೆ ನುಗ್ಗಿದ್ದರಿಂದ ಬಹುತೇಕ ಎಲ್ಲ ಕಡೆ ರಸ್ತೆ ಸಂಚಾರಕ್ಕೆ ವ್ಯತ್ಯಯವಾಯಿತು. ನಗರದ ಚಂದ್ರ ಮೌಳೇಶ್ವರ ವೃತ್ತ, ತೀನ್ ಕಂದೀಲ್, ರೇಲ್ವೆಸ್ಟೇಷನ್ ರಸ್ತೆ ಸೇರಿ ನಗರದ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ಹರಿಯತೊಡಗಿದ್ದರಿಂದ ಜನತೆ ಹಾಗೂ ವಾಹನ ಸವಾರರು ಪರದಾಡಿದರು. ಈ ಮಧ್ಯೆ ನಗರ ಸೇರಿ ಜಿಲ್ಲಾದ್ಯಂತ ಗಣೇಶೋತ್ಸವದ ಸಂಭ್ರಮಕ್ಕೆ ಧಾರಾಕಾರ ಮಳೆಯಿಂದ ಅಡ್ಡಿಯಾಯಿತು. ಗಣೇಶ ವೀಕ್ಷಿಸಲು ತೆರಳಿದ್ದ ಸಾರ್ವಜನಿಕರು ಮಳೆಯಲ್ಲಿಯೇ ಮನೆ ಸೇರುವಂತಾಯಿತು. ರಾಯಚೂರು ತಾಲೂಕಿನ ಜೆ.ಮಲ್ಲಾಪುರದಲ್ಲಿ ಮನೆ ಚಾವಣಿ ಕುಸಿದು ನಾಗಪ್ಪ ಕಬ್ಬೇರ್(35) ಎಂಬಾತ ಕೊನೆಯುಸಿರೆಳೆದಿದ್ದಾನೆ.
ಕೊಚ್ಚಿ ಹೋದ ಸೇತುವೆ: ಜಿಲ್ಲೆಯ ಮಾನವಿ ತಾಲೂಕಿನ ಲಕ್ಕಂದಿನ್ನಿ ಗ್ರಾಮದ ಸಂಪರ್ಕ ಸೇತುವೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುವ ಮೂಲಕ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮದಲ್ಲಿ ಎರಡು ಮನೆಗಳು ಬಿದ್ದಿವೆ. ರಾಯಚೂರು ತಾಲೂಕಿನ ಮೀರಾಪುರ ಗ್ರಾಮದ ಬಳಿಯ ಹಳ್ಳ ಉಕ್ಕಿ ಹರಿದಿದ್ದರಿಂದ ಅರಷಿಣಗಿ- ಮೀರಾಪುರ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಾಗೆಯೇ ಗುರ್ಜಾಪುರ- ರಾಯಚೂರು ಮಧ್ಯದ ಸೇತುವೆಗೆ ಹೊಂದಿಕೊಂಡ ಮಣ್ಣು ಕೊಚ್ಚಿ ಹೋಗಿ ಸಂಚಾರ ಸ್ಥಗಿತಗೊಂಡಿದೆ. ಹೆಂಬೆರಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ 200 ಮೀಟರ್ ರಸ್ತೆ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಹಾಳಾಗಿದೆ.
ಬೆಳೆ, ಮನೆ ಹಾನಿ ಸಮೀಕ್ಷೆ ಆರಂಭ: ಈ ಕುರಿತು “OÚ«Ú­sÚ®ÚúڒOæQ ಮಾತನಾಡಿದ ತಹಸೀಲ್ದಾರ್ ಶಹಾನೂರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಿಂದಾದ ಹಾನಿಯ ಅಂದಾಜು ಕಾರ್ಯ ಆರಂಭಗೊಂಡಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಬೆಳೆ ಮತ್ತು ಮನೆ ಹಾನಿ ಕುರಿತು ಸಮೀಕ್ಷೆ ಕೈಗೊಳ್ಳುತ್ತಿದ್ದಾರೆ. ಈ ಕುರಿತು ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ ಎಂದಿದ್ದಾರೆ. ಈ ಮಧ್ಯೆ ಮಂಗಳವಾರ ರಾತ್ರಿ ನಗರದಲ್ಲಿ 16.8 ಮಿಮೀ ಮಳೆಯಾಗಿದೆ. ರಾಯಚೂರು ತಾಲೂಕಿನ ಯರಮರಸ್ನಲ್ಲಿ 17.5 ಮಿಮೀ, ಗಿಲ್ಲೆಸೂಗೂರು- 19 ಮಿಮೀ, ಜೇಗರಕಲ್- 22 ಮಿಮೀ, ಗಾಜರಾಳ-38.2 ಮಿಮೀ, ದೇವಸೂಗೂರು-12.8 ಮಿಮೀ ಹಾಗೂ ಚಂದ್ರಬಂಡಾದಲ್ಲಿ 20 ಮಿಮೀ.ನಷ್ಟು ಮಳೆಯಾಗಿದೆ. ಮಾನವಿ ಪಟ್ಟಣದಲ್ಲಿ 18.5 ಮಿಮೀ, ಕುರ್ಡಿಯಲ್ಲಿ 17.2 ಮಿಮೀ, ಕಲ್ಲೂರು- 4.6 ಮಿಮೀ, ಸಿರವಾರ- 26.4 ಮಿಮೀ, ಮಲ್ಲಟ- 4 ಮಿಮೀ, ಕುರುಕುಂದಾ- 4 ಮಿಮೀ, ಕವಿತಾಳ- 23.4 ಮಿಮೀ, ಹಾಲಾಪುರ- 12 ಮಿಮೀ ಮಳೆಯಾಗಿದೆ. ದೇವದುರ್ಗದಲ್ಲಿ 4.4 ಮಿಮೀ, ಗಲಗ- 2 ಮಿಮೀ, ಗಬ್ಬೂರು- 42.2 ಮಿಮೀ, ಅರಕೇರಾ- 28 ಮಿಮೀ, ಜಾಲಹಳ್ಳಿಯಲ್ಲಿ 5 ಮಿಮೀ ಮಳೆ ಬಿದ್ದಿದೆ. ಇನ್ನು ಲಿಂಗಸ್ಗೂರು ತಾಲೂಕಿನ ಹಟ್ಟಿಯಲ್ಲಿ 41 ಮಿಮೀ, ಮಸ್ಕಿಯಲ್ಲಿ 1.2 ಮಿಮೀ, ಮುದಗಲ್ನಲ್ಲಿ 1.8 ಮಿಮೀ ಮಳೆ ಬಿದ್ದಿದೆ. ಸಿಂಧನೂರು ನಗರದಲ್ಲಿ 16.3 ಮಿಮೀ ಮಳೆ ಸುರಿದರೆ ಅದೇ ತಾಲೂಕಿನ ಜವಳಗೇರಾ- 69 ಮಿಮೀ, ಸಾಲಗುಂದಾ- 23.4 ಮಿಮೀ, ಬಳಗಾನೂರು- 6 ಮಿಮೀ, ಗುಡದೂರು- 3.2 ಮಿಮೀ, ತುರ್ವಿಹಾಳ-23 ಮಿಮೀ, ವಲ್ಕಂದಿನ್ನಿ- 94.6 ಮಿಮೀ, ಗುಂಜಳ್ಳಿ- 7 ಮಿಮೀ, ಜಾಲಿಹಾಳ- 22.2 ಮಿಮೀ ಹಾಗೂ ಹೆಡಗಿನಾಳದಲ್ಲಿ 32.6 ಮಿಮೀ.ನಷ್ಟು ಮಳೆ ಸುರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.